Breaking: ವಿನೇಶ್‌ ಪೋಗಟ್‌ 'ಬೆಳ್ಳಿ' ತೀರ್ಪು ಆಗಸ್ಟ್‌ 16ಕ್ಕೆ ಮುಂದೂಡಿದ ಸಿಎಎಸ್‌!

ರೆಸ್ಲರ್‌ ವಿನೇಶ್‌ ಪೋಗಟ್‌ ಕುರಿತಾದ ತೀರ್ಪು ಮೂರನೇ ಬಾರಿಗೆ ಮುಂದೂಡಿಕೆಯಾಗಿದೆ. ಕ್ರೀಡಾ ನ್ಯಾಯಮಂಡಳಿ ಆಗಸ್ಟ್‌ 16 ರಂದು ವಿನೇಶ್‌ ಪೋಗಟ್‌ ಕುರಿತಾದ ತೀರ್ಪು ನೀಡುವುದಾಗಿ ಹೇಳಿದೆ.
 

Vinesh Phogat Paris court verdict at deadline extended till Aug 16 san

ನವದೆಹಲಿ (ಆ.13): ಪ್ಯಾರಿಸ್‌ ಒಲಿಂಪಿಕ್ಸ್‌ನ 50 ಕೆಜಿ ಮಹಿಳಾ ಕುಸ್ತಿ ವಿಭಾಗದಲ್ಲಿ ತಮಗೆ ಬೆಳ್ಳಿ ಪದಕ ಸಿಗಬೇಕು ಎಂದು ಆಗ್ರಹಿಸಿ ವಿನೇಶ್‌ ಪೋಗಟ್‌ ಸಲ್ಲಿಕೆ ಮಾಡಿರುವ ಅರ್ಜಿಯ ತೀರ್ಪನ್ನು ಜಾಗತಿಕ ಕ್ರೀಡಾ ನ್ಯಾಯಮಂಡಳಿ ಆಗಸ್ಟ್‌ 16ಕ್ಕೆ ಮುಂದೂಡಿಕೆ ಮಾಡಿದೆ. ಈ ಕೇಸ್‌ನಲ್ಲಿ ವಿಚಾರಣೆ ಮುಗಿದ ಬಳಿಕ ತೀರ್ಪನ್ನು ಮೂರನೇ ಬಾರಿಗೆ ಮುಂದೂಡಿಕೆ ಮಾಡಿದಂತಾಗಿದೆ.ವಿನೇಶ್ ಫೋಗಟ್ ಅವರ ಅರ್ಜಿಯ ತೀರ್ಪನ್ನು ಕ್ರೀಡೆಗಾಗಿ ಮಧ್ಯಸ್ಥಿಕೆ ನ್ಯಾಯಾಲಯ (ಸಿಎಎಸ್) ಮತ್ತಷ್ಟು ವಿಳಂಬ ಮಾಡುವುದಾಗಿ ತಿಳಿಸಿದೆ. ಈ ವಿಷಯದ ಬಗ್ಗೆ ಕ್ರೀಡಾ ನ್ಯಾಯಾಲಯವು ಮೂರನೇ ಬಾರಿಗೆ ವಿಸ್ತರಣೆಯನ್ನು ಕೇಳಿದೆ. ಫೋಗಟ್ ಮೂಲತಃ ಪ್ಯಾರಿಸ್ ಒಲಿಂಪಿಕ್ಸ್‌ನಿಂದ ತನ್ನ ಅನರ್ಹತೆಯ ಕುರಿತಾಗಿ ಪ್ರಶ್ನೆ ಮಾಡಿದ್ದರು.ಮಹಿಳೆಯರ 50 ಕೆಜಿ ವಿಭಾಗದಲ್ಲಿ ಜಂಟಿ ಬೆಳ್ಳಿ ಪದಕವನ್ನು ನೀಡಬೇಕೆಂದು ಮನವಿ ಮಾಡಿದ್ದರು.

ವಿನೇಶ್ ಅವರ ಮನವಿ ಏನು?: ವಿನೇಶ್, ತನ್ನ ಮೇಲ್ಮನವಿಯಲ್ಲಿ, ಐಒಸಿಯ ಅನರ್ಹತೆಯನ್ನು ರದ್ದುಗೊಳಿಸುವಂತೆ ಮತ್ತು ಫೈನಲ್‌ನಲ್ಲಿ ಸ್ಪರ್ಧಿಸಲು ಅವಕಾಶ ನೀಡುವಂತೆ ಸಿಎಎಸ್‌ನ ತಾತ್ಕಾಲಿಕ ಪೀಠಕ್ಕೆ ಆರಂಭದಲ್ಲಿ ವಿನಂತಿಸಿದ್ದರು. ಆದರೆ, ಅವರು ತುರ್ತು ಮಧ್ಯಂತರ ಕ್ರಮಗಳನ್ನು ಕೋರಿರಲಿಲ್ಲ.. ಸಿಎಎಸ್‌ನ ತಾತ್ಕಾಲಿಕ ಪೀಠವು ತನ್ನ ತೀರ್ಪನ್ನು ತ್ವರಿತವಾಗಿ ನೀಡುತ್ತದೆ.  ಆದರೆ, ಕಳೆದ ಗುರುವಾರ ಸಂಜೆ ನಿಗದಿಯಾಗಿದ್ದ ಅಂತಿಮ ಪಂದ್ಯದ ಎರಡೂ ಪಕ್ಷಗಳ ವಾದವನ್ನು ಆಲಿಸಲು ಸಾಧ್ಯವಾಗಲಿಲ್ಲ.

Big Breaking: ವಿನೇಶ್ ಫೋಗಟ್‌ಗೆ ಬೆಳ್ಳಿ ಪದಕ ಗೆಲ್ಲುವ ಕನಸು ಇನ್ನೂ ಕೊಂಚ ತಡ..! ಇಲ್ಲಿದೆ ಹೊಸ ಅಪ್‌ಡೇಟ್

ಬಳಿಕ ವಿನೇಶ್ ತನ್ನ ಮನವಿಯಲ್ಲಿ ಅನರ್ಹತೆಯನ್ನು ಹಿಂತೆಗೆದುಕೊಳ್ಳಬೇಕು ಮತ್ತು ಜಂಟಿ ಬೆಳ್ಳಿ ಪದಕವನ್ನು ನೀಡಬೇಕೆಂದು ಸ್ಪಷ್ಟವಾಗಿ ತಿಳಿಸಿದ್ದರು. ಆದರೆ, ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ ಮುಖ್ಯಸ್ಥ ನೆನಾದ್ ಲಾಲೋವಿಕ್, ಖಾಸಗಿ ಟಿವಿಗೆ ನೀಡಿದ ಸಂದರ್ಶನದಲ್ಲಿ, ತಾನು ವಿನೇಶ್‌ನೊಂದಿಗೆ ಸಹಾನುಭೂತಿ ಹೊಂದಿದ್ದೇನೆ ಎಂದು ಹೇಳಿದರು, ಆದರೆ ಭಾರತೀಯ ಕುಸ್ತಿಪಟುವನ್ನು ಅನರ್ಹಗೊಳಿಸಿದ ವಿಚಾರದಲ್ಲಿ ನಿಯಮ ಪಾಲಿಸಿದ್ದೇವೆ. ಎಲ್ಲರೂ ನಿಯಮಕ್ಕೆ ಬದ್ಧರಾಗಿರಬೇಕು ಎಂದು ಹೇಳಿದ್ದರು.

ಯುಎಸ್ ಜಿಮ್ನಾಸ್ಟ್‌ ಕಂಚು ವಾಪಾಸ್ ನೀಡಲು ಆದೇಶಿಸಿದ CAS..! ವಿನೇಶ್ ಫೋಗಟ್‌ಗೂ ಸಿಗುತ್ತಾ ಗುಡ್‌ ನ್ಯೂಸ್?

ತೀರ್ಪು ವಿಳಂಬವಾಗಿದ್ದರೂ ಐಒಎ ಮುಖ್ಯಸ್ಥೆ ಪಿಟಿ ಉಷಾ ಅವರು ಮುಖ್ಯ ವೈದ್ಯಾಧಿಕಾರಿ ಡಾ. ದಿನ್ಶಾ ಪರ್ದಿವಾಲಾ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ವಿನೇಶ್ ಪೋಗಟ್‌ ಅವರ ವಿಚಾರದಲ್ಲಿ ದಿನ್ಶಾ ಪರ್ದಿವಾಲಾ ಕುರಿತಾಗಿ ಸೋಶಿಯಲ್‌ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. 

 

 

Latest Videos
Follow Us:
Download App:
  • android
  • ios