ಭಾರತದ ಮಹಿಳಾ ಕುಸ್ತಿಪಟು ಅಂತಿಮ್‌ಗೆ ಭಾರತೀಯ ಒಲಿಂಪಿಕ್ ಸಂಸ್ಥೆ ಮೂರು ವರ್ಷ ನಿಷೇಧ ಹೇರುವ ಸಾಧ್ಯತೆಯಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಪ್ಯಾರಿಸ್: ಒಲಿಂಪಿಕ್ಸ್‌ನ ಕ್ರೀಡಾ ಗ್ರಾಮದಲ್ಲಿ ತಮ್ಮ ಗುರುತಿನ ಕಾರ್ಡ್ ಅನ್ನು ಸಹೋದರಿಗೆ ನೀಡಿ ದುರ್ಬಳಕೆ ಮಾಡಿದ್ದಕ್ಕೆ ಭಾರತದ ಕುಸ್ತಿಪಟು ಅಂತಿಮ್‌ಗೆ ಭಾರತೀಯ ಒಲಿಂಪಿಕ್ ಸಂಸ್ಥೆ(ಐಒಎ) 3 ವರ್ಷ ನಿಷೇಧ ಹೇರುವ ಸಾಧ್ಯತೆ ಇದೆ ಎಂದು ತಿಳಿದು ಬ೦ದಿದೆ. ಅವರನ್ನು ಈಗಾಗಲೇ ಕ್ರೀಡಾ ಗ್ರಾಮದಿಂದ ಹೊರಹಾಕಲಾಗಿದ್ದು, ಭಾರತಕ್ಕೆ ಮರಳಿದ್ದಾರೆ. 

ಬುಧವಾರ ತಮ್ಮ ಸಾಮಾಗ್ರಿಯನ್ನು ತರಲು, ಅಂತಿಮ್ ತಮ್ಮ ಐಡಿ ಕಾರ್ಡ್‌ನ್ನು ಸಹೋದರಿ ನಿಶಾ ಪಂಘಲ್‌ಗೆ ನೀಡಿದ್ದರು. ಆಕೆ ಅಂತಿಮ್‌ ಐಡಿ ಕಾರ್ಡ್ ಬಳಸಿ ಕ್ರೀಡಾ ಗ್ರಾಮಕ್ಕೆ ಪ್ರವೇಶಿಸಿ, ಹಿಂದಿರುಗುವಾಗ ಸೆಕ್ಯುರಿಟಿ ಕೈಗೆ ಸಿಕ್ಕಿಬಿದ್ದಿದ್ದಾರೆ. ಕೂಡಲೇ ಪೊಲೀಸರ ವಶಕ್ಕೆ ನೀಡಲಾಗಿದ್ದು, ಪೊಲೀಸರು ಹೇಳಿಕೆ ದಾಖಲಿಸಿ ಬಿಡುಗಡೆ ಮಾಡಿದ್ದಾರೆ. 

ಸೆಮೀಸ್‌ನಲ್ಲಿ ಸೋತ ಕುಸ್ತಿಪಟು ಅಮನ್‌: ಇಂದು ಕಂಚಿನ ಪದಕಕ್ಕೆ ಫೈಟ್‌

ತಪ್ಪು ಮಾಡಿಲ್ಲ: ಅಂತಿಮ್

ಈ ಬಗ್ಗೆ ಸ್ಪಷ್ಟಣೆ ನೀಡಿರುವ ಅಂತಿಮ್, 'ಗೊಂದಲದಿಂದ ಹೀಗಾಗಿದೆ. ಉದ್ದೇಶ ಪೂರ್ವಕ ತಪ್ಪಾಗಿಲ್ಲ. ನನ್ನ ಕಾರ್ಡ್ ಪಡೆದಿದ್ದ ಸಹೋದರಿ ಕ್ರೀಡಾ ಗ್ರಾಮಕ್ಕೆ ತೆರಳಿ, ಒಳ ಪ್ರವೇಶಿಸಲು ಭದ್ರತಾ ಸಿಬ್ಬಂದಿ ಜತೆ ಅನುಮತಿ ಕೇಳಿದ್ದಾಳೆ. ಅವರು ಕಾರ್ಡ್ ಪರಿಶೀಲನೆಗಾಗಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ' ಎಂದಿದ್ದಾರೆ.

ಕುಸ್ತಿ: ಮೊದಲ ಸುತ್ತಿನಲ್ಲೇ ಸೋತ ಅಂತಿಮ್‌ ಪಂಘಲ್‌

ಭಾರತದ ತಾರಾ ಕುಸ್ತಿಪಟು ಅಂತಿಮ್ ಪಂಘಲ್‌ ಪ್ಯಾರಿಸ್‌ ಒಲಿಂಪಿಕ್ಸ್‌ನ ಮೊದಲ ಸುತ್ತಿನಲ್ಲೇ ಸೋತು ಅಭಿಯಾನ ಕೊನೆಗೊಳಿಸಿದ್ದರು. 2022ರ ವಿಶ್ವ ಕಿರಿಯರ ಚಾಂಪಿಯನ್‌ ಅಂತಿಮ್‌ ಅವರು ಬುಧವಾರ ಮಹಿಳೆಯರ 53 ಕೆ.ಜಿ. ವಿಭಾಗದ ಪಂದ್ಯದಲ್ಲಿ ಟರ್ಕಿಯ ಯೆಟ್ಗಿಲ್‌ ಝೈನೆಬ್‌ ವಿರುದ್ಧ 0-10 ಅಂಕಗಳಿಂದ ಹೀನಾಯ ಸೋಲನುಭವಿಸಿತು.

ಭಾರತೀಯರ ಪೈಕಿ ಕುಸ್ತಿಯಲ್ಲಿ ಪ್ಯಾರಿಸ್‌ ಒಲಿಂಪಿಕ್ಸ್‌ ಕೋಟಾ ಗೆದ್ದ ಮೊದಲಿಗರಾಗಿದ್ದ ಅಂತಿಮ್‌, ಪಂದ್ಯದುದ್ದಕ್ಕೂ ನೀರಸ ಪ್ರದರ್ಶನ ತೋರಿದರು. ಒಂದು ವೇಳೆ ಝೈನೆಪ್‌ ಫೈನಲ್‌ ಪ್ರವೇಶಿಸಿದರೆ ಅಂತಿಮ್‌ ಅವರು ರಿಪಿಕೇಜ್‌ ಸುತ್ತು ಪ್ರವೇಶಿಸಲಿದ್ದಾರೆ.

Big Breaking: ವಿನೇಶ್ ಫೋಗಾಟ್ ಮನವಿ ಅಂಗೀಕರಿಸಿದ ಕ್ರೀಡಾ ನ್ಯಾಯ ಮಂಡಳಿ..! ಸಿಹಿ ಸುದ್ದಿಗೆ ಕ್ಷಣಗಣನೆ

ಜಂಟಿ 14ನೇ ಸ್ಥಾನದಲ್ಲಿ ಗಾಲ್ಫರ್‌ ಅದಿತಿ, ದೀಕ್ಷಾ

ಪ್ಯಾರಿಸ್‌: ಒಲಿಂಪಿಕ್ಸ್‌ನ ಗಾಲ್ಫ್‌ನಲ್ಲಿ ಭಾರತೀಯರ ಸಾಧಾರಣ ಪ್ರದರ್ಶನ ಮುಂದುವರಿದಿದೆ. ಗುರುವಾರ 2ನೇ ಸುತ್ತಿನ ಬಳಿಕ ಅದಿತಿ ಅಶೋಕ್‌ ಹಾಗೂ ದೀಕ್ಷಾ ಡಾಗರ್‌ ಜಂಟಿ 14ನೇ ಸ್ಥಾನದಲ್ಲಿದ್ದಾರೆ. ಮೊದಲ ದಿನ 18 ಹೋಲ್‌ಗಳಿಗೆ ಚೆಂಡನ್ನು ಹೊಡೆಯಲು 72 ಶಾಟ್‌ ಬಳಸಿಕೊಂಡಿದ್ದ ಅದಿತಿ, 2ನೇ ದಿನ 71 ಶಾಟ್‌ಗಳನ್ನು ಉಪಯೋಗಿಸಿದರು. ಮತ್ತೊಂದೆಡೆ, ಮೊದಲ ದಿನ 71 ಶಾಟ್‌ಗಳನ್ನು ಬಳಸಿ 1 ಕಡಿಮೆ ಯತ್ನದ ಮೂಲಕ 7ನೇ ಸ್ಥಾನದಲ್ಲಿದ್ದ ದೀಕ್ಷಾ ಡಾಗರ್‌, 2ನೇ ದಿನ ತಮ್ಮ ಎಲ್ಲಾ 72 ಹೊಡೆತಗಳನ್ನು ಬಳಸಿಕೊಂಡರು. 4 ದಿನ ನಡೆಯುವ ಸ್ಪರ್ಧೆಯಲ್ಲಿ ಇನ್ನೂ 2 ಸುತ್ತು ನಡೆಯಬೇಕಿದ್ದು, ಪದಕ ಗೆಲ್ಲಬೇಕಿದ್ದರೆ ಅಸಾಧಾರಣ ಪ್ರದರ್ಶನ ನೀಡಬೇಕಿದೆ.