* ಯುಎಸ್‌ ಓಪನ್ ಗ್ರ್ಯಾನ್‌ ಸ್ಲಾಂ ಆರಂಭದಲ್ಲೇ ಎದುರಾಯ್ತು ಆಘಾತಕಾರಿ ಫಲಿತಾಂಶ* 3 ಗ್ರ್ಯಾನ್‌ ಸ್ಲಾಂ ಒಡೆಯ ಆ್ಯಂಡಿ ಮರ್ರೆ ಮೊದಲ ಸುತ್ತಿನಲ್ಲೇ ಸೋಲು* ವಿಶ್ವ ನಂ.3, ಗ್ರೀಸ್‌ನ ಸ್ಟೆಫಾನೋಸ್‌ ಸಿಟ್ಸಿಪಾಸ್‌ ವಿರುದ್ಧ ಮರ್ರೆಗೆ ಸೋಲು

ನ್ಯೂಯಾರ್ಕ್(ಸೆ.01): ಮೂರು ಗ್ರ್ಯಾನ್‌ಸ್ಲಾಂ ಚಾಂಪಿಯನ್‌ ಆ್ಯಂಡಿ ಮರ್ರೆ ಯುಎಸ್‌ ಓಪನ್‌ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲೇ ಆಘಾತ ಅನುಭವಿಸಿದ್ದಾರೆ.

ರೋಚಕವಾಗಿ ಸಾಗಿದ ಪಂದ್ಯದಲ್ಲಿ ವಿಶ್ವ ನಂ.3, ಗ್ರೀಸ್‌ನ ಸ್ಟೆಫಾನೋಸ್‌ ಸಿಟ್ಸಿಪಾಸ್‌ ವಿರುದ್ಧ ಮರ್ರೆ 6​​-2, 6-7, 6-3, 3-6, 4-6 ಸೆಟ್‌ಗಳ ಅಂತರದಿಂದ ಸೋಲುಂಡರು. 2 ಬಾರಿ ಒಲಿಂಪಿಕ್ಸ್‌ ಚಾಂಪಿಯನ್‌ ಆಗಿರುವ ಮರ್ರೆ 2012ರ ಯುಎಸ್‌ ಓಪನ್‌, 2013 ಹಾಗೂ 2016ರಲ್ಲಿ ವಿಂಬಲ್ಡನ್‌ ಗೆದ್ದಿದ್ದರು.

Scroll to load tweet…
Scroll to load tweet…

ಮಹಿಳೆಯರ ಸಿಂಗಲ್ಸ್‌ನಲ್ಲಿ ಹಾಲಿ ಚಾಂಪಿಯನ್‌ ಜಪಾನಿನ ನವೋಮಿ ಒಸಾಕಾ, 87ನೇ ಶ್ರೇಯಾಂಕಿತ ಚೆಕ್‌ಗಣರಾಜ್ಯದ ಮೇರಿ ಬೌಜ್ಕೋವಾರನ್ನು 6-4, 6-1 ನೇರ ಸೆಟ್‌ಗಳಿಂದ ಸೋಲಿಸಿ ಶುಭಾರಂಭ ಮಾಡಿದರು. ಒಸಾಕಾ ಸತತ 2ನೇ ಯುಸ್‌ ಓಪನ್‌ ಚಾಂಪಿಯನ್‌ ಪಟ್ಟದ ಮೇಲೆ ಕಣ್ಣಿಟ್ಟಿದ್ದಾರೆ.

US Open: 21ನೇ ಗ್ರ್ಯಾನ್‌ ಸ್ಲಾಂ ಮೇಲೆ ಜೋಕೋವಿಚ್ ಕಣ್ಣು..!

Scroll to load tweet…
Scroll to load tweet…