Asianet Suvarna News Asianet Suvarna News

ವಿನೇಶ್ ಫೋಗಟ್‌ ಅನರ್ಹ: ಕೊನೆಗೂ ತುಟಿ ಬಿಚ್ಚಿದ ಐಓಸಿ ಮೆಂಬರ್ ನೀತಾ ಅಂಬಾನಿ

ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಅನರ್ಹವಾಗಿರುವ ವಿನೇಶ್ ಫೋಗಟ್ ಬಗ್ಗೆ ಮೊದಲ ಬಾರಿಗೆ ಐಒಸಿ ಸದಸ್ಯೆ ನೀತಾ ಅಂಬಾನಿ ಮೌನ ಮುರಿದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

IOC Member Nita Ambani shares word of encouragement for Vinesh Phogat after disqualification kvn
Author
First Published Aug 8, 2024, 2:55 PM IST | Last Updated Aug 8, 2024, 2:55 PM IST

ಪ್ಯಾರಿಸ್: ಭಾರತದ ತಾರಾ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಕೇವಲ 100 ಗ್ರಾಮ್ ತೂಕ ಹೆಚ್ಚಳದಿಂದಾಗಿ ಒಲಿಂಪಿಕ್ ಪದಕ ಗೆಲ್ಲುವ ಅವಕಾಶ ನುಚ್ಚುನೂರಾಗಿದೆ. ಮಹಿಳೆಯರ 50 ಕೆ.ಜಿ ಪ್ರಿಸ್ಟೈಲ್ ವಿಭಾಗದಲ್ಲಿ ಸ್ಪರ್ಧಿಸಿ, ಹಲವು ಸವಾಲುಗಳನ್ನು ಮೆಟ್ಟಿನಿಂತು ವಿನೇಶ್ ಫೋಗಟ್‌ ಫೈನಲ್ ಪ್ರವೇಶಿಸುವ ಮೂಲಕ ಬಹುತೇಕ ಪದಕ ಖಚಿತಪಡಿಸಿಕೊಂಡಿದ್ದರು.

ಆದರೆ ಬುಧವಾರ ತಡರಾತ್ರ ನಡೆಯಬೇಕಿದ್ದ ಫೈನಲ್ ಪಂದ್ಯಕ್ಕೂ ಮುನ್ನ ತೂಕ ಪರೀಕ್ಷೆಗೊಳಗಾದಾಗ ವಿನೇಶ್ ಅವರ ತೂಕ 100 ಗ್ರಾಮ್ ಹೆಚ್ಚಳವಾಗಿದ್ದರಿಂದ ಅವರನ್ನು ಈ ಸ್ಪರ್ಧೆಯಿಂದಲೇ ಅನರ್ಹಗೊಳಿಸಲಾಯಿತು. ಇದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಪರ ವಿರೋಧದ ಚರ್ಚೆಗೂ ಗ್ರಾಸವಾಗಿದೆ. ಇದೆಲ್ಲದರ ನಡುವೆ ಒಲಿಂಪಿಕ್ಸ್ ಸಮಿತಿ ಸದಸ್ಯೆಯಾಗಿ ಎರಡನೇ ಬಾರಿ ಅವಿರೋಧವಾಗಿ ಆಯ್ಕೆಯಾಗಿರುವ ನೀತಾ ಅಂಬಾನಿ ಅವರು ಏನೂ ಮಾತನಾಡುತ್ತಿಲ್ಲ ಎನ್ನುವ ಚರ್ಚೆ ಕೂಡಾ ಸೋಷಿಯಲ್‌ ಮೀಡಿಯಾದಲ್ಲಿ ಕಂಡು ಬಂದಿತ್ತು.

ಕುಸ್ತಿ ಫೈನಲ್‌ ಸ್ಪರ್ಧೆಯಿಂದ ಹಿಂದೆ ಸರಿದಿದ್ರೆ ವಿನೇಶ್ ಫೋಗಟ್‌ಗೆ ಸಿಗುತ್ತಿತ್ತಾ ಬೆಳ್ಳಿ ಪದಕ?

ಇದೀಗ ನೀತಾ ಅಂಬಾನಿ, ಈ ಕುರಿತಂತೆ ಮೌನ ಮುರಿದಿದ್ದು ದೇಶದ ಜನರ ಹೃದಯ ಒಡೆದಿದೆ ಎಂದು ಹೇಳಿದ್ದಾರೆ. "ಇಂದು ಇಡೀ ರಾಷ್ಟ್ರವು ವಿನೇಶ್ ಅವರ ನೋವು ಮತ್ತು ಹೃದಯ ಒಡೆದಿರುವಂಥ ದುಃಖವನ್ನು ಹಂಚಿಕೊಳ್ಳುತ್ತದೆ. ಆಕೆ ಚಾಂಪಿಯನ್ ಫೈಟರ್, ಮತ್ತು ಅವರು ಮತ್ತೆ ಬಲಶಾಲಿ ಆಗುವುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ. ತನ್ನ ಅದ್ಭುತ ವಿಜಯಗಳಲ್ಲಿ ಮಾತ್ರವಲ್ಲದೆ, ಅವರಿಗೆ ವಿರುದ್ಧವಾದ ಸನ್ನಿವೇಶಗಳಲ್ಲಿಯೂ ಪುಟಿದೇಳುವುದು ಸಾಧ್ಯವಿದೆ ಎಂಬುದನ್ನು ಮತ್ತೆ ಮತ್ತೆ ತೋರಿಸಿದ್ದಾರೆ. ವಿನೇಶ್, ನೀವು ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಿದ್ದೀರಿ, ವಿಶೇಷವಾಗಿ ಯುವತಿಯರಿಗೆ ಮತ್ತು ಅವರ ಹೆತ್ತವರಿಗೆ, ಯಾವುದೇ ಪದಕಕ್ಕಿಂತ ಪ್ರಕಾಶಮಾನವಾಗಿ ನಿಮ್ಮ ಆತ್ಮವು ಹೊಳೆಯುತ್ತದೆ.” ಎಂದು ರಿಲಯನ್ಸ್ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷೆಯಾಗಿರುವ ನೀತಾ ಅಂಬಾನಿ ಹೇಳಿದ್ದಾರೆ.

ಆಸ್ಪತ್ರೆಯಲ್ಲಿ ವಿನೇಶ್‌ರನ್ನು ಭೇಟಿಯಾದ ಪಿ.ಟಿ. ಉಷಾ

ತೂಕ ಇಳಿಸುವ ಯತ್ನದಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿರುವ ತಾರಾ ಕುಸ್ತಿಪಟು ವಿನೇಶ್‌ ಫೋಗಟ್‌ರನ್ನು ಭಾರತೀಯ ಒಲಿಂಪಿಕ್‌ ಸಂಸ್ಥೆ(ಐಒಎ) ಮುಖ್ಯಸ್ಥೆ ಪಿ.ಟಿ. ಉಷಾ ಅವರು ಭೇಟಿಯಾಗಿ, ಧೈರ್ಯ ತುಂಬಿದರು.

ವಿನೇಶ್ ಫೋಗಟ್‌ಗಿದೆ ಒಲಿಂಪಿಕ್ ಪದಕ ಗೆಲ್ಲಲು ಲಾಸ್ಟ್‌ ಚಾನ್ಸ್‌..! ಆದ್ರೆ ಪವಾಡ ನಡಿಬೇಕು..!

ವಿನೇಶ್ ಫೋಗಟ್ ಇದೀಗ ತಮ್ಮನ್ನು  ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಅನರ್ಹಗೊಳಿಸಿರುವ ಕ್ರಮವನ್ನು ಪ್ರಶ್ನೆ ಮಾಡಿ ಕ್ರೀಡಾ ನ್ಯಾಯ ಮಂಡಳಿಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಈ ಮೇಲ್ಮನವಿಯಲ್ಲಿ ವಿನೇಶ್ ಫೋಗಟ್, ತಮಗೆ ಫೈನಲ್‌ನಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು ಹಾಗೂ ತಮಗೆ ಜಂಟಿ ಬೆಳ್ಳಿ ಪದಕ ನೀಡಬೇಕು ಎಂದು ಮನವಿ ಸಲ್ಲಿಸಿದ್ದಾರೆ. ಇಂದು ಯಾವ ತೀರ್ಪು ಹೊರಬೀಳಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

Latest Videos
Follow Us:
Download App:
  • android
  • ios