Asianet Suvarna News Asianet Suvarna News

ಟೆಸ್ಟ್ ಕ್ರಿಕೆಟ್ ಉಳಿಸಿ ಬೆಳೆಸಲು ಐಸಿಸಿ 125 ಕೋಟಿ ರುಪಾಯಿ ನೆರವು; ಜಯ್ ಶಾ ಬೆಂಬಲ..!

ಟಿ20 ಲೀಗ್ ಭರಾಟೆಯ ನಡುವೆ ಟೆಸ್ಟ್ ಕ್ರಿಕೆಟ್ ಉಳಿಸಲು ಐಸಿಸಿ ಮಾಸ್ಟರ್ ಪ್ಲಾನ್ ರೂಪಿಸಿದ್ದು, ಇದಕ್ಕೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಬೆಂಬಲ ಸೂಚಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಒಲ್ಲಿದೆ ನೋಡಿ

Jay Shah In Support As ICC Plans Stunning INR 125 Crore Fund To Save Test Cricket Says Report kvn
Author
First Published Aug 24, 2024, 10:33 AM IST | Last Updated Aug 24, 2024, 10:33 AM IST

ಸಿಡ್ನಿ: ಟೆಸ್ಟ್ ಕ್ರಿಕೆಟ್‌ನ ಉಳಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಹೊಸ ಯೋಜನೆ ರೂಪಿಸಿದೆ. ಟಿ20 ಲೀಗ್‌ಗಳ ಭರಾಟೆ ನಡುವೆ ಟೆಸ್ಟ್ ಕ್ರಿಕೆಟ್‌ನ ಬೆಳವಣಿಗೆಗಾಗಿ ಐಸಿಸಿ 15 ಮಿಲಿಯನ್ ಡಾಲರ್ (ಅಂದಾಜು 125 ಕೋಟಿ ರು.) ನೆರವು ಒದಗಿಸಲು ನಿರ್ಧರಿಸಿದೆ ಎಂದು ವಿದೇಶಿ ಮಾಧ್ಯಮಗಳು ವರದಿ ಮಾಡಿವೆ.

ಯೋಜನೆ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾ ಪ್ರಸ್ತಾಪಿಸಿದ್ದು, ಐಸಿಸಿಯ ನೂತನ ಅಧ್ಯಕ್ಷ ಎಂದೇ ಬಿಂಬಿತಗೊಂಡಿರುವ ಜಯ್ ಶಾ ಈ ಪ್ರಸ್ತಾಪಕ್ಕೆ ಬೆಂಬಲ ಸೂಚಿಸಿದ್ದಾರೆ. ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿಯಿಂದಲೂ ಬೆಂಬಲ ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ. ಯೋಜನೆಯಿಂದ ವೆಸ್ಟ್‌ ಇಂಡೀಸ್‌ನಂತಹ ಆರ್ಥಿಕ ಸಂಕಷ್ಟದಲ್ಲಿರುವ ಮಂಡಳಿಗಳು ಪ್ರಯೋಜನ ಪಡೆದುಕೊಳ್ಳಲಿವೆ. 

ಆಟಗಾರರು ಪ್ರತಿ ಟೆಸ್ಟ್ ಪಂದ್ಯಕ್ಕೆ 10,000 ಯುಎಸ್ ಡಾಲರ್ (ಅಂದಾಜು 8.3 ಲಕ್ಷ ರು.) ಪಡೆದುಕೊಳ್ಳಲಿದ್ದಾರೆ. ಈ ಯೋಜನೆಯಿಂದ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್‌ನಂತಹ ಶ್ರೀಮಂತ ಕ್ರಿಕೆಟ್ ಮಂಡಳಿಗಳಿಗೆ ಲಾಭವಾಗುವುದಿಲ್ಲ. ಭಾರತೀಯ ಆಟಗಾರರು ಈಗಾಗಲೇ ಪ್ರತಿ ಪಂದ್ಯಕ್ಕೆ 15 ಲಕ್ಷಗಳಿಸುತ್ತಿದ್ದಾರೆ.

ಅಂತಾರಾಷ್ಟ್ರೀಯ, ದೇಶಿ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ ಶಿಖರ್ ಧವನ್..! ಐಪಿಎಲ್ ಆಡ್ತಾರಾ ಗಬ್ಬರ್ ಸಿಂಗ್?

ಯೋಜನೆಯ ಪ್ರಯೋಜನ?

* ಆರ್ಥಿಕ ಸಂಕಷ್ಟದಲ್ಲಿರುವ ಕ್ರಿಕೆಟ್ ಮಂಡಳಿಗಳಿಗೆ ಆಟಗಾರರ ವೇತನ ಪಾವತಿಗೆ ನೆರವು.
* ವಿದೇಶಿ ಪ್ರವಾಸಗಳಿಗೆ ತಂಡಗಳನ್ನು ಕಳುಹಿಸುವ ವೆಚ್ಚ ಭರಿಸಲಿರುವ ಐಸಿಸಿ ಟೆಸ್ಟ್ ಆಟಗಾರರ ಕನಿಷ್ಠ ವೇತನ ಹೆಚ್ಚಳ. * * ಕ್ರೀಡಾಂಗಣಕ್ಕೆ ಅಭಿಮಾನಿಗಳನ್ನು ಸೆಳೆಯಲು ವಿಶೇಷ ಯೋಜನೆ ರೂಪಿಸಲು ಅನುಕೂಲ.

ಐಸಿಸಿ ಅಧ್ಯಕ್ಷ ರೇಸ್‌ನಲ್ಲಿ ಶಾ: ಬಿಸಿಸಿಐ ಕಾರ್ಯದರ್ಶಿ ಹುದ್ದೆಗೆ ಪೈಪೋಟಿ ಶುರು

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿಯಾಗಿರುವ ಜಯ್ ಶಾ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮುಖ್ಯಸ್ಥರಾಗಿ ನೇಮಕ ಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ, ಜಯ್ ಶಾ ಅವರಿಂದ ತೆರವಾಗುವ ಬಿಸಿಸಿಐ ಕಾರ್ಯದರ್ಶಿ ಹುದ್ದೆಗೇರಲು ಹಲವು ಪ್ರಭಾವಿಗಳಿಂದ ಈಗಾಗಲೇ ಪೈಪೋಟಿ ಶುರುವಾಗಿದೆ. 

ಬಾಂಗ್ಲಾದೇಶದ ವಿವಾದಿತ ಕ್ರಿಕೆಟಿಗ ಶಕೀಬ್‌ ಅಲ್ ಹಸನ್‌ ವಿರುದ್ಧ ಈಗ ಕೊಲೆ ಕೇಸ್‌!

ಸದ್ಯ ಬಿಸಿಸಿಐ ಉಪಾಧ್ಯಕ್ಷರಾಗಿರುವ ರಾಜೀವ್ ಶುಕ್ಲಾ ಮಂಡಳಿಯ ಕಾರ್ಯದರ್ಶಿ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ಮಂಡಳಿಯ ಖಜಾಂಚಿಯಾಗಿರುವ ಆಶೀಶ್ ಶೇಲರ್, ಐಪಿಎಲ್ ಮುಖ್ಯಸ್ಥರಾಗಿರುವ ಅರುಣ್ ಧುಮಾಲ್‌ ಕೂಡಾ ರೇಸ್‌ನಲ್ಲಿದ್ದಾರೆ.

ಆಸ್ಟ್ರೇಲಿಯಾದ ಶಾಲೆಯಲ್ಲಿ ಇನ್ನು ಕ್ರಿಕೆಟ್ ಕೂಡಾ ಕಲಿಕೆ!

ವಿಕ್ಟೋರಿಯಾ(ಆಸ್ಟ್ರೇಲಿಯಾ): ಆಸ್ಟ್ರೇಲಿಯಾದ ಶಾಲೆಯೊಂದು ತನ್ನ ಪಠ್ಯ ಪುಸ್ತಕದಲ್ಲಿ ವಿದ್ಯಾರ್ಥಿಗಳಿಗೆ ಪ್ರಾಥಮಿಕ ವಿಷಯದ ಭಾಗವಾಗಿ ಕ್ರಿಕೆಟ್ ಕಲಿಸಲು ಮುಂದಾಗಿದೆ. ಶಾಲಾ ಮಟ್ಟದಲ್ಲೇ ಮಕ್ಕಳಲ್ಲಿ ಕ್ರಿಕೆಟ್ ಬಗ್ಗೆ ಉತ್ಸಾಹ ಮೂಡಿಸಲು ವಿಕ್ಟೋರಿಯಾದ ಲಾರಾ ಸೆಕೆಂಡರಿ ಕಾಲೇಜಿನಲ್ಲಿ ಕ್ರಿಕೆಟ್ ಕುರಿತಾದ ಪಠ್ಯವನ್ನು ಸೇರಿಸಲಾಗಿದೆ. ವಿಕ್ಟೋರಿಯಾ ಕ್ರಿಕೆಟ್ ಕ್ಲಬ್‌ನ ಸಹಭಾಗಿತ್ವದಲ್ಲಿ ಶಾಲೆ ಈ ನಿರ್ಧಾರ ಕೈಗೊಂಡಿದ್ದು, ಮಕ್ಕಳಿಗೆ ಕ್ರಿಕೆಟ್ ಬಗ್ಗೆ ಸಂಪೂರ್ಣವಾಗಿ ಪಾಠ ಮಾಡಲಾಗುತ್ತದೆ.
 

Latest Videos
Follow Us:
Download App:
  • android
  • ios