ವಾಷಿಂಗ್ಟನ್(ಅ.13): ಈ ವರ್ಷದ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಮ್ ಗೆದ್ದ ಪೋಲೆಂಡ್‌ನ 19 ವರ್ಷದ ಟೆನಿಸ್ ಆಟಗಾರ್ತಿ ಇಗಾ ಸ್ವಿಟೆಕ್ ಡಬ್ಲ್ಯೂಟಿಎ ರ‍್ಯಾಂಕಿಂಗ್‌ನಲ್ಲಿ 17ನೇ ಸ್ಥಾನಕ್ಕೇರಿದ್ದಾರೆ. 

ಸೋಮವಾರ ನೂತನವಾಗಿ ಬಿಡುಗಡೆಯಾದ ಟೆನಿಸ್ ರ‍್ಯಾಂಕಿಂಗ್‌ನಲ್ಲಿ ಸ್ವಿಟೆಕ್ 37 ಸ್ಥಾನ ಜಿಗಿತ ಕಂಡಿದ್ದಾರೆ. ಸ್ವಿಟೆಕ್‌ಗೆ ಇದು ಜೀವನಶ್ರೇಷ್ಠ ಸಾಧನೆಯಾಗಿದೆ. ಆಸ್ಟ್ರೇಲಿಯಾದ ಆಶ್ಲೆ ಬಾಟಿ ನಂ.1 ಸ್ಥಾನ ಉಳಿಸಿಕೊಂಡಿದ್ದರೆ, ಸಿಮೊನಾ ಹಾಲೆಪ್, ನವೊಮಿ ಒಸಾಕ ನಂತರದ ಸ್ಥಾನದಲ್ಲಿದ್ದಾರೆ. 

ಫ್ರೆಂಚ್ ಓಪನ್: ಇಗಾ ಸ್ವಿಟೆಕ್ ಚಾಂಪಿಯನ್..!

ಇನ್ನು ಪುರುಷರ ಸಿಂಗಲ್‌ಸ್ ಫೈನಲ್‌ನಲ್ಲಿ ಸರ್ಬಿಯಾದ ನೊವಾಕ್ ಜೋಕೋವಿಚ್‌ರನ್ನು ಮಣಿಸಿ ದಾಖಲೆಯ 13ನೇ ಬಾರಿ ಫ್ರೆಂಚ್ ಓಪನ್ ಚಾಂಪಿಯನ್ ಆದ ಸ್ಪೇನ್‌ನ ರಾಫೆಲ್ ನಡಾಲ್ ರ‍್ಯಾಂಕಿಂಗ್‌ನಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ನಡಾಲ್ ವಿಶ್ವ ನಂ.2ರಲ್ಲಿ ಉಳಿದಿದ್ದಾರೆ. ಜೋಕೋವಿಚ್ ನಂ.1 ಸ್ಥಾನ ಉಳಿಸಿಕೊಂಡಿದ್ದಾರೆ. ಯುಎಸ್ ಓಪನ್ ಚಾಂಪಿಯನ್ ಆಸ್ಟ್ರಿಯಾದ ಡೊಮಿನಿಕ್ ಥೀಮ್ 3ನೇ ಸ್ಥಾನದಲ್ಲಿದ್ದರೆ, ಸ್ವಿಜರ್‌ಲೆಂಡ್‌ನ ರೋಜರ್ ಫೆಡರರ್ 4ನೇ ಸ್ಥಾನ ಪಡೆದಿದ್ದಾರೆ.