ಪ್ರತಿಷ್ಠಿತ ವಿಂಬಲ್ಡ್ ಪ್ರಶಸ್ತಿ ಗದ್ದ ನೋವಾಕ್ ಜೊಕೋವಿಚ್ ಫೈನಲ್ ಪಂದ್ಯದಲ್ಲಿ ಇಟಲಿಯ ಬೆರೆಟ್ಟಿನಿ ವಿರುದ್ಧ ಗೆಲುವು 6ನೇ ವಿಂಬಲ್ಡನ್ ಪ್ರಶಸ್ತಿ ದೊತೆ ನಡಾಲ್, ಫೆಡರರ್ ದಾಖಲೆ ಸರಿಗಟ್ಟಿದ ಜೊಕೋ  

ಇಂಗ್ಲೆಂಡ್(ಜು.11): ಪ್ರತಿಷ್ಠಿತ ವಿಂಬಲ್ಡನ್ ಓಪನ್ ಟೆನಿಸ್ ಟೂರ್ನಿ ಫೈನಲ್ ಪಂದ್ಯದಲ್ಲಿ ನೋವಾಕ್ ಜೊಕೋವಿಚ್ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಇಟಲಿಯ ಮ್ಯಾಟಿಯೋ ಬೆರೆಟ್ಟಿನಿ ವಿರುದ್ಧ 4-0 ಅಂತರದ ಗೆಲುವು ದಾಖಲಿಸಿದ್ದಾರೆ. ಈ ಮೂಲಕ 6ನೇ ಬಾರಿಗೆ ವಿಂಬಲ್ಡನ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

Scroll to load tweet…

ಫೈನಲ್ ಪಂದ್ಯದಲ್ಲಿ ಇಟಲಿಯ ಬೆರೆಟ್ಟಿನಿ ಕಠಿಣ ಹೋರಾಟ ನೀಡಿದರೂ ಜೋಕೋವಿಚ್ ವಿರುದ್ಧ ಮುನ್ನಡೆ ಸಾಧಿಸಲು ಸಾಧ್ಯವಾಗಲಿಲ್ಲ. ಮೊದಲ ಗೇಮ್‌ನಿಂದಲೇ ಮುನ್ನಡೆ ಕಾಯ್ದುಕೊಂಡ ನೋವಾಕ್, 6-7(4), 6-4, 6-4, 6-3 ಅಂತರದಲ್ಲಿ ಗೆಲುವು ದಾಖಲಿಸಿದರು.

Scroll to load tweet…

ಈ ಗೆಲುವಿನೊಂದಿಗೆ ನೋವಾಕ್ ಜೊಕೋವಿಚ್ 20ನೇ ಗ್ರ್ಯಾಂಡ್ ಸ್ಲಾಂ ಪ್ರಶಸ್ತಿ ಗೆದ್ದುಕೊಂಡರು. ಇಷ್ಟೇ ಅಲ್ಲ ದಿಗ್ಗಜ ರೋಜರ್ ಫೆಡರರ್ ಹಾಗೂ ರಾಫೆಲ್ ನಡಾಲ್ ಸಾಧನೆಯನ್ನು ಸರಿಗಟ್ಟಿದ್ದಾರೆ.

Scroll to load tweet…