ಗಾನ ಗಂಧರ್ವ SPB ಅಗಲಿಕೆಗೆ ಕಂಬನಿ ಮಿಡಿದ ಕ್ರಿಕೆಟರ್ಸ್!
50ಕ್ಕೂ ಹೆಚ್ಚು ವರ್ಷ ಹಾಡಿನ ಮೂಲಕ ತಂಪೆರೆದ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅಗಲಿಕೆಗೆ ಟೀಂ ಇಂಡಿಯಾ ಸೇರಿದಂತೆ ಅಅಂತಾರಾಷ್ಟ್ರೀಯ ಕ್ರಿಕೆಟಿಗರು ಸಂತಾಪ ಸೂಚಿಸಿದ್ದಾರೆ.
ಚೆನ್ನೈ(ಸೆ.25): ಭಾರತೀಯ ಚಿತ್ರರಂಗದಲ್ಲಿ ಗಾನಗಂಧರ್ವನಾಗಿ ಮೆರೆದ ಎಸ್.ಪಿ ಬಾಲಸುಬ್ರಹ್ಮಣ್ಯಂ(74) ಇನ್ನಿಲ್ಲ ಅನ್ನೋದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬಾಲು ಸರ್ ಹಾಡಿದ ಗೀತೆಗಳು ಚಿತ್ರರಸಿಕರು, ಹಾಡು ರಸಿಕರಿಗೆ ಮಾತ್ರವಲ್ಲ, ಕ್ರಿಕೆಟಿಗರು, ಕ್ರೀಡಾಪಟುಗಳಿಗೂ ಸ್ಪೂರ್ತಿಯಾಗಿದೆ. ಕಳೆದ ಕೆಲ ದಿನಗಳಿಂದ ಚೆನ್ನೈನ ಎಂ.ಜಿ.ಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ SPB ಇಂದು ಇಹಲೋಕ ತ್ಯಜಿಸಿದ್ದಾರೆ.
ಗಾನ ಗಂದರ್ಭ ಎಸ್ಪಿಬಿಗೆ ಗಣ್ಯರ ಕಂಬನಿ..
ಬಾಲು ಸರ್ ಅಗಲಿಕೆಗೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಇದೀಗ ಟೀಂ ಇಂಡಿಯಾ ಕ್ರಿಕೆಟಿಗರು, ಶ್ರೀಲಂಕಾ ಕ್ರಿಕೆಟಿಗರು ಸೇರಿದಂತೆ ಅಂತಾರಾಷ್ಟ್ರೀಯ ಕ್ರಿಕೆಟಿಗರು ಸಂತಾಪ ಸೂಚಿಸಿದ್ದಾರೆ.