1 ರೂ. ಫೀ ಖ್ಯಾತಿಯ ಹರೀಶ್ ಸಾಳ್ವೆ ವಾದದಿಂದ ವಿನೇಶಾ ಪೋಗಟ್‌ಗೆ ಬೆಳ್ಳಿ ತರಲು ಯತ್ನ!
ಈ ಹಿಂದೆ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತದ ಪರವಾಗಿ ವಾದ ಮಂಡಿಸಿದ್ದ ಹರೀಶ್ ಸಾಳ್ವೆ ಕೇಂದ್ರ ಸರ್ಕಾರದಿಂದ 1 ರೂಪಾಯಿ ಶುಲ್ಕ ಪಡೆದುಕೊಂಡಿದ್ದರು. ಅಂಬಾನಿ, ಟಾಟಾ ಸೇರಿದಂತೆ ಉದ್ಯಮಿಗಳು ಇವರ ಕಕ್ಷಿದಾರರಾಗಿದ್ದಾರೆ.
ನವದೆಹಲಿ: ತೂಕ ಹೆಚ್ಚಳವಾದ ಹಿನ್ನೆಲೆ ಅನರ್ಹಗೊಂಡಿರುವ ವಿನೇಶ್ ಫೋಗಟ್ ಪ್ರಕರಣದ ಪರ ಖ್ಯಾತ ವಕೀಲ ಹರೀಶ್ ಸಾಳ್ವೆ ವಾದ ಮಂಡನೆ ಮಾಡಿದ್ದಾರೆ. ಒಲಂಪಿಕ್ಸ್ ಪಂದ್ಯ ಅಂತ್ಯಕ್ಕೂ ಮೊದಲು ಈ ಕುರಿತು ತೀರ್ಪು ಪ್ರಕಟವಾಗುವ ಸಾಧ್ಯತೆ ಇರುತ್ತದೆ. ಸುಮಾರು ಒಂದು ಗಂಟೆಗಳ ಕಾಲ ವಾದ ಮಂಡಿಸಿರುವ ಹರೀಶ್ ಸಾಳ್ವೆ, ನ್ಯಾಯಾಲಯದ ಮುಂದೆ ಪ್ರಮುಖವಾಗಿ ನಾಲ್ಕು ಅಂಶಗಳನ್ನಿರಿಸಿ ಪ್ರಖರವಾಗಿವಾಗಿ ವಿನೇಶ್ ಫೋಗಟ್ ವಾದ ಮಂಡಿಸಿದರು. ವಿನೇಶ್ ಫೋಗಟ್ ಯಾವುದೇ ರೀತಿಯಲ್ಲಿಯೂ ವಂಚನೆ ಮಾಡಿಲ್ಲ. ಮೊದಲ ದಿನದ ಪಂದ್ಯದಲ್ಲಿ ವಿನೇಶ್ ಫೋಗಟ್ ನಿಗಧಿಕ್ಕಿಂತ ಕಡಿಮೆ ತೂಕವನ್ನು ಹೊಂದಿದ್ದರು. ನಂತರ ಪೌಷ್ಠಿಕಾಂಶವುಳ್ಳ ಆಹಾರ ಸೇವಿಸೋದು ಆಕೆಯ ಹಕ್ಕು. ತೂಕ ಹೆಚ್ಚಳವಾಗುವುದು ಸಹಜ ಪ್ರಕ್ರಿಯೆಯಾಗಿದ್ದು, ಇದರಲ್ಲಿ ಯಾಕೆ ಏನು ಮಾಡಲು ಸಾಧ್ಯವಿಲ್ಲ. ಪೌಷ್ಠಿಕಾಂಶ ಆಹಾರ ಸೇವಿಸೋದು ಮೂಲಭೂತ ಹಕ್ಕು ಎಂದು ಹರೀಶ್ ಸಾಳ್ವೆ ಒಂದು ಗಂಟೆಗೂ ಅಧಿಕ ಕಾಲ ವಾದ ಮಂಡಿಸಿದ್ದಾರೆ. ಭಾರತದ ಮಾಜಿ ಸಾಲಿಸಿಟರ್ ಜನರಲ್, ದೇಶದ ಪ್ರಮುಖ ವಕೀಲರಲ್ಲಿ ಹರೀಶ್ ಸಾಳ್ವೆ ಸಹ ಒಬ್ಬರಾಗಿದ್ದಾರೆ.
ಹರೀಶ್ ಸಾಳ್ವೆ ಹೈಪ್ರೊಫೈಲ್ ಪ್ರಕರಣಗಳಲ್ಲಿ ವಾದ ಮಂಡಿಸಿರುವ ಖ್ಯಾತ ವಕೀಲರಾಗಿದ್ದಾರೆ. ಇದರ ಜೊತೆ ತಮ್ಮ ಖಾಸಗಿ ಜೀವನದ ವಿಷಯಗಳಿಂದಲೂ ಹರೀಶ್ ಸಾಳ್ವೆ ಸುದ್ದಿಯಲ್ಲಿದ್ದರು. 2023ರಲ್ಲಿ ತಮ್ಮ 68ನೇ ವಯಸ್ಸಿನಲ್ಲಿ ತ್ರಿನಾ ಎಂಬವರ ಜೊತೆ ಮೂರನೇ ಮದುವೆಯಾಗಿದ್ದರು. 2020ರಲ್ಲಿ ಮೊದಲ ಪತ್ನಿ ಮೀನಾಕ್ಷಿಯವರಿಗೆ ವಿಚ್ಚೇದನ ನೀಡಿ, ಕ್ಯಾರೋಲಿನ್ ಬ್ರೋಸಾರ್ಡ್ ಮದುವೆಯಾಗಿದ್ದರು. ಕ್ಯಾರೋಲಿನ್ ಬ್ರೋಸಾರ್ಡ್ ವಿಚ್ಛೇದನ ನೀಡಿದ ಬಳಿಕ ತ್ರಿನಾ ಅವರನ್ನು ಮದುವೆಯಾಗಿದ್ದರು. ಮೂರನೇ ಮದುವೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಈ ಮದುವೆಯಲ್ಲಿ ಮುಕೇಶ್ ಅಂಬಾನಿ, ನೀತಾ ಅಂಬಾನಿ, ಲಲಿತ್ ಮೋದಿ, ಉಜ್ವಲ್ ರಾವುತ್ ಸೇರಿದಂತೆ ಭಾರತದ ಪ್ರಮುಖ ಉದ್ಯಮಿಗಳು ಭಾಗಿಯಾಗಿದ್ದರು.
ಕೇವಲ ಒಂದು ರೂಪಾಯಿ ಶುಲ್ಕ!
ಪಾಕಿಸ್ತಾನದಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿದ್ದ ಭಾರತದ ಕುಲಭೂಷಣ್ ಜಾಧವ್ ಪರವಾಗಿ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಹರೀಶ್ ಸಾಳ್ವೆ ವಾದ ಮಂಡನೆ ಮಾಡಿದ್ದರು. ಅಂದಿನ ವಿದೇಶಾಂಗ ಸಚಿವೆಯಾಗಿದ್ದ ಸುಷ್ಮಾ ಸ್ವರಾಜ್ ಶುಲ್ಕ ನೀಡಲು ಬಂದಾಗ ಕೇವಲ 1 ರೂಪಾಯಿಯನ್ನು ಪಡೆದುಕೊಂಡಿದ್ದರು. ಸುಷ್ಮಾ ಸ್ವರಾಜ್ ನೀಡಿದ ಒಂದು ರೂಪಾಯಿ ಫೋಟೋವನ್ನು ಹರೀಶ್ ಸಾಳ್ವೆ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಹರೀಶ್ ಸಾಳ್ವೆಯವರ ಈ ನಡೆದ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. 2015ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಕೇಂದ್ರ ಸರ್ಕಾರ ಗೌರವಿಸಿತ್ತ.
ವಿನೇಶ್ ಫೋಗಟ್ ಅನರ್ಹ: ಕೊನೆಗೂ ತುಟಿ ಬಿಚ್ಚಿದ ಐಓಸಿ ಮೆಂಬರ್ ನೀತಾ ಅಂಬಾನಿ
ಟಾಟಾ ಗ್ರೂಪ್, ಐಟಿಸಿ, ರಿಲಯನ್ಸ್ ಸೇರಿದಂತೆ ಇನ್ನೂ ಹಲವು ದೊಡ್ಡ ದೊಡ್ಡ ಕಂಪನಿಗಳ ಪ್ರಕರಣಗಳ ಪರವಾಗಿ ಹರೀಶ್ ಸಾಳ್ವೆ ವಾದ ಮಂಡಿಸುತ್ತಾರೆ. ಹಾಗಾಗಿಯೇ ಖ್ಯಾತ ಉದ್ಯಮಿಗಳ ಜೊತೆ ಹರೀಶ್ ಸಾಳ್ವೆ ಉತ್ತಮ ಒಡನಾಟ ಹೊಂದಿದ್ದಾರೆ.
2 ಬಾರಿ ವಿಶ್ವಚಾಂಪಿಯನ್‌ಶಿಪ್ ಕಂಚು, 2018ರ ಏಷ್ಯನ್ ಗೇಮ್ಸ್ ಹಾಗೂ 3 ಬಾರಿ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಆಗಿರುವ ವಿನೇಶ್ ಈ ಬಾರಿ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವ ನಿರೀಕ್ಷೆಯಲ್ಲಿದ್ದರು. ಘಟಾನುಘಟಿಗಳನ್ನೇ ಮಣಿಸಿ ಫೈನಲ್ ಪ್ರವೇಶಿಸಿದ್ದ ಅವರು, ಪಂದ್ಯಕ್ಕೂ ಮುನ್ನ ತಮ್ಮ ದೇಹ ತೂಕ ಹೆಚ್ಚಾದ ಕಾರಣಕ್ಕೆ ಅನರ್ಹಗೊಂಡಿದ್ದರು. ತಮ್ಮ ಕನಸು ಭಗ್ನಗೊಂಡ ಬೇಸರದಲ್ಲಿ ಕುಸ್ತಿ ವೃತ್ತಿ ಬದುಕಿಗೆ ನಿವೃತ್ತಿ ಪ್ರಕಟಿಸಿದ್ದಾರೆ.
ಬೆಳ್ಳಿ ಪದಕಕ್ಕೆ ಮುಂದುವರೆದ ವಿನೇಶ್ ಫೋಗಟ್ ಹೋರಾಟ; ಮಹತ್ವದ ನಿರ್ಧಾರ ಪ್ರಕಟಿಸಿದ ಕ್ರೀಡಾ ನ್ಯಾಯ ಮಂಡಳಿ