Asianet Suvarna News Asianet Suvarna News

ಬ್ರಿಜ್ ಭೂಷಣ್ ಮೇಲಿನ ಲೈಂಗಿಕ ಆರೋಪ ತನಿಖೆಗೆ ಸಮಿತಿ ರಚನೆ, ಸಚಿವ ಅನುರಾಗ್ ಠಾಕೂರ್ ಭರವಸೆ!

ಪ್ರತಿಭಟನಾ ನಿರತ ಕುಸ್ತಿಪಟುಗಳು ಕೇಂದ್ರ ಸಚಿವ ಅನುರಾಗ್ ಠಾಕೂರ್ ಭೇಟಿ ಮಾಡಿ ಸತತ ನಾಲ್ಕೂವರೆ ಗಂಟೆ ಮಾತುಕತೆ ನಡೆಸಿದ್ದಾರೆ. ಸಚಿವರು ಭರವಸೆ ನೀಡಿದರೂ, ಪ್ರತಿಭಟನೆ ಕೈಬಿಡಲು ನಿರಾಕರಿಸಿದ್ದಾರೆ. 

Wrestler met Anurag Thakur minister agree to set up a committee to investigate sex allegations against Brij Bhushan Singh ckm
Author
First Published Jan 20, 2023, 10:15 PM IST

ನವದೆಹಲಿ(ಜ.20):  ಭಾರತೀಯ ಕುಸ್ತಿ ಫೆಡರೇಶನ್‌ ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ ವಿರುದ್ಧ ಕೊಲೆ ಬೆದರಿಕೆ, ಲೈಂಗಿಕ ಕಿರುಕುಳ ಮಾಡಿದ್ದಾರೆ ಆರೋಪಿಸಿ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ಇಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಭೇಟಿಯಾದ ಪ್ರತಿಭಟನಾ ನಿರತ ಕುಸ್ತಿಪಟುಗಳ ನಿಯೋಗ, ಬ್ರಿಜ್ ಭೂಷಣ್ ಸಿಂಗ್ ರಾಜೀನಾಮೆಗೆ ಪಟ್ಟು ಹಿಡಿದ್ದಾರೆ. ಇಷ್ಟೇ ಅಲ್ಲ ಫೆಡರೇಶನ್ ವಿಸರ್ಜಿಸಿ, ಹೊಸ ಸದಸ್ಯರ ನೇಮಕ್ಕೆ ಒತ್ತಾಯಿಸಿದ್ದಾರೆ. ಇತ್ತ ಅನುರಾಗ್ ಕುಸ್ತಿಪಟುಗಳ ಬೇಡಿಕೆಗೆ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ. ಬ್ರಿಷ್ ಭೂಷಣ್ ಮೇಲಿನ ಲೈಂಗಿಕ ಕಿರುಕುಳ ಕುರಿತು ತನಿಖೆ ನಡೆಸಲು ವಿಶೇಷ ಸಮಿತಿ ರಚಿಸುವುದಾಗಿ ಭರವಸೆ ನೀಡಿದ್ದಾರೆ.

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳ ಪೈಕಿ ಬಜರಂಗ್ ಪೂನಿಯಾ, ಸಾಕ್ಷಿ ಮಲಿಕ್, ಬಬಿತಾ ಪೋಗತ್, ವಿನೇಶ್ ಪೋಗತ್ ಇಂದು ಸಚಿವ ಅನುರಾಗ್ ಠಾಕೂರ್ ಭೇಟಿ ಮಾಡಿಗೆ ಬೇಡಿಕೆ ಮುಂದಿಟ್ಟಿದ್ದಾರೆ. ಸತತ ನಾಲ್ಕೂವರೇ ಗಂಟೆ ಕಾಲ ಕುಸ್ತಿಪಟುಗಳು ಹಾಗೂ ಅನುರಾಗ್ ಠಾಕೂರ್ ಮಾತುಕತೆ ನಡೆಸಿದ್ದಾರೆ.  ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷನ್ ವಜಾಗೊಳಿಸಲು ಕುಸ್ತಿಪಟುಗಳು ಪಟ್ಟು ಹಿಡಿದಿದ್ದಾರೆ. ಇತ್ತ ಲೈಂಗಿಕ ಆರೋಪ ವಿವರವಾದ ತನಿಖೆಗೆ ಸಮಿತಿ ರಚಿಸಲು ಆಗ್ರಹಿಸಿದ್ದರು. ಇದಕ್ಕೆ ಅನುರಾಗ್ ಠಾಕೂರ್ ಒಪ್ಪಿದ್ದಾರೆ. ರಾಷ್ಟ್ರೀಯ ಮತ್ತು ರಾಜ್ಯ ಕುಸ್ತಿ ಫೆಡರೇಶನ್ ವಿಸರ್ಜಿಸಿ, ಹೊಸ ಸದಸ್ಯರ ನೇಮಕ ಕುರಿತು ಪ್ರತಿಕ್ರಿಯಿಸಿದ ಠಾಕೂರ್ ಇದು ವ್ಯಾಪ್ತಿ ಮೀರಿ ಇರುವುದರಿಂದ ಕೇಂದ್ರ ಸರ್ಕಾಕರದ ಜೊತೆ ಮಾತುಕತೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.

ಸ್ಮೃತಿ, ಮೋದಿ ವಿರುದ್ಧ ಹೋರಾಟವಲ್ಲ, ಬೃಂದಾ ಕಾರಾಟ್ ಬಳಿಕ ಕಾಂಗ್ರೆಸ್‌ಗೆ ಮಂಗಳಾರತಿ!

ಕುಸ್ತಿಪಟುಗಳಿಗೆ ಬ್ರಿಜ್ ಭೂಷಣ್‌ರಿಂದ ಯಾವುದಾದರು ಕೆಟ್ಟ ಅನುಭವ ಆಗಿದೆಯಾ ಎಂದು ಅನುರಾಗ್ ಠಾಕೂರ್ ಪ್ರಶ್ನಿಸಿದ್ದಾರೆ. ಈ ವೇಳೆ ತಮಗೆ ಆಗಿಲ್ಲ, ಆಧರೆ ಇತರ ಕುಸ್ತಿಪಟುಗಳಿಗೆ ಆಗಿದೆ ಎಂದಿದ್ದಾರೆ. ಇದೇ ವೇಳೆ  ತಮ್ಮ ಜೊತೆ ಮುಕ್ತವಾಗಿ ಹಂಚಿಕೊಳ್ಳಲು ಸಾಧ್ಯವಾಗದಿದ್ದರೆ, ಕ್ರೀಡಾ ಸಚಿವಾಲಯದ ಕಾರ್ಯದರ್ಶಿ ಸುಜಾತ ಚತುರ್ವೇದಿ ಜೊತೆ ಮಾತನಾಡಬಹುದು ಎಂದು ಕುಸ್ತಿಪಟುಗಳಿಗೆ ಅನುರಾಗ್ ಠಾಕೂರ್ ಸೂಚಿಸಿದ್ದಾರೆ. 

ಇದೇ ವೇಳೆ ಅನುರಾಗ್ ಠಾಕೂರ್ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದ್ದಾರೆ. ತನಿಖೆ ಮುಗಿಯುವ ವರೆಗೆ ಪ್ರತಿಭಟನೆ ಕೈಬಿಡಿ. ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಆದರೆ ಪ್ರಿತಭಟನೆ ಕೈಬಿಡಲು ಕುಸ್ತಿಪಟುಗಳು ನಿರಾಕರಿಸಿದ್ದಾರೆ. ಸಚಿವರ ಭೇಟಿ ಬಳಿಕ ಮತ್ತೆ ಜಂತರ್ ಮಂತರ್‌ಗೆ ಆಗಮಿಸಿದ ಕುಸ್ತಿಪಟುಗಳು ಪ್ರತಿಭಟನೆ ಮುಂದುವರಿಸಿದ್ದಾರೆ.

ಇತ್ತ ಭಾತೀಯ ಒಲಿಂಪಿಕ್ ಸಂಸ್ಥೆ ಬ್ರಿಷ್ ಬೂಷಣ್ ಮೇಲೇ ಕೇಳಿಬಂದಿರುವ ಆರೋಪ ತನಿಖೆ ನಡೆಸಲು ಸಮಿತಿ ರಚಿಸಿದೆ. ಬಾಕ್ಸರ್ ಕುಸ್ತಿಪಟು ನೇತೃತ್ವದಲ್ಲಿ 7 ಮಂದಿಯ ಸಮಿತಿ ರಚನೆ ಮಾಡಿದೆ. ಮೇರಿ ಕೋಮ್ ಸಮಿತಿಯಲ್ಲಿ ಡೋಲಾ ಬ್ಯಾನರ್ಜಿ, ಅಲಕಾನಂದ ಅಶೋಕ್, ಯೋಗೇಶ್ವರ್ ದತ್, ಸಹದೇವ್ ಯಾದವ್ ಸೇರಿದಂತೆ ಇತರರಿದ್ದಾರೆ.

ಸರ್ಕಾರದ ಭರವಸೆಗೆ ಒಪ್ಪದ ಕುಸ್ತಿಪಟುಗಳು; ಬ್ರಿಜ್‌ಭೂಷಣ್‌ ವಿರುದ್ಧ ಇಂದು ಎಫ್‌ಐಆರ್‌? 

ಕುಸ್ತಿಪಟುಗಳು ಹಾಗೂ ಸರ್ಕಾರದ ನಡುವೆ ಮಧ್ಯಸ್ಥಿಕೆ ವಹಿಸಲು ತಾರಾ ಕುಸ್ತಿಪಟು, ಬಿಜೆಪಿ ನಾಯಕಿ ಬಬಿತಾ ಫೋಗಾಟ್‌ ಪ್ರತಿಭಟನಾ ನಿರತರನ್ನು ಭೇಟಿಯಾಗಿ, ನ್ಯಾಯ ಒದಗಿಸುವ ಭರವಸೆ ನೀಡಿದರು. ‘ನಾನು ಮೊದಲು ಕುಸ್ತಿಪಟು, ಆನಂತರ ರಾಜಕಾರಣಿ. ಹೀಗಾಗಿ ನನಗೆ ನಿಮ್ಮ ನೋವಿನ ಅರಿವಿದೆ. ಸರ್ಕಾರದ ಜೊತೆ ಚರ್ಚಿಸಿ ಶೀಘ್ರದಲ್ಲೇ ಇದಕ್ಕೆ ಪರಿಹಾರ ದೊರಕಿಸುತ್ತೇನೆ’ ಎಂದಿದ್ದರು. ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಕುಸ್ತಿಪಟುಗಳಿಗೆ ಬಬಿತಾ ತಿಳಿಸಿದ ಬಳಿಕವೂ ಕುಸ್ತಿಪಟುಗಳು ಪ್ರತಿಭಟನೆ ನಿಲ್ಲಿಸಲಿಲ್ಲ. ವರದಿಗಳ ಪ್ರಕಾರ ಜ.22ರಂದು ನಡೆಯಲಿರುವ ಡಬ್ಲ್ಯುಎಫ್‌ಐ ವಾರ್ಷಿಕ ಸಭೆಯಲ್ಲಿ ಬ್ರಿಜ್‌ಭೂಷಣ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

Follow Us:
Download App:
  • android
  • ios