ಪ್ರವೀಣ್‌ ಕುಮಾರ್ ವುಶು ವಿಶ್ವ ಚಾಂಪಿಯನ್‌!

ವುಶು ವಿಶ್ವ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಹರ್ಯಾಣದ ಪಟು ಪ್ರವೀಣ್ ಕುಮಾರ್ ಚಿನ್ನ ಗೆಲ್ಲುವ ಮೂಲಕ ಇತಿಹಾಸ ಬರೆದಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ.. 

Wushu World Championship 2019 Praveen Kumar Bags Gold

ಶಾಂಘೈ (ಅ.24): ಭಾರತದ ಪ್ರವೀಣ್‌ ಕುಮಾರ್‌, ಬುಧ​ವಾರ ಇಲ್ಲಿ ನಡೆದ ವುಶು ವಿಶ್ವ ಚಾಂಪಿಯನ್‌ಶಿಪ್‌ನ 48 ಕೆ.ಜಿ ವಿಭಾಗದ ಫೈನಲ್‌ನಲ್ಲಿ ಜಯ​ಭೇರಿ ಬಾರಿ​ಸುವ ಮೂಲಕ ಚಿನ್ನಸ ಪದಕ ಜಯಿ​ಸಿ​ದರು. ವಿಶ್ವ ಚಾಂಪಿ​ಯನ್‌ ಆದ ಭಾರ​ತದ ಮೊದಲ ಪುರುಷ ಹಾಗೂ ಒಟ್ಟಾರೆ 2ನೇ ಕ್ರೀಡಾ​ಪ​ಟು ಎನಿ​ಸಿ​ಕೊಂಡರು.

ಫ್ರೆಂಚ್‌ ಓಪನ್‌ 2019: ದ್ವಿತೀಯ ಸುತ್ತಿಗೇರಿದ ಸೈನಾ

ಫೈನಲ್‌ನಲ್ಲಿ ಪ್ರವೀಣ್‌, ಫಿಲಿಪೈನ್ಸ್‌ನ ರಸೆಲ್‌ ಡಯಾಜ್‌ರನ್ನು 2-1ರಲ್ಲಿ ಮಣಿಸಿ ಚಿನ್ನದ ಪದಕಕ್ಕೆ ಕೊರ​ಳೊ​ಡ್ಡಿ​ದರು. ಮಂಗಳವಾರ ನಡೆದಿದ್ದ ಸೆಮಿಫೈನಲ್‌ನಲ್ಲಿ ಉಜ್ಬೇಕಿಸ್ತಾನದ ಖಾಸನ್‌ ಇಕ್ರೊಮೊವ್‌ ವಿರುದ್ಧ 2-0ರಲ್ಲಿ ಪ್ರವೀಣ್‌ ಗೆದ್ದಿ​ದ್ದರು. 

2017ರಲ್ಲಿ ಚಿನ್ನ ಗೆದ್ದಿದ್ದ ಪೂಜಾ ಕಡಿಯಾನ್‌ ವಿಶ್ವ ಚಾಂಪಿಯನ್‌ ಆದ ಮೊದಲ ಭಾರತೀಯ ವುಶುಪಟು ಎಂಬ ದಾಖಲೆ ಬರೆದಿದ್ದರು.
 

Latest Videos
Follow Us:
Download App:
  • android
  • ios