Asianet Suvarna News Asianet Suvarna News

'ಈಕೆಯನ್ನೇ ಅಲ್ಲವೇ ನಾವು ಬೀದಿಯಲ್ಲಿ ಎಳೆದಾಡಿದ್ದು..' ವಿನೇಶ್‌ ಪೋಗಟ್‌ ಗೆಲುವಿನ ಬೆನ್ನಲ್ಲೇ ಭಜರಂಗ್‌ ಪೂನಿಯಾ ಟ್ವೀಟ್‌!

Bajrang Punia Tweet ಪ್ಯಾರಿಸ್‌ ಒಲಿಂಪಿಕ್ಸ್‌ನ ಮಹಿಳೆಯರ 50 ಕೆಜಿ ರೆಸ್ಲಿಂಗ್‌ನಲ್ಲಿ ವಿನೇಶ್‌ ಪೋಗಟ್‌ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಪದಕದ ಭರವಸೆ ಮೂಡಿಸಿರುವ ನಡುವೆಯೇ ದೇಶದ ಪ್ರಮುಖ ರೆಸ್ಲರ್‌ ಆಕೆಯ ಹೋರಾಟವನ್ನು ನೆನಪಿಸಿಕೊಂಡಿದ್ದಾರೆ.
 

Wrestler Bajrang Punia Tweet on Vinesh Phogat After She Reaches Semifinal in Paris Olympics san
Author
First Published Aug 6, 2024, 6:06 PM IST | Last Updated Aug 6, 2024, 6:06 PM IST

ಬೆಂಗಳೂರು (ಆ.6): ವಿನೇಶ್‌ ಪೋಗಟ್‌ ಪ್ಯಾರಿಸ್‌ ಒಲಿಂಪಿಕ್ಸ್‌ನ ಮಹಿಳೆಯ 50 ಕೆಜಿ ರೆಸ್ಲಿಂಗ್‌ನಲ್ಲಿ ಸೆಮಿಫೈನಲ್‌ಗೇರುವ ಮೂಲಕ ಪದಕದ ಭರವಸೆ ಮೂಡಿಸಿದ್ದಾರೆ. ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಆಕೆ ಹಾಲಿ ವಿಶ್ವಚಾಂಪಿಯನ್‌ಅನ್ನು ಸೋಲಿಸಿದ ರೀತಿಯೇ ಒಲಿಂಪಿಕ್ಸ್‌ ಚಿನ್ನ ಗೆಲುವಿಗಿಂತ ಮಹತ್ವದ್ದು ಎಂದು ಬಿಂಬಿಸಲಾಗುತ್ತಿದೆ. ವಿನೇಶ್‌ ಪೋಗಟ್‌ ಚಿನ್ನದ ಭರವಸೆಯನ್ನು ಮೂಡಿಸಿರುವ ನಡುವೆಯೇ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಭಜರಂಗ್‌ ಪೂನಿಯಾ ಭಾವುಕ ಪೋಸ್ಟ್‌ ಹಂಚಿಕೊಂಡಿದ್ದಾರೆ. ರೆಸ್ಲಿಂಗ್‌ ಫೆಡರೇಷನ್‌ನಲ್ಲಿ ಬದಲಾವಣೆ ಆಗಬೇಕು. ಮಾಜಿ ಅಧ್ಯಕ್ಷರಾಗಿರುವ ಬ್ರಿಜ್‌ ಭೂಷಣ್‌ ಸಿಂಗ್‌ ವಿರುದ್ಧ ಎಫ್‌ಐಆರ್‌ ದಾಖಲಾಗಬೇಕು ಎಂದು ಆಗ್ರಹಿಸಿ ವಿನೇಶ್‌ ಪೋಗಟ್‌, ಸಾಕ್ಷಿ ಮಲೀಕ್‌ ಹಾಗೂ ಭಜರಂಗ್‌ ಪೂನಿಯಾ ಮಾಡಿದ ಹೋರಾಟ ಅಷ್ಟಿಷ್ಟಲ್ಲ. ಕ್ರೀಡಾ ಸಚಿವಾಲಯ, ಕೇಂದ್ರ ಸರ್ಕಾರ ಇವರೆಲ್ಲರ ಮಧ್ಯಪ್ರವೇಶದಿಂದಲೂ ತಣ್ಣಗಾಗದ ಇವರ ಹೋರಾಟ ಕನೆಗೆ ಬೀದಿಗೆ ಇಳಿದಿತ್ತು. ಚಾಂಪಿಯನ್‌ ಅಥ್ಲೀಟ್‌ಗಳು ದೇಶದ ಪೊಲೀಸರು ಎಸೆದು ಹೊರಹಾಕಿದ್ದರು. ಈ ಎಲ್ಲಾ ಹೋರಾಟ, ಅವಮಾನಗಳ ನಡುವೆ ದೇಶವನ್ನು ಪ್ರತಿನಿಧಿಸಿ ವಿನೇಶ್‌ ಇಂದು ಮಹಾ ಪದಕದ ಕನಸಿನಲ್ಲಿದ್ದಾರೆ. ಈ ನಿಟ್ಟಿನಲ್ಲಿ ಭಜರಂಗ್‌ ಪೂನಿಯಾ ಮಾಡಿರುವ ಟ್ವೀಟ್‌ ವೈರಲ್‌ ಆಗಿದೆ.

'ವಿನೇಶ್ ಫೋಗಟ್ ಇಂದು ಬ್ಯಾಕ್ ಟು ಬ್ಯಾಕ್ ಪಂದ್ಯಗಳನ್ನು ಗೆದ್ದ ಭಾರತದ ಸಿಂಹಿಣಿ. 4 ಬಾರಿ ವಿಶ್ವ ಚಾಂಪಿಯನ್ ಮತ್ತು ಹಾಲಿ ಒಲಿಂಪಿಕ್ ಚಾಂಪಿಯನ್ ಅನ್ನು ಅವರು ಸೋಲಿಸಿದ್ದಾರೆ. ಅದರ ನಂತರ ಅವರು ಕ್ವಾರ್ಟರ್ ಫೈನಲ್‌ನಲ್ಲಿ ಮಾಜಿ ವಿಶ್ವ ಚಾಂಪಿಯನ್‌ನನ್ನು ಸೋಲಿಸಿದ್ದಾರೆ. ಆದರೆ ನಾನು ನಿಮಗೆ ಒಂದು ವಿಷಯ ಹೇಳುತ್ತೇನೆ, ಈ ಹುಡುಗಿಯನ್ನು ತನ್ನ ದೇಶದಲ್ಲಿಯೇ ಒದ್ದು ತುಳಿದು ಹಾಕಿದ್ದರು. ಈ ಹುಡುಗಿಯನ್ನು ತನ್ನ ದೇಶದಲ್ಲಿ ಬೀದಿಗಳಲ್ಲಿ ಎಳೆಯಲಾಗಿತ್ತು. ಈ ಹುಡುಗಿ ಈಗ ಜಗತ್ತನ್ನು ಗೆಲ್ಲಲು ಹೊರಟಿದ್ದಾಳೆ ಆದರೆ ಈ ದೇಶದ ವ್ಯವಸ್ಥೆಗೆ ಅವಳು ಸೋತಿದ್ದಾಳೆ' ಎಂದು ಭಜರಂಗ್‌ ಪೂನಿಯಾ ಬರೆದಿದ್ದಾರೆ.

ಒಂದು ಪ್ರಖ್ಯಾತ ಮಾತಿದೆ. "ಕಾಡಿನ ಮಧ್ಯದಲ್ಲಿ ನಮ್ಮನ್ನು ಒಂಟಿಯಾಗಿ ಬಿಟ್ಟವನಿಗೆ ತೋಳಗಳು ನಮಗೆ ಏನು ಮಾಡಿದವು ಎಂದು ಕೇಳುವ ಹಕ್ಕಿಲ್ಲ" ತೋಳಗಳೇ ಹಾಗಿದ್ದರೆ ಕೇಳುವಂತವರಾಗಿ, ರಾಷ್ಟ್ರದ ಹೆಮ್ಮೆ, ರಾಷ್ಟ್ರದ ಮಗಳು ಕುಸ್ತಿಪಟುಗಳ ಮೇಲೆ ನಡೆದ ದೌರ್ಜನ್ಯದ ವಿರುದ್ಧ ತನ್ನ ಹಕ್ಕುಗಳಿಗಾಗಿ ಹೋರಾಡಿ ನ್ಯಾಯಕ್ಕಾಗಿ ಮೊರೆಯಿಡುತ್ತಿದ್ದಾಗ, ನೀವು ಅಲ್ಲಿ ಇರಲಿಲ್ಲ, ಆದ್ದರಿಂದ ನನ್ನನ್ನು ಅಭಿನಂದಿಸಲು ತಪ್ಪಾಗಿಯೂ ಬರಬೇಡಿ. ಕೆಟ್ಟ ಸಮಯದಲ್ಲಿ ನೀವು ಅವರೊಂದಿಗೆ ನಿಲ್ಲದಿದ್ದರೆ, ಅವರ ಯಶಸ್ಸಿನಲ್ಲಿ ಅವರನ್ನು ಬೆಂಬಲಿಸಲು ನಿಮಗೆ ಯಾವುದೇ ಹಕ್ಕಿಲ್ಲ. ಅವರು ದೇಶದ ಅತ್ಯುನ್ನತ ಸ್ಥಾನದಲ್ಲಿ ಕುಳಿತ ವ್ಯಕ್ತಿಯಾಗಲಿ ಅಥವಾ ಸಾಮಾನ್ಯ ವ್ಯಕ್ತಿಯಾಗಲಿ. ದೇಶದ ಭರವಸೆಯ ಆಟಗಾರರ ಪ್ರಾಬಲ್ಯ ಹೀಗೆಯೇ ಮುಂದುವರಿಯಬೇಕು ಎಂದು ಇನ್ನೊಬ್ಬರು ಪೂನಿಯಾ ಮಾತನ್ನು ಬೆಂಬಲಿಸಿ ಟ್ವೀಟ್‌ ಮಾಡಿದ್ದಾರೆ.

ವಿಶ್ವಚಾಂಪಿಯನ್ ಮಣಿಸಿ ಸೆಮೀಸ್‌ಗೆ ಲಗ್ಗೆ ಇಟ್ಟ ವಿನೇಶ್ ಒಟ್ಟು ಆಸ್ತಿ ಎಷ್ಟಿದೆ?

ನಾವು ನಿನ್ನೆಯೂ ವಿನೇಶ್‌ ಪೋಗಟ್‌ ಬೆಂಬಲಕ್ಕೆ ಇದ್ದೆವು. ಈಗಲೂ ಕೂಡ ಆಕೆಯ ಬೆಂಬಲಕ್ಕಿದ್ದೇವೆ ಎಂದು ಮತ್ತೊಬ್ಬರು ಬರೆದಿದ್ದಾರೆ. 'ವಿನೇಶ್ ಫೋಗಟ್ ಅವರ ನಿರ್ವಹಣೆ ಕುಸ್ತಿಪಟುಗಳು ಎದುರಿಸುತ್ತಿರುವ ಎಲ್ಲಾ ಕಿರುಕುಳ ಮತ್ತು ಅನ್ಯಾಯದ ವಿರುದ್ಧ ಸ್ವತಃ ಒಂದು ದೊಡ್ಡ ಹೇಳಿಕೆಯಾಗಿದೆ, ನಾವು ಅವಳ ಬಗ್ಗೆ ತುಂಬಾ ಹೆಮ್ಮೆಪಡುತ್ತೇವೆ..' ಎಂದು ಬರೆದುಕೊಂಡಿದ್ದಾರೆ.
ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕದಿಂದ ವಿನೇಶ್‌ ಪೋಗಟ್‌ ಕೇವಲ ಎರಡು ಗೆಲುವಿನ ದೂರದಲ್ಲಿದ್ದಾರೆ. ಇಂದು ರಾತ್ರಿ 10.15ಕ್ಕೆ ನಡೆಯಲಿರುವ ಸೆಮಿಫೈನಲ್‌ ಕಾದಾಟದಲ್ಲಿ ವಿನೇಶ್‌ ಪೋಗಟ್‌ಗೆ ಕ್ಯೂಬಾದ ಯುಸ್‌ನೈಲೆಸ್‌ ಗುಜ್ಮನ್‌ರನ್ನು ಎದುರಿಸಲಿದ್ದಾರೆ. ಈ ಪಂದ್ಯದ ಮೇಲೆ ದೇಶದ ಗಮನವಿದೆ.

ಸೆಮೀಸ್‌ಗೆ ಲಗ್ಗೆಯಿಟ್ಟ ವಿನೇಶ್ ಫೋಗಟ್: ಪದಕಕ್ಕೆ ಇನ್ನೊಂದೇ ಹೆಜ್ಜೆ ಬಾಕಿ

Latest Videos
Follow Us:
Download App:
  • android
  • ios