ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದ ಜಿಮ್ನಾಸ್ಟ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದ ಯುಎಸ್ ಜಿಮ್ನಾಸ್ಟ್‌ಗೆ ನಿರಾಸೆ ಎದುರಾಗಿದೆ. ಆ ಕಂಚಿನ ಪದಕ ರೊಮೇನಿಯಾ ಪಾಲಾಗಿದೆ. ಇದು ಭಾರತೀಯ ಅಭಿಮಾನಿಗಳ ಪಾಲಿಗೆ ಹೊಸ ನಿರೀಕ್ಷೆ ಹುಟ್ಟುಹಾಕಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ನವದೆಹಲಿ: ಭಾರತದ ತಾರಾ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಅವರ ಅನರ್ಹ ಪ್ರಕರಣ ಸದ್ಯ ಕ್ರೀಡಾ ನ್ಯಾಯ ಮಂಡಳಿಯಲ್ಲಿದೆ. ಹೀಗಿರುವಾಗಲೇ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಾಲಯದ ಹಂಗಾಮಿ ಪೀಠ ಜಿಮ್ನಾಸ್ಟ್ ಸ್ಪರ್ಧೆಯಲ್ಲಿ ಆದ ಮಹಾ ಎಡವಟ್ಟನ್ನು ಸರಿಪಡಿಸಿ ಮಹತ್ವದ ತೀರ್ಪು ನೀಡಿದೆ. ಯುಎಸ್‌ಎ ತಂಡದ ಪಾಲಾಗಿದ್ದ ಕಂಚಿನ ಪದಕ ಇದೀಗ ರೊಮೇನಿಯಾ ತಂಡಕ್ಕೆ ನೀಡುವಂತೆ ಮಹತ್ವದ ಆದೇಶ ಹೊರಡಿಸಿದೆ. ಈ ತೀರ್ಪು ಪ್ರಕಟಗೊಂಡ ಬೆನ್ನಲ್ಲೇ ಭಾರತೀಯ ಅಭಿಮಾನಿಗಳು ಇದೇ ಆಗಸ್ಟ್ 13ರಂದು ಪ್ರಕಟಗೊಳ್ಳಲಿರುವ ತೀರ್ಪನ್ನು ಆಲಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ.
ಹೌದು, ಈ ಮೊದಲು ಅಮೆರಿಕದ ಜಿಮ್ನಾಸ್ಟ್ ಜೋರ್ಡನ್ ಚಿಲ್ಲೀಸ್ ಅವರು ಕಂಚಿನ ಪದಕ ಜಯಿಸಿದ್ದರು. ಈ ಪದಕವನ್ನು ರೊಮೇನಿಯಾಗೆ ವಾಪಾಸ್ ನೀಡಲು ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಾಲಯದ ಪೀಠ ಆದೇಶಿಸಿದೆ. ಈ ಪ್ರಕರಣದ ಕುರಿತಂತೆ ಒಲಿಂಪಿಕ್ಸ್‌ನಲ್ಲಿ ಜಿಮ್ನಾಸ್ಟ್ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ರೊಮೇನಿಯಾ ತೀರ್ಪಿನ ಬಗ್ಗೆ ಮೇಲ್ಮನವಿ ಸಲ್ಲಿಸಿತ್ತು. ಇದರ ಕುರಿತಾಗಿ ಮಧ್ಯ ಪ್ರವೇಶಿಸಿದ ಅಂತಾರಾಷ್ಟ್ರೀಯ ಜಿಮ್ನಾಸ್ಟಿಕ್ ಫೆಡರೇಷನ್ ಚಿಲ್ಲೀಸ್ ಸ್ಕೋರ್ ಪರಿಷ್ಕರಣೆ ಮಾಡಿತು. ಪರಿಣಾಮ ಕಂಚಿನ ಪದಕ ಅಮೆರಿಕದಿಂದ ರೊಮೇನಿಯಾ ಪಾಲಾಗಿದೆ.
Big Breaking: ವಿನೇಶ್ ಫೋಗಟ್‌ಗೆ ಬೆಳ್ಳಿ ಪದಕ ಗೆಲ್ಲುವ ಕನಸು ಇನ್ನೂ ಕೊಂಚ ತಡ..! ಇಲ್ಲಿದೆ ಹೊಸ ಅಪ್‌ಡೇಟ್
ಅಮೆರಿಕ ತಂಡವು ಫಲಿತಾಂಶದ ಕುರಿತಂತೆ ಒಂದು ನಿಮಿಷದೊಳಗಾಗಿ ತನ್ನ ಮೇಲ್ಮನವಿ/ಪ್ರತಿಭಟನೆ ಮಾಡಲು ಅವಕಾಶವಿತ್ತು. ಆದರೆ ಅಮರಿಕ ಒಂದು ನಿಮಿಷದ ಬಳಿಕ 4 ಸೆಕೆಂಡ್ ಕಳೆದ ಮೇಲೆ ಫಲಿತಾಂಶದ ಕುರಿತಂತೆ ಮೇಲ್ಮನವಿ ಸಲ್ಲಿಸಿತ್ತು. ಈ ಅಂಶವನ್ನು ಇಟ್ಟುಕೊಂಡು ಅಮೆರಿಕಗೆ ನೀಡಲಾಗಿದ್ದ ಕಂಚಿನ ಪದಕ ತಮಗೆ ಪದಕ ಸಿಗಬೇಕು ಎಂದು ರೊಮ್ಯಾನಿಯಾ ತಂಡದ ಕೋಚ್ ಕೋರ್ಟ್ ಮೆಟ್ಟಿಲೇರಿದ್ದರು.
ಇದರ ವಾದ-ಪ್ರತಿವಾದ ಆಲಿಸಿದ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಾಲಯ, ಈ ತಾಂತ್ರಿಕಥೆಯ ಆಧಾರದ ಮೇಲೆ ರೊಮೇನಿಯನ್ ತಂಡದ ಪರವಾಗಿ ನಿಂತಿತು. ಜತೆಗೆ ರೊಮೇನಿಯನ್ ತಂಡಕ್ಕೆ ಮೂರನೇ ಸ್ಥಾನ ನೀಡುವ ಮೂಲಕ ಕಂಚಿನ ಪದಕವನ್ನು ಚಿಲೀಸ್‌ಗೆ ವಾಪಾಸ್ ನೀಡುವಂತೆ ಆದೇಶಿಸಿತು. ಈ ತೀರ್ಪು ಭಾರತೀಯರ ಪಾಲಿಗೆ ಕೊಂಚ ಆಶಾದಾಯಕ ಮನೋಭಾವ ಮೂಡುವಂತೆ ಮಾಡಿದೆ.
ಕಂಚು ಗೆದ್ದ ಅಮನ್ ಒಲಿಂಪಿಕ್ ಕುಸ್ತಿ ಸ್ಪರ್ಧೆಗೆ ಕೇವಲ 10 ಗಂಟೆಗೆ ಮೊದಲು 4.6 kg ತೂಕ ಇಳಿಸಿದ್ದೇಗೆ?
ಹೌದು, ವಿನೇಶ್ ಫೋಗಟ್ ಮಹಿಳೆಯರ 50 ಕೆಜಿ ವಿಭಾಗದ ಪ್ರಿಸ್ಟೈಲ್ ಕುಸ್ತಿ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶಿಸಿದ್ದರು. ಆದರೆ ಫೈನಲ್ ಪಂದ್ಯಕ್ಕೂ ಮುನ್ನ ಕೇವಲ 100 ಗ್ರಾಮ್ ತೂಕ ಹೆಚ್ಚಳವಾಗಿದ್ದರಿಂದ ಅವರನ್ನು ಅನರ್ಹಗೊಳಿಸಲಾಗಿತ್ತು. ಈ ಸಂಬಂಧ ತಮ್ಮನ್ನು ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಾಲಯದ ಮೆಟ್ಟಿಲೇರಿದ್ದು, ಈಗಾಗಲೇ ವಾದ-ಪ್ರತಿವಾದ ಮುಗಿದಿದ್ದು, ತೀರ್ಪನ್ನು ಆಗಸ್ಟ್ 13ಕ್ಕೆ ಕಾದಿರಿಸಿದೆ. ಜಿಮ್ನಾಸ್ಟಿಕ್ ಸ್ಪರ್ಧೆಯಲ್ಲಿ ಆದಂತೆ, ಕುಸ್ತಿಯ ಸ್ಪರ್ಧೆಯ ಕುರಿತಾಗಿಯೂ ವಿನೇಶ್ ಫೋಗಟ್ ಅವರ ಪರವಾಗಿ ಫಲಿತಾಂಶ ಹೊರಬೀಳಲಿದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.
