ಬ್ಯಾಂಕಾಕ್‌(ಜ.30): ಭಾರತದ ಶಟ್ಲರ್‌ಗಳಾದ ಪಿ.ವಿ.ಸಿಂಧು ಹಾಗೂ ಕಿದಂಬಿ ಶ್ರೀಕಾಂತ್‌ ಬ್ಯಾಡ್ಮಿಂಟನ್‌ ವಿಶ್ವ ಟೂರ್‌ ಫೈನಲ್ಸ್‌ ಟೂರ್ನಿಯಿಂದ ಹೊರಬಿದ್ದಿದ್ದಾರೆ. 

ಮಹಿಳಾ ಸಿಂಗಲ್ಸ್‌ ಗುಂಪು ಹಂತದ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಸಿಂಧು, ಥಾಯ್ಲೆಂಡ್‌ನ ಪೊರ್ನ್‌ಪಾವಿ ಚೊಚುವಾಂಗ್‌ ವಿರುದ್ಧ 21-18, 21-15 ಗೇಮ್‌ಗಳಲ್ಲಿ ಜಯಿಸಿದರು. ಮೊದಲೆರಡು ಪಂದ್ಯಗಳಲ್ಲಿ ಸೋಲುಂಡಿದ್ದ ಕಾರಣ ಸಿಂಧು ಸೆಮೀಸ್‌ಗೇರುವಲ್ಲಿ ವಿಫಲರಾದರು.

ವಿಶ್ವ ಟೂರ್‌ ಫೈನಲ್ಸ್‌: ಸೆಮೀಸ್‌ ರೇಸ್‌ನಿಂದ ಸಿಂಧು, ಶ್ರೀಕಾಂತ್‌ ಔಟ್‌

ಇನ್ನು ಪುರುಷರ ಸಿಂಗಲ್ಸ್‌ ಗುಂಪು ಹಂತದ 3ನೇ ಪಂದ್ಯದಲ್ಲಿ ಶ್ರೀಕಾಂತ್‌, ಹಾಂಕಾಂಗ್‌ನ ಆ್ಯಂಗುಸ್‌ ಕಾ ಲಾಂಗ್‌ ವಿರುದ್ಧ 21-12, 18-21, 19-21 ಗೇಮ್‌ಗಳಲ್ಲಿ ಸೋಲುಂಡರು. ಶ್ರೀಕಾಂತ್‌ಗಿದು ಸತತ 3ನೇ ಸೋಲು. ಮೂರೂ ಪಂದ್ಯಗಳಲ್ಲಿ ಮೊದಲ ಗೇಮ್‌ ಜಯಿಸಿ ಬಳಿಕ ಪಂದ್ಯ ಬಿಟ್ಟುಕೊಟ್ಟರು.