1,119 ಕೋಟಿ ರೂ ಮೊತ್ತದ ಪ್ರಶಸ್ತಿ: ಜೋಕೋವಿಚ್ ದಾಖಲೆ!
* ದಾಖಲೆಯ 20ನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಜಯಿಸಿದ ನೊವಾಕ್ ಜೋಕೋವಿಚ್
* ರೋಜರ್ ಫೆಡರರ್. ರಾಫೆಲ್ ನಡಾಲ್ ಹಾಗೂ ಜೋಕೋವಿಚ್ ತಲಾ 20 ಗ್ರ್ಯಾನ್‌ಸ್ಲಾಂ ಗೆದ್ದಿದ್ದಾರೆ.
* 150 ಮಿಲಿಯನ್ ಡಾಲರ್ ಬಹುಮಾನ ಗೆದ್ದ ಮೊದಲ ಟೆನಿಸಿಗ ಎನ್ನುವ ದಾಖಲೆ ನೊವಾಕ್ ಪಾಲು
ಲಂಡನ್(ಜು.13): ವಿಂಬಲ್ಡನ್ ಚಾಂಪಿಯನ್ ಆಗುವ ಮೂಲಕ 20ನೇ ಗ್ರ್ಯಾನ್ ಸ್ಲಾಂ ಪ್ರಶಸ್ತಿ ಗೆದ್ದ ಸರ್ಬಿಯಾದ ಟೆನಿಸಿಗ, ವಿಶ್ವ ನಂ.1 ನೊವಾಕ್ ಜೋಕೋವಿಚ್ ಒಟ್ಟು 150 ಮಿಲಿಯನ್ ಡಾಲರ್ (ಅಂದಾಜು 1,119 ಕೋಟಿ ರು.) ಬಹುಮಾನ ಮೊತ್ತ ಗಳಿಸಿದ ವಿಶ್ವದ ಮೊದಲ ಟೆನಿಸಿಗ ಎನ್ನುವ ದಾಖಲೆ ಬರೆದಿದ್ದಾರೆ.
ಜೋಕೋವಿಚ್ 20 ಗ್ರ್ಯಾನ್ ಸ್ಲಾಂ ಸೇರಿ ಒಟ್ಟು 85 ಪ್ರಶಸ್ತಿಗಳನ್ನು ಜಯಿಸಿದ್ದಾರೆ. 20 ಗ್ರ್ಯಾನ್ ಸ್ಲಾಂ ಸೇರಿ 103 ಟ್ರೋಫಿಗಳನ್ನು ಗೆದ್ದಿರುವ ರೋಜರ್ ಫೆಡರರ್ 130 ಮಿಲಿಯನ್ ಡಾಲರ್ ಬಹುಮಾನ ಮೊತ್ತದೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ಜೋಕೋವಿಚ್ 2010ರ ಬಳಿಕ 19 ಗ್ರ್ಯಾನ್ ಸ್ಲಾಂ ಜಯಿಸಿದ್ದಾರೆ. ಫೆಡರರ್ ಈ ಅವಧಿಯಲ್ಲಿ ಗೆದ್ದಿರುವುದು ಕೇವಲ 4 ಗ್ರ್ಯಾನ್ ಸ್ಲಾಂ ಮಾತ್ರ. ಕಳೆದೊಂದು ದಶಕದಲ್ಲಿ ಗ್ರ್ಯಾನ್ ಸ್ಲಾಂ ಸೇರಿ ಬಹುತೇಕ ಟೂರ್ನಿಗಳ ಬಹುಮಾನ ಮೊತ್ತ ಏರಿಕೆಯಾಗಿರುವ ಕಾರಣ, ಫೆಡರರ್‌ಗಿಂತ ಕಡಿಮೆ ಟ್ರೋಫಿ ಜಯಿಸಿದರೂ ಬಹುಮಾನ ಮೊತ್ತ ಗಳಿಕೆಯಲ್ಲಿ ಜೋಕೋವಿಚ್ ಮುಂದಿದ್ದಾರೆ.
ವಿಂಬಲ್ಡನ್ ಪ್ರಶಸ್ತಿ ಮುಡಿಗೇರಿಸಿ ಫೆಡರರ್, ನಡಾಲ್ ದಾಖಲೆ ಸರಿಗಟ್ಟಿದ ಜೊಕೊವಿಚ್!
ಪುಟ್ಟ ಅಭಿಮಾನಿಗೆ ರ‍್ಯಾಕೆಟ್ ಉಡುಗೊರೆ ನೀಡಿದ ಜೋಕೋ!
6ನೇ ಬಾರಿಗೆ ವಿಂಬಲ್ಡನ್ ಗ್ರ್ಯಾನ್ ಸ್ಲಾಂ ಗೆದ್ದ ಬಳಿಕ ನೋವಾಕ್ ಜೋಕೋವಿಚ್, ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಬಾಲಕಿಗೆ ತಮ್ಮ ರ‍್ಯಾಕೆಟ್ ಉಡುಗೊರೆ ನೀಡಿದರು. ವಿಶ್ವ ನಂ.1 ಆಟಗಾರನ ಈ ಔದಾರ್ಯತೆ ಅಭಿಮಾನಿಗಳ ಗಮನ ಸೆಳೆಯಿತು.