ರೋಮ್(ಮಾ.07): ಮ್ಯಾಟಿಯೋ ಪೆಲಿಕಾನ್ ರ್ಯಾಕಿಂಗ್ ಸೀರಿಸ್‌ ಫೈನಲ್ ಪಂದ್ಯದಲ್ಲಿ ಭಾರತದ ರಸ್ಲರ್ ವಿನೇಶ್ ಪೋಗತ್, ಕೆನಡಾದ ಡಯಾನ್ ವಿಕೆರ್ ವಿರುದ್ಧ 4-0 ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. 53 ಕೆಜಿ ವಿಭಾಗದಲ್ಲಿ ವಿನೇಶ್ ಇದೀಗ 2ನೇ ಚಿನ್ನದ ಪದಕ ಬಾಚಿಕೊಂಡಿದ್ದಾರೆ.

ಉಕ್ರೇನ್ ರಸ್ಲಿಂಗ್ : ವರ್ಷದ ಮೊದಲ ಚಿನ್ನ ಗೆದ್ದ ವಿನೇಷ್ ಪೋಗತ್!

ಉಕ್ರೇನ್ ಕುಸ್ತಿಪಟು ಕೈವ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಚಿನ್ನದ ಪದಕ ಗೆದ್ದ ಮರುವಾರವೇ ಇದೀಗ ಡಯಾನ್ ವಿಕೆರ್ ವಿರುದ್ಧ ಗೆಲುವು ಸಾಧಿಸಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಮ್ಯಾಟಿಯೋ ಪೆಲಿಕಾನ್ ರ್ಯಾಕಿಂಗ್ ಸೀರಿಸ್‌ ಪಾಲ್ಗೊಂಡ ವೇಳೆ 3ನೇ ರ್ಯಾಂಕ್ ಹೊಂದಿದ್ದ ವಿನೇಶ್ ಇದೀಗ ಅಗ್ರ ಸ್ಥಾನ ಪಡೆದುಕೊಂಡಿದ್ದಾರೆ.

ಭಾರತದ ತಾರಾ ಕುಸ್ತಿಪಟು ವಿನೇಶ್‌ಗೆ ವಿದೇಶದಲ್ಲಿ ತರಬೇತಿ..!

ವಿಶ್ವ ಕುಸ್ತಿಪಟು ರ್ಯಾಂಕಿಂಗ್‌ನಲ್ಲಿ ವಿನೇಶ್ ಪೋಗತ್ ಇದೀಗ ಮೊದಲ ರ್ಯಾಂಕ್‌ಗೆ ಲಗ್ಗೆ ಇಟ್ಟಿದ್ದಾರೆ. ಇನ್ನು ಟೊಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ  ಏಕೈಕ ಕುಸ್ತಿಪಟು ಅನ್ನೋ ಹೆಗ್ಗಳಿಕೆಗೂ ವಿನೇಶ್ ಪೋಗತ್ ಪಾತ್ರರಾಗಿದ್ದಾರೆ.