ವಿಶ್ವನಾಥನ್ ಆನಂದ್ ಚೆಸ್ ವಿಶ್ವ ಚಾಂಪಿಯನ್ ಹಿಂದಿದೆ ಬಾಲು ಸರ್ ನೆರವು!
ಚೆಸ್ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಭಾರತದ ಕೀರ್ತಿ ಪತಾಕೆ ವಿಶ್ವಮಟ್ಟದಲ್ಲಿ ಹಾರಿಸಿದ ಚೆಸ್ ಪಟು. ಇದೇ ಚೆಸ್ ಪಟು ವಿಶ್ವನಾಥನ್ ಚಾಂಪಿಯನ್ ಆಗಿರುವ ಹಿಂದೆ ದಿಗ್ಗಜ ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ನೆರವಿದೆ ಅನ್ನೋದು ಹಲವರಿಗೆ ತಿಳಿದಿಲ್ಲ. ಈ ಕುರಿತು ಇದೀಗ ವಿಶ್ವನಾಥನ್ ಆನಂದ್ ಮಾಹಿತಿ ಬಹಿರಂಗ ಪಡಿಸಿದ್ದಾರೆ.
ಚೆನ್ನೈ(ಸೆ.26): ಚೆಸ್ ಪಟು ವಿಶ್ವನಾಥನ್ ಆನಂದ್ ಹೆಸರು ಭಾರತದಲ್ಲಿ ಮಾತ್ರವಲ್ಲ ವಿಶ್ವದಲ್ಲೇ ಚಿರಪಪರಿಚಿತ. ಅಷ್ಟರ ಮಟ್ಟಿಗೆ ವಿಶ್ವನಾಥನ್ ಆನಂದ್ ಚೆಸ್‌ನಲ್ಲಿ ವಿಶ್ವವನ್ನೇ ಮೋಡಿ ಮಾಡಿದ್ದಾರೆ. ಸತತ ವಿಶ್ವಚಾಂಪಿಯನ್ ಪಟ್ಟ ಮುಡಿಗೇರಿಸಿದ ಚೆಸ್ ಪಟು ಅನ್ನೋ ಹೆಗ್ಗಳಿಕೆಗೂ ಆನಂದ್ ಪಾತ್ರರಾಗಿದ್ದಾರೆ. ಇದೇ ವಿಶ್ವನಾಥನ್ ಆನಂದ್ ಚಾಂಪಿಯನ್ ಆಗಲು ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ನೆರವು ನೀಡಿದ್ದರು.
ಗಾನ ಗಂಧರ್ವ SPB ಅಗಲಿಕೆಗೆ ಕಂಬನಿ ಮಿಡಿದ ಕ್ರಿಕೆಟರ್ಸ್!
193ರಲ್ಲಿ ಎಸ್‌ಪಿ ಬಾಲಸುಬ್ರಣಹ್ಮಣ್ಯಂ ಭಾರತದಲ್ಲಿ ಸ್ಟಾರ್ ಗಾಯರಾಗಿ ಹೊರಹೊಮ್ಮಿದ್ದರು. ಈ ವೇಳೆ 14 ವಯಸ್ಸಿನ ವಿಶ್ವನಾಥನ್ ಆನಂದ್ ಚೆಸ್‌ನಲ್ಲಿ ಮಿಂಚುತ್ತಿದ್ದರು. ಆದರೆ ಪ್ರಾಯೋಜಕತ್ವವಿಲ್ಲದೆ ವಿಶ್ವನಾಥನ್ ಆನಂದ್ ಇದ್ದ ಚೆಸ್ ಮದ್ರಾಸ್ ಕೋಲ್ಟ್ಸ್ ತಂಡ ರಾಷ್ಟ್ರೀಯ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳುವುದೇ ಅನುಮಾನವಿತ್ತು.
ಮದ್ರಾಸ್ ಕೋಲ್ಟ್ಸ್ ತಂಡದಲ್ಲಿ 14 ವರ್ಷದ ಪ್ರತಿಭಾನ್ವಿತ ಚೆಸ್ ಪಟುವಿದ್ದಾನೆ. ಆತನಿಗೆ ಹಾಗೂ ಈ ತಂಡಕ್ಕೆ ಪ್ರಾಯೋಜಕತ್ವದ ಅಗತ್ಯವಿದೆ ಎಂದು ಗೆಳೆಯನ ಮೂಲಕ ಎಸ್‌ಪಿ ಬಾಲಸುಬ್ರಹ್ಮಣ್ಯಂಗೆ ಮಾಹಿತಿ ಸಿಕ್ಕಿತು. ತಕ್ಷಣವೇ ಬಾಲು ಸರ್ ಮದ್ರಾಸ್ ಕೋಲ್ಟ್ಸ್ ತಂಡಕ್ಕೆ ಹಣ ನೀಡಿ, ರಾಷ್ಟ್ರೀಯ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳುವಂತೆ ಮಾಡಿದರು.
ಚೆನ್ನೈನಲ್ಲಿ ಮಿಂಚುತ್ತಿದ್ದ ವಿಶ್ವನಾಥನ್ ಆನಂದ್ ರಾಷ್ಟ್ರದ ಗಮನಸೆಳೆದಿದ್ದು, ಇದೇ ಬಾಲು ಸರ್ ನೆರವಿನಿಂದ. ಇದು ಆನಂದ್ ಅವರಿಗೆ ಸಿಕ್ಕಿದ ಮೊದಲ ಪ್ರಾಯೋಜಕತ್ವ. ಅನಾರೋಗ್ಯದಿಂದ ಬಾಲು ಸರ್ ನಿಧನರಾದ ಸುದ್ದಿ ತಿಳಿದ ವಿಶ್ವನಾಥನ್ ಆನಂದ್ ಆಘಾತ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ತಮ್ಮ ಮೊದಲ ಪ್ರಾಯೋಜಕತ್ವ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.