ವಿಂಬಲ್ಡನ್: ಐತಿಹಾಸಿಕ ಪಂದ್ಯ ಗೆದ್ದ ಸಾನಿಯಾ-ಬೋಪಣ್ಣ!
* ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಎರಡನೇ ಸುತ್ತು ಪ್ರವೇಶಿಸಿದ ಸಾನಿಯಾ ಮಿರ್ಜಾ-ರೋಹನ್ ಬೋಪಣ್ಣ ಜೋಡಿ
* ಅಂಕಿತಾ ರೈನಾ- ರಾಮ್‌ಕುಮಾರ್ ಎದುರುಮಿರ್ಜಾ-ಬೋಪಣ್ಣ ಜೋಡಿಗೆ ಗೆಲುವು
* ಗ್ರ್ಯಾನ್ ಸ್ಲಾಂ ಇತಿಹಾಸದಲ್ಲಿ ಎರಡು ಭಾರತೀಯ ತಂಡಗಳು ಪರಸ್ಪರ ಮುಖಾಮುಖಿಯಾಗಿದ್ದು ಇದೇ ಮೊದಲು
ಲಂಡನ್(ಜು.03): ವಿಂಬಲ್ಡನ್ ಮಿಶ್ರ ಡಬಲ್ಸ್ ವಿಭಾಗದಲ್ಲಿ ನಡೆದ ಸರ್ವ ಭಾರತೀಯರ ಪಂದ್ಯದಲ್ಲಿ ರಾಮ್‌ಕುಮಾರ್ ರಾಮನಾಥನ್-ಅಂಕಿತಾ ರೈನಾ ಜೋಡಿ ವಿರುದ್ಧ ಗೆದ್ದ ರೋಹನ್ ಬೋಪಣ್ಣ ಹಾಗೂ ಸಾನಿಯಾ ಮಿರ್ಜಾ 2ನೇ ಸುತ್ತಿಗೆ ಪ್ರವೇಶಿಸಿದೆ.
ಗ್ರ್ಯಾನ್‌ಸ್ಲಾಂ ಇತಿಹಾಸದಲ್ಲಿ ಎರಡು ಭಾರತೀಯ ತಂಡಗಳು ಪರಸ್ಪರ ಮುಖಾಮುಖಿಯಾಗಿದ್ದು ಇದೇ ಮೊದಲು. ಸಿಂಗಲ್ಸ್ ವಿಭಾಗದಲ್ಲಿ ಗ್ರ್ಯಾನ್ ಸ್ಲಾಂ ಪ್ರಧಾನ ಸುತ್ತಿಗೇರಲು 21 ಯತ್ನಗಳಲ್ಲಿ ವಿಫಲರಾಗಿದ್ದ ರಾಮ್‌ಕುಮಾರ್, ವಿಂಬಲ್ಡನ್ ಗ್ರ್ಯಾನ್ ಸ್ಲಾಂಗೆ ಪಾದಾರ್ಪಣೆ ಮಾಡಿದರು. ಸಾನಿಯಾ ಹಾಗೂ ಬೋಪಣ್ಣ ಜೋಡಿ, 6-2, 7-6(5) ಸೆಟ್‌ಗಳಲ್ಲಿ ಸುಲಭವಾಗಿ ಜಯಿಸಿತು.
ವಿಂಬಲ್ಡನ್:3ನೇ ಸುತ್ತಿಗೆ ಲಗ್ಗೆಯಿಟ್ಟ ಜೋಕೋ-ಜ್ವೆರೆವ್
ರೋಹನ್ ಬೋಪಣ್ಣ ಹಾಗೂ ದಿವಿಜ್ ಶರಣ್ ಜೋಡಿ ಪುರಷರ ಡಬಲ್ಸ್ ವಿಭಾಗದಲ್ಲಿ ಮೊದಲ ಸುತ್ತಿನಲ್ಲೇ ಸೋತು ಟೂರ್ನಿಯಿಂದ ಹೊರಬಿದ್ದಿದೆ. ಇದೇ ವೇಳೆ ಪುರುಷರ ಸಿಂಗಲ್ಸ್‌ನಲ್ಲಿ ರೋಜರ್ ಫೆಡರರ್, ಡ್ಯಾನಿಲ್ ಮೆಡ್ವೆಡೆವ್, ಮಹಿಳಾ ಸಿಂಗಲ್ಸ್‌ನಲ್ಲಿ ಇಗಾ ಸ್ವಿಯಾಟೆಕ್, ಕ್ಯಾರೋಲಿನಾ ಪ್ಲಿಸ್ಕೋವಾ 4ನೇ ಸುತ್ತಿಗೆ ಪ್ರವೇಶಿಸಿದ್ದಾರೆ.