Asianet Suvarna News Asianet Suvarna News

ವಿನೇಶ್ ಫೋಗಟ್ ಕಾಂಗ್ರೆಸ್‌ಗೆ?; ಉರಿಯೋ ಬೆಂಕಿಗೆ ತುಪ್ಪ ಸುರಿದಂತಾದ ಕುಸ್ತಿಪಟು ನಡೆ!

ಒಲಿಂಪಿಯನ್ ಕುಸ್ತಿಪಟು ವಿನೇಶ್ ಫೋಗಟ್, ಹರ್ಯಾಣದ ಮಾಜಿ ಮುಖ್ಯಮಂತ್ರಿ ಭೂಪೀಂದರ್ ಸಿಂಗ್ ಹೂಡಾ ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿ ಫೋಗಟ್ ಅವರ ರಾಜಕೀಯಕ್ಕೆ ಸೇರ್ಪಡೆಯಾಗುವ ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ. ಅಕ್ಟೋಬರ್ 1 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಫೋಗಟ್ ಸ್ಪರ್ಧಿಸುವ ಸಾಧ್ಯತೆಯಿದೆ.

Wrestler Vinesh Phogat meets Bhupinder Singh Hooda fuels speculations of joining Congress party kvn
Author
First Published Aug 24, 2024, 11:32 AM IST | Last Updated Aug 24, 2024, 11:32 AM IST

ಚಂಡೀಗಢ: ಭಾರತದ ತಾರಾ ಕುಸ್ತಿಪಟು ಹಾಗೂ ಒಲಿಂಪಿಯನ್ ವಿನೇಶ್ ಫೋಗಟ್, ರಾಜಕೀಯಕ್ಕೆ ಸೇರ್ಪಡೆಯಾಗ್ತಾರಾ ಎನ್ನುವ ಕುತೂಹಲ ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಇದೆಲ್ಲದರ ನಡುವೆ ಫೋಗಟ್, ಹರ್ಯಾಣದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಪ್ರತಿಪಕ್ಷದ ನಾಯಕ ಭೂಪೀಂದರ್ ಸಿಂಗ್ ಹೂಡಾ ಅವರನ್ನು ಭೇಟಿ ಮಾಡಿರುವುದು ರಾಜಕೀಯಕ್ಕೆ ಎಂಟ್ರಿ ಎನ್ನುವ ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಆಗಿದೆ. 

ಹೌದು, ಕಾಂಗ್ರೆಸ್ ಹಿರಿಯ ನಾಯಕ ಭೂಪೀಂದರ್ ಸಿಂಗ್ ಹೂಡಾ ಅವರನ್ನು ಶುಕ್ರವಾರ ಸಂಜೆ ವಿನೇಶ್ ಫೋಗಟ್ ಸೌಹಾರ್ಧಯುತವಾಗಿ ಭೇಟಿಯಾಗಿದ್ದಾರೆ. ವಿನೇಶ್ ಫೋಗಟ್ ಸದ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಳ್ಳಲಿದ್ದು, ಅಕ್ಟೋಬರ್ 01ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ. ಭೂಪೀಂದರ್ ಸಿಂಗ್ ಭೇಟಿಯ ಕುರಿತಂತೆ ವಿನೇಶ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಆದರೆ ಹೂಡಾ, ಯಾರೇ ಕಾಂಗ್ರೆಸ್‌ಗೆ ಬಂದರೂ ನಾವು ಮುಕ್ತವಾಗಿ ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ.

ಟೆಸ್ಟ್ ಕ್ರಿಕೆಟ್ ಉಳಿಸಿ ಬೆಳೆಸಲು ಐಸಿಸಿ 125 ಕೋಟಿ ರುಪಾಯಿ ನೆರವು; ಜಯ್ ಶಾ ಬೆಂಬಲ..!

"ಓರ್ವ ಅಥ್ಲೀಟ್ ಆದವರು ಯಾವುದೇ ನಿರ್ದಿಷ್ಟ ಪಕ್ಷ ಅಥವಾ ರಾಜ್ಯಕ್ಕೆ ಸೇರಿದವರಾಗಿರುವುದಿಲ್ಲ. ಅಥ್ಲೀಟ್ ಇಡೀ ದೇಶದ ಪ್ರತಿನಿಧಿಗಳಾಗಿರುತ್ತಾರೆ. ಈಕೆ ಕೂಡಾ ಇಡೀ ದೇಶದ ಪ್ರತಿನಿಧಿ. ಯಾವುದಾದರೂ ಪಕ್ಷವನ್ನು ಸೇರಬೇಕೋ ಅಥವಾ ಬೇಡವೇ ಎನ್ನುವುದು ಅವರ ಆಯ್ಕೆಯಾಗಿರುತ್ತದೆ. ಆದರೆ ಯಾರೇ ಕಾಂಗ್ರೆಸ್ ಪಕ್ಷಕ್ಕೆ ಬಂದರೂ ಅವರನ್ನು ಮುಕ್ತವಾಗಿ ಸ್ವಾಗತಿಸುತ್ತೇವೆ. ಆಕೆ ಏನು ಮಾಡಬೇಕು ಎನ್ನುವ ನಿರ್ಧಾರ ಆಕೆಗೆ ಬಿಟ್ಟಿದ್ದು ಎಂದು ಹರ್ಯಾಣ ವಿಧಾನಸಭಾ ವಿಪಕ್ಷ ನಾಯಕ ಭೂಪೀಂದರ್ ಸಿಂಗ್ ಹೂಡಾ ಹೇಳಿದ್ದಾರೆ.

ಇತ್ತೀಚೆಗಷ್ಟೇ ನಡೆದ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದ ಮಹಿಳೆಯರ 50 ಕೆಜಿ ಪ್ರೀಸ್ಟೈಲ್ ಕುಸ್ತಿ ಸ್ಪರ್ಧೆಯಲ್ಲಿ 29 ವರ್ಷದ ವಿನೇಶ್ ಫೋಗಟ್ ಫೈನಲ್ ಪ್ರವೇಶಿಸಿದ್ದರು. ಈ ಮೂಲಕ ಒಲಿಂಪಿಕ್ಸ್‌ನಲ್ಲಿ ಫೈನಲ್ ಪ್ರವೇಶಿಸಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎನ್ನುವ ಇತಿಹಾಸ ನಿರ್ಮಿಸಿದ್ದರು. ಆದರೆ ಫೈನಲ್ ಪಂದ್ಯಕ್ಕೂ ಮುನ್ನ 100 ಗ್ರಾಮ್ ತೂಕ ಹೆಚ್ಚಳವಾಗಿದ್ದರಿಂದ ಅವರನ್ನು ಅನರ್ಹಗೊಳಿಸಲಾಗಿತ್ತು. ಇನ್ನು ತಮ್ಮ ಅನರ್ಹತೆಯನ್ನು ಪ್ರಶ್ನಿಸಿ ವಿನೇಶ್ ಸಿಎಎಸ್‌ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಅಲ್ಲೂ ಕೂಡಾ ವಿನೇಶ್ ಅವರ ವಾದವನ್ನು ತಳ್ಳಿ ಹಾಕಲಾಗಿತ್ತು.

ವಿನೇಶ್ ಫೋಗತ್ ಅರ್ಜಿ ವಜಾಗೊಂಡಿದ್ದು ಹೇಗೆ? ಪದಕದ ಕೊನೆಯ ಆಸೆ ನುಚ್ಚು ನೂರಾದ ಕಾರಣ ಬಹಿರಂಗ!

ಇನ್ನು ವಿನೇಶ್ ಫೋಗಟ್ ತವರಿಗೆ ವಾಪಾಸ್ಸಾಗುತ್ತಿದ್ದಂತೆಯೇ ಹರ್ಯಾಣ ಸರ್ಕಾರವು ಮಹಿಳಾ ಕುಸ್ತಿಪಟುವಿಗೆ 4 ಕೋಟಿ ರುಪಾಯಿ ನಗದು ಬಹುಮಾನ ನೀಡಿ ಗೌರವಿಸಿತ್ತು. ಇದು ಹರಿಯಾಣ ಸರ್ಕಾರವು ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಅಥ್ಲೀಟ್‌ಗೆ ನೀಡುವ ಬಹುಮಾನದ ಮೊತ್ತವಾಗಿತ್ತು. ಆದರೆ ಫೋಗಟ್ ಫೈನಲ್ ಪ್ರವೇಶಿಸಿಯೂ ಬರಿಗೈನಲ್ಲಿ ವಾಪಾಸ್ಸಾದರೂ ಸಹಾ, ಆಕೆಯ ಸಾಧನೆಯನ್ನು ಪರಿಗಣಿಸಿ ನಗದು ಬಹುಮಾನ ಘೋಷಿಸಿತ್ತು.

Latest Videos
Follow Us:
Download App:
  • android
  • ios