* ಅಂಡರ್‌ 20 ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಮತ್ತೊಂದು ಪದಕ ಗೆದ್ದ ಭಾರತ* 10 ಸಾವಿರ ಮೀಟರ್ ನಡಿಗೆ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ಅಮಿತ್ ಕುಮಾರ್* ಈ ಮೊದಲು ಭಾರತ ಮಿಶ್ರ ರಿಲೇ ತಂಡ ಕಂಚಿನ ಪದಕ ಜಯಿಸಿತ್ತು.

ನೈರೋಬಿ(ಆ.21): ಅಂಡರ್ 20 ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನ 10,000 ಮೀಟರ್ ನಡಿಗೆ ಸ್ಪರ್ಧೆಯನ್ನು 42 ನಿಮಿಷ 17:94 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸುವ ಮೂಲಕ ಬೆಳ್ಳಿ ಪದಕ ಜಯಿಸಿ ಇತಿಹಾಸ ನಿರ್ಮಿಸಿದ್ದಾರೆ. ಅಂತರಾರಾಷ್ಟ್ರೀಯ ಮಟ್ಟದಲ್ಲಿ ನಡಿಗೆ ಸ್ಪರ್ಧೆಯಲ್ಲಿ ಇದೇ ಮೊದಲ ಬಾರಿಗೆ ಭಾರತ ಪದಕ ಜಯಿಸಿದ ಸಾಧನೆ ಮಾಡಿದೆ.

ಅಂದಹಾಗೆ ಅಂಡರ್ 20 ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕಿದು ಎರಡನೇ ಪದಕವಾಗಿದೆ. ಈ ಮೊದಲು 4*400 ಮಿಶ್ರ ರಿಲೇ ಸ್ಪರ್ಧೆಯಲ್ಲಿ ಭಾರತ ತಂಡ ಕಂಚಿನ ಪದಕ ಗೆದ್ದು ಬೀಗಿತ್ತು. ಇದೀಗ ಅಮಿತ್ ಕುಮಾರ್ ನಡಿಗೆ ಸ್ಪರ್ಧೆಯಲ್ಲಿ ಒಂದು ಹೆಜ್ಜೆ ಮುಂದೆ ಸಾಗಿ ರಜತ ಪದಕಕ್ಕೆ ಕೊರಳೊಡ್ಡಿದ್ದಾರೆ.

Scroll to load tweet…

ಇನ್ನು ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ಗೆ ಆತಿಥ್ಯವಹಿಸಿರುವ ಕೀನ್ಯಾದ ಹರಿಸ್ಟೋನ್‌ ವಾನೊಯಿ 42:10:84 ನಿಮಿಷಗಳಲ್ಲಿ ಗುರಿ ತಲುಪಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದರೆ, ಮತ್ತೋರ್ವ ಕೀನ್ಯಾದ ಅಥ್ಲೀಟ್‌ ಪೌಲ್‌ ಮೆಗ್ರಾಥ್ 42:31:11 ನಿಮಿಷಗಳಲ್ಲಿ ಗುರಿ ತಲುಪಿ ಕಂಚಿನ ಪದಕ ಜಯಿಸಿದರು.

ಜೂನಿಯರ್ ಅಥ್ಲೆಟಿಕ್ಸ್‌: ಮಿಶ್ರ ರಿಲೇಯಲ್ಲಿ ಕಂಚು ಗೆದ್ದ ಭಾರತ

Scroll to load tweet…

ಒಂದೇ ಆವೃತ್ತಿಯಲ್ಲಿ ಎರಡು ಪದಕ: 20 ವರ್ಷದೊಳಗಿನವರ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಇದು ಭಾರತ ಗೆದ್ದ 6ನೇ ಪದಕ ಇದಾಗಿದೆ. ನೈರೋಬಿಯಲ್ಲಿ ನಡೆಯುತ್ತಿರುವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ಗೂ ಮುನ್ನ ಭಾರತ ಕೇವಲ 4 ಪದಕಗಳನ್ನು ಮಾತ್ರ ಜಯಿಸಿತ್ತು. ಈ ಮೊದಲು ಸೀಮಾ ಆಂಟಿಲ್‌(ಡಿಸ್ಕಸ್‌ ಥ್ರೋ ಕಂಚು, 2002), ನವಜೀತ್‌ ಕೌರ್‌ ದಿಲ್ಲೋನ್‌(ಡಿಸ್ಕಸ್‌ ಥ್ರೋ-ಕಂಚು, 2014), ಟೋಕಿಯೋ ಒಲಿಂಪಿಕ್ಸ್‌ ಚಿನ್ನ ಪದಕ ವಿಜೇತ ನೀರಜ್‌ ಚೋಪ್ರಾ(ಜಾವೆಲಿನ್‌ ಥ್ರೋ-ಚಿನ್ನ, 2016), ಹಿಮಾ ದಾಸ್‌(400 ಮೀ. ಓಟ -ಚಿನ್ನ, 2018) ಪದಕ ಗೆದ್ದಿದ್ದರು.