ರೋಮ್‌ ಕುಸ್ತಿ: ಚಿನ್ನ ಗೆದ್ದು ಮತ್ತೆ ನಂ.1 ಸ್ಥಾನಕ್ಕೇರಿದ ಭಜರಂಗ್‌ ಪೂನಿಯಾ

ಭಾರತದ ತಾರಾ ಕುಸ್ತಿಪಟು ಭಜರಂಗ್ ಪೂನಿಯಾ ಮತ್ತೊಂದು ಚಿನ್ನದ ಪದಕ ಬಾಚಿಕೊಂಡಿದ್ದಾರೆ, ಇದರೊಂದಿಗೆ ಶ್ರೇಯಾಂಕದಲ್ಲಿ ಮತ್ತೆ ನಂ.1 ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

Wrestler Bajrang Punia Wins Gold At Matteo Pellicone Ranking Series kvn

ರೋಮ್(ಮಾ.09)‌: ಭಾರತದ ಭಜರಂಗ್‌ ಪೂನಿಯಾ ಇಲ್ಲಿ ನಡೆದ ಮ್ಯಾಟಿಯೋ ಪೆಲಿಕೋನ್‌ ಕುಸ್ತಿ ಟೂರ್ನಿಯ ಪುರುಷರ 65 ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದು, ಈ ವಿಭಾಗದಲ್ಲಿ ವಿಶ್ವ ನಂ.1 ಸ್ಥಾನಕ್ಕೆ ಮರಳಿದ್ದಾರೆ. 

ಫೈನಲ್‌ನಲ್ಲಿ ಮಂಗೋಲಿಯಾದ ಟುಲ್ಗಾ ತುಮರ್‌ ವಿರುದ್ಧ 0-2ರಿಂದ ಹಿಂದಿದ್ದ ಭಜರಂಗ್‌, ಕೊನೆ 30 ಸೆಕೆಂಡ್‌ ಬಾಕಿ ಇದ್ದಾಗ 2 ಅಂಕ ಗಳಿಸಿದರು. ಪಂದ್ಯ ಟೈ ಆದ ಸಂದರ್ಭದಲ್ಲಿ ಕೊನೆಯದಾಗಿ ಅಂಕ ಗಳಿಸಿದ ಕುಸ್ತಿಪಟುವನ್ನು ವಿಜೇತ ಎಂದು ಘೋಷಿಸಲಾಗುತ್ತದೆ. ಈ ಆಧಾರದಲ್ಲಿ ಭಜರಂಗ್‌ಗೆ ಗೆಲುವು ಒಲಿಯಿತು.

ಮ್ಯಾಟಿಯೋ ಪೆಲಿಕೋನ್‌ ಕುಸ್ತಿ ಟೂರ್ನಿ ಆರಂಭಕ್ಕೂ ಮೊದಲು ಭಜರಂಗ್ ಪೂನಿಯಾ 65 ಕೆ.ಜಿ. ವಿಭಾಗದಲ್ಲಿ ಎರಡನೇ ಶ್ರೇಯಾಂಕವನ್ನು ಹೊಂದಿದ್ದರು. ಆದರೆ ಈ ಟೂರ್ನಿಯಲ್ಲಿ ಚಿನ್ನದ ಪದಕ ಜಯಿಸುವ ಮೂಲಕ 14 ಅಂಕಗಳನ್ನು ಗಳಿಸಿ ಮತ್ತೆ ಅಗ್ರಸ್ಥಾನಕ್ಕೇರಿದ್ದಾರೆ. 

ಒಲಿಂಪಿಕ್ಸ್‌ ವರೆಗೂ ಸಾಮಾಜಿಕ ತಾಣಗಳಿಗೆ ಭಜರಂಗ್‌ ಗುಡ್‌ಬೈ

ನವದೆಹಲಿ: ಭಾರತದ ತಾರಾ ಕುಸ್ತಿಪಟು ಭಜರಂಗ್‌ ಪೂನಿಯಾ ಟೋಕಿಯೋ ಒಲಿಂಪಿಕ್ಸ್‌ ಮುಕ್ತಾಯಗೊಳ್ಳುವ ವರೆಗೂ ಸಾಮಾಜಿಕ ತಾಣಗಳಿಂದ ದೂರವಿರಲು ನಿರ್ಧರಿಸಿದ್ದು, ತಮ್ಮೆಲ್ಲಾ ಖಾತೆಗಳನ್ನು ನಿಷ್ಕ್ರಿಯಗೊಳಿಸುತ್ತಿರುವುದಾಗಿ ಕಳೆದ ವಾರವಷ್ಟೇ ತಿಳಿಸಿದ್ದರು.

ಎರಡೇ ವಾರದಲ್ಲಿ ಎರಡನೇ ಚಿನ್ನ ಗೆದ್ದ ವಿನೇಶ್ ಪೋಗತ್; ಅಗ್ರಸ್ಥಾನಕ್ಕೆ ಲಗ್ಗೆ!

ಒಲಿಂಪಿಕ್ಸ್‌ನಲ್ಲಿ ಭಾರತದ ಪದಕ ಭರವಸೆ ಎನಿಸಿರುವ ಭಜರಂಗ್‌ ಈ ವಿಚಾರವನ್ನು ಟ್ವೀಟರ್‌ ಖಾತೆ ಮೂಲಕ ತಿಳಿಸಿದ್ದು‘ಒಲಿಂಪಿಕ್ಸ್‌ ಮುಗಿದ ಮೇಲೆ ನಿಮ್ಮನೆಲ್ಲಾ ಮತ್ತೆ ಭೇಟಿಯಾಗುತ್ತೇನೆ. ನಿಮ್ಮ ಪ್ರೀತಿ ಹೀಗೆ ಇರಲಿದೆ ಎಂದು ಭಾವಿಸುತ್ತೇನೆ’ ಎಂದು ಅವರು ಟ್ವೀಟ್‌ ಮಾಡಿದ್ದರು. 

Latest Videos
Follow Us:
Download App:
  • android
  • ios