Asianet Suvarna News Asianet Suvarna News

ಭಾರತಕ್ಕೆ ಮರಳಿದ ಚೆಸ್ ಮಾಸ್ಟರ್ ವಿಶ್ವನಾಥನ್ ಆನಂದ್‌ ಬೆಂಗಳೂರಿನಲ್ಲಿ ಕ್ವಾರಂಟೈನ್!

ಕೊರೋನಾ ವೈರಸ್ ಕಾರಣ ವಿದೇಶದಲ್ಲಿ ಸಿಲುಕಿದ್ದ ಮಾಜಿ ವಿಶ್ವಚಾಂಪಿಯನ್ ವಿಶ್ವನಾಥನ್ ಆನಂದ್ 3 ತಿಂಗಳ ಬಳಿಕ ಭಾರತಕ್ಕೆ ಆಗಮಿಸಿದ್ದಾರೆ. ತವರಿಗೆ ಆಗಮಿಸಿದ ವಿಶ್ವನಾಥನ್‌ ಬೆಂಗಳೂರಿನಲ್ಲಿ ಕ್ವಾರಂಟೈನ್ ಆಗಿದ್ದಾರೆ.

Viswanathan Anand finally returned to India after being stuck in Germany
Author
Bengaluru, First Published May 30, 2020, 6:33 PM IST
  • Facebook
  • Twitter
  • Whatsapp

ಬೆಂಗಳೂರು(ಮೇ.30): ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಕಾರಣ ಹಲವರು ವಿದೇಶದಲ್ಲಿ ಸಿಲುಕಿದ್ದರು. ಆದರೆ ಭಾರತದ ಲಾಕ್‌ಡೌನ್ ಸಡಿಲಿಕೆ ಮಾಡಿದ ಬೆನ್ನಲ್ಲೇ ವಿದೇಶದಿಂದ ಹಲವರು ತಾಯ್ನಾಡಿಗೆ ಮರಳುತ್ತಿದ್ದಾರೆ. ಹೀಗೆ ಬಂಡ್‌ದೆಸ್ಲಿಗಾ ಚೆಸ್ ಲೀಗ್ ಟೂರ್ನಿಗಾಗಿ ಜರ್ಮನಿಗೆ ತೆರಳಿದ್ದ ಮಾಜಿ ವಿಶ್ವಚಾಂಪಿಯನ್ ವಿಶ್ವನಾಥನ್ ಆನಂದ್ ಇದೀಗ ಭಾರತಕ್ಕೆ ಮರಳಿದ್ದಾರೆ. 

ಅಭಿಮಾನಿಗಳಿಗಿಲ್ಲ ಪ್ರವೇಶ, ಸ್ಯಾನಿಟೈಸರ್ ಕಡ್ಡಾಯ; ಹೊಸ ರೂಪದಲ್ಲಿ ಟಿ10 ಲೀಗ್!.

ಜರ್ಮನಿಂದ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವಿಶ್ವನಾಥನ್ ಆನಂದ್, ಬಳಿಕ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ಸದ್ಯ  ಜರ್ಮನಿಯಿಂದ ದಹೆಲಿ ಮೂಲಕ ಬೆಂಗಳೂರಿಗೆ ಮಾತ್ರ ವಿಮಾನ ಸೇವೆ ಇದೆ.   ಬೆಂಗಳೂರಿನಲ್ಲಿ ಅಧಿಕಾರಿಗಳು ವಿಶ್ವನಾಥನ್ ಆನಂದ್‌ರನ್ನು ಕ್ವಾರಂಟೈನ್ ಮಾಡಿದ್ದಾರೆ. ಫೆಬ್ರವರಿಯಲ್ಲಿ ಜರ್ಮನಿಗೆ ತೆರಳಿದ್ದ ಆನಂದ್, ಮಾರ್ಚ್ ತಿಂಗಳಲ್ಲಿ ಭಾರತಕ್ಕೆ ಆಗಮಿಸಲು ಸಜ್ಜಾಗಿದ್ದರು. ಆದರೆ ಲಾಕ್‌ಡೌನ್ ಕಾರಣ ಇದೀಗ ಮೇ.30ಕ್ಕೆ ತವರಿಗೆ ಆಗಮಿಸಿದ್ದಾರೆ.

ಭಾರತ-ಆಸ್ಟ್ರೇಲಿಯಾ ಬಾರ್ಡರ್ ಗವಾಸ್ಕರ್ ಟ್ರೋಫಿ ವೇಳಾಪಟ್ಟಿ ಪ್ರಕಟ

ಚೆನ್ನೈ ಮೂಲಕ ವಿಶ್ವನಾಥನ್ ಆನಂದ್ ಬೆಂಗಳೂರಿಗೆ ಆಗಮಿಸುತ್ತಿದ್ದಂತೆ, ಪತ್ನಿ ಅರುಣಾ ಸಂತಸ ವ್ಯಕ್ತಪಡಿಸಿದ್ದಾರೆ. ಭಾರತಕ್ಕೆ ಆಗಮಿಸಿರುವುದು ಸಂತೋಷವಾಗಿದೆ. ಸರ್ಕಾರದ ನಿಯಮದ ಪ್ರಕಾರ ಬೆಂಗಳೂರಿನಲ್ಲಿ ಕ್ವಾರಂಟೈನ್ ಅವದಿ ಮುಗಿಸಿ ಚೆನ್ನೈಗೆ ಮರಳಲಿದ್ದಾರೆ ಎಂದಿದ್ದಾರೆ.

ನಿಯಮದ ಪ್ರಕಾರ ವಿಶ್ವನಾಥನ್ ಆನಂದ್ ಬೆಂಗಳೂರಿನಲ್ಲಿ 7 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರುತ್ತಾರೆ. ಬಳಿಕ ಚೆನ್ನೈಗೆ ತೆರಳಲಿದ್ದಾರೆ. ಚೆನ್ನೈನಲ್ಲಿರುವ ತಮ್ಮ ಮನೆಯಲ್ಲಿ 14 ದಿನಗಳ ಕಾಲ ಮತ್ತೆ ಕ್ವಾರಂಟೈನ್ ಆಗಬೇಕಿದೆ.

Follow Us:
Download App:
  • android
  • ios