Asianet Suvarna News Asianet Suvarna News

ವಿನೇಶ್‌ ಅನರ್ಹ, ಗುಜ್‌ಮನ್‌-ಹಿಲ್ಡೆಬ್ರಾಂಡ್ ನಡುವೆ 50ಕೆಜಿ ರೆಸ್ಲಿಂಗ್‌ ಫೈನಲ್‌: ವಿಶ್ವ ಕುಸ್ತಿ ಅಧಿಕೃತ ಹೇಳಿಕೆ!

United World wrestling Statement ವಿನೇಶ್‌ ಪೋಗಟ್‌ ಅನರ್ಹತೆ ಬಗ್ಗೆ ವಿಶ್ವ ಕುಸ್ತಿ ಫಡರೇಷನ್‌ ಅಧಿಕೃತ ಹೇಳಿಕೆ ನೀಡಿದ್ದು, ನಿಗದಿತ ಮಿತಿಗಿಂತ ಹೆಚ್ಚಿನ ತೂಕ ಹೊಂದಿರುವ ಕಾರಣಕ್ಕ ಆಕೆ ಫೈನಲ್‌ ಪಂದ್ಯದಿಂದ ಅನರ್ಹಗೊಂಡಿದ್ದಾರೆ ಎಂದು ತಿಳಿಸಿದೆ.

Vinesh Phogat disqualified Guzman vs Hildebrandt in 50kg final United World Wrestling Statement san
Author
First Published Aug 7, 2024, 3:12 PM IST | Last Updated Aug 7, 2024, 3:20 PM IST


ಪ್ಯಾರಿಸ್‌ (ಆ.7): ವಿನೇಶ್‌ ಪೋಗಟ್‌ ಅನರ್ಹತೆ ಬಗ್ಗೆ ವಿಶ್ವ ಕುಸ್ತಿ ಸಂಸ್ಥೆ ಅಧಿಕೃತವಾಗಿ ಪ್ರಕಟಣೆ ನೀಡಿದೆ. 50 ಕೆಜಿ ಕುಸ್ತಿ ವಿಭಾಗದಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ತೂಕ ಹೊಂದಿದ್ದ ಕಾರಣಕ್ಕೆ ವಿನೇಶ್‌ ಪೋಗಟ್‌, 2ನೇ ದಿನದ ತೂಕ ಪರೀಕ್ಷೆ ವೇಳೆ ಅನರ್ಹಗೊಂಡಿದ್ದಾರೆ. ಇದರಿಂದಾಗಿ ಸೆಮಿಫೈನಲ್‌ನಲ್ಲಿ ಸೋಲು ಕಂಡಿದ್ದ ಕ್ಯೂಬಾದ ಯುಸ್‌ನೈಲಿಸ್‌ ಗುಜ್‌ಮನ್‌ ಲೋಪಜ್‌ 50 ಕೆಜಿ ವಿಭಾಗದ ರೆಸ್ಲಿಂಗ್‌ ಫೈನಲ್‌ಗೆ ಅಹರ್ತೆ ಪಡೆದುಕೊಂಡಿದ್ದಾರೆ. ಯುಸ್‌ನೈಲಿಸ್‌ ಗುಜ್‌ಮನ್‌ ಲೋಪಜ್‌ರನ್ನೇ ವಿನೇಶ್‌ ಪೋಗಟ್‌ ಸೋಲಿಸಿ ಫೈನಲ್‌ಗೆ ಅರ್ಹತೆ ಪಡೆದಿದ್ದರು. ಆದರೆ, ವಿನೇಶ್‌ ಅನರ್ಹಗೊಂಡಿರುವ ಕಾರಣ ಈಗ ಕ್ಯೂಬಾ ಸ್ಪರ್ಧಿ ಫೈನಲ್‌ ಟಿಕೆಟ್‌ ಪಡೆದುಕೊಂಡಿದ್ದಾರೆ. ಫೈನಲ್‌ನಲ್ಲಿ ಕ್ಯೂಬಾ ಸ್ಪರ್ಧಿ ಅಮೆರಿಕಾದ ಸಾರಾ ಹಿಲ್ಡೆಬ್ರಾಂಡ್ ಅವರನ್ನು ಎದುರಿಸಲಿದ್ದಾರೆ.
ಅಂತರಾಷ್ಟ್ರೀಯ ಕುಸ್ತಿ ನಿಯಮಗಳ ಆರ್ಟಿಕಲ್ 11 ರ ಪ್ರಕಾರ: ಕ್ರೀಡಾಪಟುವು ತೂಕ  ಪರೀಕ್ಷೆಗೆ ಹಾಜರಾಗದಿದ್ದರೆ ಅಥವಾ ವಿಫಲವಾದರೆ (1 ನೇ ಅಥವಾ 2 ನೇ ತೂಕ ಪರೀಕ್ಷೆಯಲ್ಲಿ), ಅವಳು/ಅವನು ಸ್ಪರ್ಧೆಯಿಂದ ಹೊರಹಾಕಲ್ಪಡುತ್ತಾರೆ ಮತ್ತು ಶ್ರೇಯಾಂಕವಿಲ್ಲದೆ ಕೊನೆಯ ಸ್ಥಾನದಲ್ಲಿರುತ್ತಾರೆ ಎಂದು ವಿಶ್ವ ಕುಸ್ತಿ ಸಂಸ್ಥೆ ತಿಳಿಸಿದೆ.

“ಒಂದು (ಅಥವಾ ಹೆಚ್ಚು) ಕ್ರೀಡಾಪಟುಗಳು ರಿಪೆಚೇಜ್‌ಗಳಿಗೆ ಅರ್ಹತೆ ಪಡೆದರೆ ಮತ್ತು/ಅಥವಾ ಫೈನಲ್‌ಗೆ ಹಾಜರಾಗದಿದ್ದರೆ ಅಥವಾ ತೂಕದಲ್ಲಿ ವಿಫಲವಾದರೆ, ಅಥ್ಲೀಟ್ (ಗಳು) (ಎರಡನೇ ತೂಕದಲ್ಲಿ ಯಶಸ್ವಿಯಾಗಿ ಉತ್ತೀರ್ಣರಾದವರು) ಮುಂದಿನ ಸುತ್ತಿಗೆ ತೆರಳುತ್ತಾರೆ ಅವನ (ಅವರ) ಬ್ರಾಕೆಟ್‌ನ ಭಾಗದಲ್ಲಿ ಎಂದು ತಿಳಿಸಿದೆ.

ಡಿಹೈಡ್ರೇಷನ್‌ನಿಂದ ಆಸ್ಪತ್ರೆಗೆ ದಾಖಲಾದ ವಿನೇಶ್‌ ಪೋಗಟ್‌, ಐಒಎ ಅಧ್ಯಕ್ಷರ ವರದಿ ಕೇಳಿದ ಪ್ರಧಾನಿ ಮೋದಿ!

ಈ ನಿಯಮಗಳ ಅಡಿಯಲ್ಲಿ, ಗುಜ್‌ಮನ್‌ ಚಿನ್ನಕ್ಕಾಗಿ ಕುಸ್ತಿಯಾಡುತ್ತಾರೆ. ಅದರೊಂದಿಗೆ 50 ಕೆಜಿ ವಿಭಾಗದಲ್ಲಿ ಒಂದು ಕಡಿಮೆ ಸುತ್ತಿನ ರಿಪಿಚೇಜ್ ಅನ್ನು ಹೊಂದಿರುತ್ತದೆ ಮತ್ತು ವಿನೇಶ್ ಅವರ ಫಲಿತಾಂಶಗಳನ್ನು ಅನರ್ಹಗೊಳಿಸಲಾಗುತ್ತದೆ. 50 ಕೆಜಿ ಕಂಚಿನ ಪದಕದ ಸ್ಪರ್ಧೆಯು ಜಪಾನ್‌ನ ಯುಯಿ ಸುಸಾಕಿಮತ್ತು  ಉಕ್ರೇನ್‌ನ ಒಕ್ಸಾನಾ ಲಿವಾಚ್ ನಡುವೆ ನಡೆಯಲಿದೆ. ಇದರಿಂದಾಗಿ ವಿನೇಶ್‌ ಪೋಗಟ್‌ ಸೋಲಿಸಿದ ಮೂವರಿಗೂ ಪದಕ ಗೆಲ್ಲುವ ಅವಕಾಶವನ್ನು ವಿಶ್ವ ಕುಸ್ತಿ ಸಂಸ್ಥೆ ನೀಡಿದೆ.

ವಿನೇಶ್ ಪೋಗಟ್ ಕನಸು, ಶ್ರಮವನ್ನೇ ನುಂಗಿ ಹಾಕಿತಲ್ಲಾ ನೂರೇ ನೂರು ಗ್ರಾಂ ತೂಕ!

Latest Videos
Follow Us:
Download App:
  • android
  • ios