ರೋಮ್(ಜ.18): 2020ನೇ ಹೊಸ ವರ್ಷವನ್ನು ಭಾರತದ ರಸ್ಲರ್ ವಿನೇಶ್ ಫೋಗಟ್ ಭರ್ಜರಿಯಾಗಿ ಆರಂಭಿಸಿದ್ದಾರೆ. ರೋಮ್ ರ‍್ಯಾಂಕಿಂಗ್ ಕುಸ್ತಿ ಸೀರಿಸ್‌ನಲ್ಲಿ ವಿನೇಶ್ ಚಿನ್ನ ಗೆದ್ದುಕೊಂಡಿದ್ದಾರೆ. 53 ಕೆಜಿ ವಿಭಾಗದಲ್ಲಿ ವಿನೇಶ್ ಇಬ್ಬರು ಚೀನಾ ಎದುರಾಳಿಗಳನ್ನು ಮಣಿಸಿದ ವಿನೇಶ್ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.

ಇದನ್ನೂ ಓದಿ: ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ವಿನೇಶ್ ಫೋಗಟ್!

ಗೆಲುವಿನ ಬಳಿಕ ಸಂತಸ ವ್ಯಕ್ತಪಡಿಸಿದ ವಿನೇಶ್, ಒಲಿಂಪಿಕ್ ಕ್ರೀಡಾಕೂಟಕ್ಕೆ ಸರಿಯಾದ ದಾರಿಯಲ್ಲಿ ಸಾಗುತ್ತಿದ್ದೇನೆ. ಈ ಗೆಲುವು ನನ್ನ ಆತ್ಮವಿಶ್ವಾಸ ಹೆಚ್ಚಿಸಿದೆ. ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ಎಂದಿದ್ದಾರೆ. ವಿನೇಶ್ ಈಕ್ವೆಡಾರ್‌ನ ಲಿಸಾ ಎಲಿಜಬೆತ್ ವಿರುದ್ಧ ಅದ್ಬುತ ಗೆಲವಿನೊಂದಿಗೆ ಫೈನಲ್ ಸುತ್ತು ಗೆದ್ದುಕೊಂಡರು.

ಫೈನಲ್ ಸುತ್ತಿಗೂ ಮೊದಲು ಉಕ್ರೇನ್‌ನ ಕ್ರೈಸ್ಟಾನಾ ಬೆರೆಝಾ(10-0), ಚೀನಾದ ಲನೌನ್ ಲು(15-5) ಹಾಗೂ ಕ್ವೈನಾ ಪಂಗ್ ವಿರುದ್ಧ 4-2 ಅಂತರದಿಂದ ಗೆಲುವು ಸಾಧಿಸಿದರು. 57 ಕೆಜಿ ವಿಭಾಗದಲ್ಲಿ ಭಾರತದ ಅಂಶು ಮಲಿಕ್ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.