ದೋಹಾ(ಡಿ.22): ಯೂತ್‌ ಒಲಿಂಪಿಕ್‌ ಸ್ವರ್ಣ ವಿಜೇತ ಭಾರತದ ವೇಟ್‌ಲಿಫ್ಟರ್‌ ಜೆರೆಮಿ ಲಾಲ್ರಿನ್ನುಂಗಾ ಇಲ್ಲಿ ನಡೆಯುತ್ತಿರುವ ಕತಾರ್‌ ಅಂತಾರಾಷ್ಟ್ರೀಯ ಕಪ್‌ ಟೂರ್ನಿಯಲ್ಲಿ ದಾಖಲೆಯ ಪ್ರದರ್ಶನ ನೀಡಿದ್ದಾರೆ. 

ಸುಳ್ಳು ವಯಸ್ಸು ನೀಡಿ ಸಿಕ್ಕಿಬಿದ್ದ ಅಥ್ಲೀಟ್ಸ್‌!

67 ಕೆ.ಜಿ ವಿಭಾಗದಲ್ಲಿ ಒಟ್ಟು 306 ಕೆ.ಜಿ ಭಾರ ಎತ್ತುವ ಮೂಲಕ ಬೆಳ್ಳಿ ಪದಕ ಮುಡಿಗೇರಿಸಿಕೊಂಡ 17 ವರ್ಷದ ಜೆರೆಮಿ ಒಂದೇ ಸ್ಪರ್ಧೆಯಲ್ಲಿ ಬರೋಬ್ಬರಿ 27 ದಾಖಲೆಗಳನ್ನು ಮುರಿದರು. ಒಟ್ಟು 12 ಅಂತಾರಾಷ್ಟ್ರೀಯ ದಾಖಲೆಗಳನ್ನು, ವಿಶ್ವ ಯೂತ್‌ ಮತ್ತು ಏಷ್ಯನ್‌ ಯೂತ್‌ನ ತಲಾ ಮೂರು ದಾಖಲೆ ಹಾಗೂ ಕಾಮನ್ವೆಲ್ತ್‌ ಗೇಮ್ಸ್‌ನ 6 ದಾಖಲೆಗಳನ್ನು ಮುರಿದಿದ್ದಾರೆ. ಇದಲ್ಲದೇ, ಯೂತ್‌ ನ್ಯಾಷನಲ್‌, ಜೂನಿಯರ್‌ ನ್ಯಾಷನಲ್‌ ಮತ್ತು ಸೀನಿಯರ್‌ ನ್ಯಾಷನಲ್‌ನ ತಲಾ ಐದು ದಾಖಲೆಗಳನ್ನೂ ಪುಡಿಗುಟ್ಟಿದ್ದಾರೆ.

2020ರ ಒಲಿಂಪಿಕ್ಸ್‌ಗೆ 90,000 ಕೋಟಿ ಬಜೆಟ್‌!

17 ವರ್ಷದ ಮಿಜೋರಾಂನ ಜೆರೆಮಿ ತನ್ನದೇ ಹೆಸರಿನಲ್ಲಿದ್ದ ವಿಶ್ವ ಯೂತ್‌ ಮತ್ತು ಏಷ್ಯನ್‌ ಯೂತ್‌ ದಾಖಲೆಯನ್ನು ಅಳಿಸಿಹಾಕಿ ಹೊಸ ದಾಖಲೆ ಬರೆದರು. ಜೆರ್ಕ್ ಹಾಗೂ ಸ್ಯ್ನಾಚ್ ವಿಭಾಗದಲ್ಲಿ ಕ್ರಮವಾಗಿ 140 ಕೆಜಿ ಹಾಗೂ 166 ಕೆಜಿ ಬಾರ ಎತ್ತುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.