* ವಿಂಬಲ್ಡನ್‌ ಟೆನಿಸ್‌ ಗ್ರ್ಯಾನ್‌ ಸ್ಲಾಂನಲ್ಲಿ ನಾಲ್ಕನೇ ಸುತ್ತಿಗೆ ಲಗ್ಗೆಯಿಟ್ಟ ಫೆಡರರ್* ರೋಜರ್‌ ಫೆಡರರ್‌ ದಾಖಲೆಯ 18ನೇ ಬಾರಿಗೆ ವಿಂಬಲ್ಡನ್‌ ಟೂರ್ನಿಯ 4ನೇ ಸುತ್ತು ಪ್ರವೇಶಿಸಿದ್ದಾರೆ.* ಗ್ರ್ಯಾನ್‌ ಸ್ಲಾಂಗಳಲ್ಲಿ ಫೆಡರರ್‌ 4ನೇ ಸುತ್ತಿಗೇರಿರುವುದು ಇದು 69ನೇ ಬಾರಿ.

ಲಂಡನ್(ಜು.05)‌: 20 ಗ್ರ್ಯಾನ್‌ ಸ್ಲಾಂಗಳ ಒಡೆಯ ರೋಜರ್‌ ಫೆಡರರ್‌ ದಾಖಲೆಯ 18ನೇ ಬಾರಿಗೆ ವಿಂಬಲ್ಡನ್‌ ಟೂರ್ನಿಯ 4ನೇ ಸುತ್ತು ಪ್ರವೇಶಿಸಿದ್ದಾರೆ. ಗ್ರ್ಯಾನ್‌ ಸ್ಲಾಂಗಳಲ್ಲಿ ಫೆಡರರ್‌ 4ನೇ ಸುತ್ತಿಗೇರಿರುವುದು ಇದು 69ನೇ ಬಾರಿ. ಇದೂ ಕೂಡ ಒಂದು ದಾಖಲೆ.

39 ವರ್ಷದ ಫೆಡರರ್‌, ಪುರುಷರ ಸಿಂಗಲ್ಸ್‌ 3ನೇ ಸುತ್ತಿನಲ್ಲಿ ಬ್ರಿಟನ್‌ನ ಕ್ಯಾಮರೂನ್‌ ನೊರ್ರಿ ವಿರುದ್ಧ 6-4, 6-4,5-7, 6-4 ಸೆಟ್‌ಗಳಲ್ಲಿ ಜಯಗಳಿಸಿದರು. 9ನೇ ವಿಂಬಲ್ಡನ್‌ ಟ್ರೋಫಿ ಮೇಲೆ ಕಣ್ಣಿಟ್ಟಿರುವ ಫೆಡರರ್‌, 4ನೇ ಸುತ್ತಿನಲ್ಲಿ ಇಟಲಿಯ ಲೊರೆನ್ಜೊ ಸೊನೆಗೊ ವಿರುದ್ಧ ಸೆಣಸಲಿದ್ದಾರೆ.

Scroll to load tweet…

ಇದೇ ವೇಳೆ ಪುರುಷರ ಸಿಂಗಲ್ಸ್‌ನಲ್ಲಿ 2ನೇ ಶ್ರೇಯಾಂಕಿತ ರಷ್ಯಾದ ಡ್ಯಾನಿಲ್‌ ಮೆಡ್ವೆಡೆವ್‌, 4ನೇ ಶ್ರೇಯಾಂಕಿತ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌, ಮಹಿಳಾ ಸಿಂಗಲ್ಸ್‌ನಲ್ಲಿ ವಿಶ್ವ ನಂ.1 ಆಶ್ಲೆ ಬಾರ್ಟಿ, ಫ್ರೆಂಚ್‌ ಓಪನ್‌ ಚಾಂಪಿಯನ್‌ ಬಾರ್ಬೊರಾ ಕ್ರೇಜಿಕೋವಾ ಕೂಡ 4ನೇ ಸುತ್ತಿಗೇರಿದ್ದಾರೆ.

Scroll to load tweet…

ವಿಂಬಲ್ಡನ್‌: ಐತಿಹಾಸಿಕ ಪಂದ್ಯ ಗೆದ್ದ ಸಾನಿಯಾ-ಬೋಪಣ್ಣ!

ಸಾನಿಯಾ-ಬೋಪಣ್ಣ ಮುನ್ನಡೆ: ಮಿಶ್ರ ಡಬಲ್ಸ್‌ನಲ್ಲಿ ಭಾರತದ ಸಾನಿಯಾ ಮಿರ್ಜಾ ಹಾಗೂ ರೋಹನ್‌ ಬೋಪಣ್ಣ 3ನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಬ್ರಿಟನ್‌ನ ಮೆಕ್‌ಹಗ್‌ ಹಾಗೂ ವೆಂಬ್ಲೆ ಸ್ಮಿತ್‌ ಜೋಡಿ ವಿರುದ್ಧ 6-3, 6-1ರಲ್ಲಿ ಸುಲಭ ಗೆಲುವು ಸಾಧಿಸಿದರು.