ಕಂಚು ಗೆದ್ದ ಭಾರತ ಮಿಶ್ರ ರಿಲೇ ತಂಡಕ್ಕೆ ಶಹಬ್ಬಾಶ್ ಎಂದು ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಮುಖ್ಯಸ್ಥ
* ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಮಿಶ್ರ ರಿಲೇ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಭಾರತ
* 3 ನಿಮಿಷ 20.60 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಪದಕ ಗೆದ್ದ ಭಾರತ ರಿಲೇ ತಂಡ
* ಭಾರತ ರಿಲೇ ತಂಡದ ಪ್ರದರ್ಶನವನ್ನು ಕೊಂಡಾಡಿದ ವಿಶ್ವ ಅಥ್ಲೆಟಿಕ್ಸ್ ಫೆಡರೇಷನ್ ಮುಖ್ಯಸ್ಥ
ನೈರೋಬಿ(ಆ.19): ಕರ್ನಾಟಕದ ಪ್ರಿಯಾ ಎಚ್ ಮೋಹನ್ ಅವರನ್ನೊಳಗೊಂಡ ಭಾರತ 4*400 ಮಿಶ್ರ ರಿಲೇ ತಂಡವು ಕಂಚಿನ ಪದಕ ಗೆಲ್ಲುವ ಮೂಲಕ ಇಡೀ ದೇಶವೇ ಹೆಮ್ಮೆ ಪಡುವಂತಹ ಸಾಧನೆ ಮಾಡಿದೆ. ಇದೀಗ ಭಾರತ ಮಿಶ್ರ ರಿಲೇ ತಂಡಕ್ಕೆ ವಿಶ್ವ ಅಥ್ಲೆಟಿಕ್ಸ್ ಫೆಡರೇಷನ್ ಮುಖ್ಯಸ್ಥ ಸೆಬಾಸ್ಟಿನ್ ಕೋವ್ ಅಭಿನಂದನೆ ಸಲ್ಲಿಸಿ ಹುರಿದುಂಬಿಸಿದ್ದಾರೆ.
ನಿಮ್ಮ ಪ್ರದರ್ಶನ ನೋಡಿ ನನಗೆ ತುಂಬಾ ಖುಷಿಯಾಯಿತು. ಸಿಕ್ಕ ಅವಕಾಶವನ್ನು ಸರಿಯಾಗಿಯೇ ಬಳಸಿಕೊಂಡಿದ್ದೀರ. ನಿಮ್ಮ ಸಾಧನೆಗೆ ಅಭಿನಂದನೆಗಳು ಎಂದು ಭಾರತ ಮಿಶ್ರ ರಿಲೇ ತಂಡಕ್ಕೆ ವಿಶ್ವ ಅಥ್ಲೆಟಿಕ್ಸ್ ಫೆಡರೇಷನ್ ಮುಖ್ಯಸ್ಥ ಸೆಬಾಸ್ಟಿನ್ ಕೋವ್ ಶುಭ ಹಾರೈಸಿದ್ದಾರೆ.
ಬುಧವಾರ(ಆ.19) ನಡೆದ ಫೈನಲ್‌ನಲ್ಲಿ ಪ್ರಿಯಾ ಮೋಹನ್, ಸಮ್ಮಿ, ಭರತ್ ಮತ್ತು ಕಪಿಲ್ ಅವರನ್ನೊಳಗೊಂಡ ತಂಡವು 3 ನಿಮಿಷ 20.60 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಕಂಚು ಗೆದ್ದಿತು. ನೈಜೀರಿಯಾ(3 ನಿ.19.70 ಸೆ.) ಚಿನ್ನ ಗೆದ್ದರೆ, ಪೋಲಾಂಡ್(3 ನಿ. 19.80 ಸೆ.) ಬೆಳ್ಳಿಗೆ ತೃಪ್ತಿಗೊಂಡಿತು.
ಜೂನಿಯರ್ ಅಥ್ಲೆಟಿಕ್ಸ್: ಮಿಶ್ರ ರಿಲೇಯಲ್ಲಿ ಕಂಚು ಗೆದ್ದ ಭಾರತ
ಸೆಬಾಸ್ಟಿನ್ ಕೋವ್‌ಗಿದೆ ಭಾರತದ ನಂಟು: ಅಥ್ಲೆಟಿಕ್ಸ್ ದಂತಕಥೆ ಸೆಬಾಸ್ಟಿನ್ ಕೋವ್‌ಗೆ ಭಾರತದ ನಂಟಿದೆ ಎನ್ನುವುದು ಬಹುತೇಕರಿಗೆ ಗೊತ್ತಿಲ್ಲ. ಸೆಬಾಸ್ಟಿನ್ ಕೋವ್ ಅವರ ತಂದೆ ಪೀಟರ್ ಕೋವ್ ಅಥ್ಲೆಟಿಕ್ಸ್ ಕೋಚ್ ಆಗಿದ್ದರು. ಹಾಗೂ ಸೆಬಾಸ್ಟಿನ್ ಕೋವ್ ತಾಯಿ ಟೀನಾ ಏಂಜೆಲಾ ಲಾಲ್ ಪಂಜಾಬಿ ಮೂಲದವರು. ಟೀನಾ ಏಂಜಲ್ ತಂದೆ ಸರ್ದಾರಿ ಲಾಲ್ ಮಲ್ಹೋತ್ರ ಹಾಗೂ ತಾಯಿ ಐರ್ಲೆಂಡಿನ ವಿರಾ.