ವಿಶ್ವ ಅಂಡರ್-20 ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್: ಲಾಂಗ್ ಜಂಪ್ ಫೈನಲ್‌ಗೆ ಶೈಲಿ ಸಿಂಗ್
* ಕಿರಿಯರ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೇರಿದ ಶೈಲಿ ಸಿಂಗ್
* ಶೈಲಿ ಸಿಂಗ್ ಭಾರತದ ಮಹಿಳಾ ಲಾಂಗ್ ಜಂಪ್ ಅಥ್ಲೀಟ್
* ಆಗಸ್ಟ್ 22ರಂದು ನಡೆಯಲಿರುವ ಫೈನಲ್‌ನಲ್ಲಿ ಶೈಲಿ ಪದಕ ಗೆಲ್ಲುವ ನಿರೀಕ್ಷೆ
ನೈರೋಬಿ(ಆ.21): 17 ವರ್ಷದ ಶೈಲಿ ಸಿಂಗ್ ಇಲ್ಲಿ ನಡೆಯುತ್ತಿರುವ ವಿಶ್ವ ಅಂಡರ್-20 ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಮಹಿಳೆಯರ ಲಾಂಗ್ ಜಂಪ್ ಫೈನಲ್ ಪ್ರವೇಶಿಸಿದ್ದಾರೆ. ಅರ್ಹತಾ ಸುತ್ತಿನ ‘ಬಿ’ ಗುಂಪಿನಲ್ಲಿದ್ದ ಶೈಲಿ, 6.34 ಮೀ. ದೂರಕ್ಕೆ ನೆಗೆದು ಗುಂಪಿನಲ್ಲಿ ಮೊದಲ ಸ್ಥಾನ ಪಡೆದರು.
ಹೀಗಿತ್ತು ನೋಡಿ ಶೈಲಿ ಸಿಂಗ್ ಲಾಂಗ್ ಜಂಪ್ ಫೈನಲ್‌ಗೇರಿದ ಕ್ಷಣ:
ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಶೈಲಿ ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಆದರೆ ಅವರಿಗೆ ಸ್ವೀಡನ್‌ನ ಮಜ ಅಸ್ಕಾಗ್, ಬ್ರೆಜಿಲ್‌ನ ಮಯ್ಸಾ ಕ್ಯಾಂಪೊಸ್, ಜಮೈಕಾದ ಶಾಂಟೆ ಫೋರ್ಮನ್‌ರಿಂದ ಪ್ರಬಲ ಪೈಪೋಟಿ ಎದುರಾಗಲಿದೆ. ‘ಎ’ ಗುಂಪಿನಲ್ಲಿದ್ದ ಈ ಮೂವರು ಕ್ರಮವಾಗಿ, 6.39 ಮೀ, 6.36 ಮೀ., ಹಾಗೂ 6.27 ಮೀ. ದೂರಕ್ಕೆ ನೆಗೆದು ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ.
ಕಂಚು ಗೆದ್ದ ಭಾರತ ಮಿಶ್ರ ರಿಲೇ ತಂಡಕ್ಕೆ ಶಹಬ್ಬಾಶ್ ಎಂದು ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಮುಖ್ಯಸ್ಥ
17 ವರ್ಷದ ಶೈಲಿ ಸಿಂಗ್ ಬೆಂಗಳೂರಿನಲ್ಲಿರುವ ಅಂಜು ಬಾಬಿ ಜಾರ್ಜ್ ಅಕಾಡಮಿಯಲ್ಲಿ ತರಬೇತಿ ಪಡೆದಿದ್ದು, ಅಂಜು ಬಾಬಿ ಜಾರ್ಜ್ ಹಾಗೂ ಮತ್ತವರ ಪತಿ ರಾಬರ್ಟ್ ಬಾಬಿ ಜಾರ್ಜ್ ಮಾರ್ಗದರ್ಶನದಲ್ಲಿ ಅಭ್ಯಾಸ ನಡೆಸಿ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದಾರೆ. ಉತ್ತರ ಪ್ರದೇಶ ಮೂಲದ ಶೈಲಿ ಸಿಂಗ್ ಅಂಜು ಬಾಬಿ ಜಾರ್ಜ್ ಗರಡಿಯಲ್ಲಿ ಪಳಗಿ ಮಿಂಚಿನ ಪ್ರದರ್ಶನ ತೋರಿದ್ದಾರೆ.