Asianet Suvarna News Asianet Suvarna News

ಯುಎಸ್‌ ಓಪನ್‌: 2ನೇ ಸುತ್ತಿಗೆ ಜೋಕೋವಿಚ್, ಒಸಾಕ ಲಗ್ಗೆ

*  ಯುಎಸ್ ಓಪನ್‌ ಟೂರ್ನಿಯಲ್ಲಿ ಎರಡನೇ ಸುತ್ತಿಗೆ ಲಗ್ಗೆಯಿಟ್ಟ ನೊವಾಕ್ ಜೋಕೋವಿಚ್

* ಡೆನ್ಮಾರ್ಕ್‌ನ 18 ವರ್ಷದ ಹೋಲ್ಗರ್‌ ರ್ಯೂನ್‌ ವಿರುದ್ಧ ಜೋಕೋಗೆ ಗೆಲುವು

* ಕ್ಯಾಲೆಂಡರ್‌ ಗ್ರ್ಯಾನ್‌ ಸ್ಲಾಂ ಮೇಲೆ ಕಣ್ಣಿಟ್ಟಿರುವ ಜೋಕೋವಿಚ್

US Open 2021 Tennis Legend Novak Djokovic winning starts over Dutch teenager Holger Vitus Nodskov Rune kvn
Author
New York, First Published Sep 2, 2021, 8:50 AM IST
  • Facebook
  • Twitter
  • Whatsapp

ನ್ಯೂಯಾರ್ಕ್(ಸೆ.02): ಕ್ಯಾಲೆಂಡರ್‌ ಗ್ರ್ಯಾನ್‌ ಸ್ಲಾಂ ಮೇಲೆ ಕಣ್ಣಿಟ್ಟಿರುವ ವಿಶ್ವ ನಂ.1 ಟೆನಿಸಿಗ ನೋವಾಕ್‌ ಜೋಕೋವಿಚ್‌, ಯುಎಸ್‌ ಓಪನ್‌ ಪುರುಷರ ಸಿಂಗಲ್ಸ್‌ನಲ್ಲಿ ಶುಭಾರಂಭ ಮಾಡಿದ್ದಾರೆ. 

ಮೊದಲ ಸುತ್ತಿನ ಪಂದ್ಯದಲ್ಲಿ ಡೆನ್ಮಾರ್ಕ್‌ನ 18 ವರ್ಷದ ಹೋಲ್ಗರ್‌ ರ್ಯೂನ್‌ ವಿರುದ್ಧ 6-1, 6-7, 6-2, 6-1 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಈ ವರ್ಷ 3 ಗ್ರ್ಯಾನ್‌ ಸ್ಲಾಂ ಗೆದ್ದಿರುವ ಜೋಕೋವಿಚ್‌, 4ನೇ ಪ್ರಶಸ್ತಿ ಜಯಿಸಿ ದಾಖಲೆ ಬರೆಯಲು ಎದುರು ನೋಡುತ್ತಿದ್ದಾರೆ. ಈಗಾಗಲೇ ಜೋಕೋವಿಚ್ ಆಸ್ಟ್ರೇಲಿಯನ್ ಓಪನ್‌, ಫ್ರೆಂಚ್ ಓಪನ್ ಹಾಗೂ ವಿಂಬಲ್ಡನ್‌ ಗ್ರ್ಯಾನ್‌ ಸ್ಲಾಂ ಜಯಿಸಿದ್ದು, ದಾಖಲೆಯ ನಾಲ್ಕನೇ ಗ್ರ್ಯಾನ್‌ ಸ್ಲಾಂ ಮೇಲೆ ಕಣ್ಣಿಟ್ಟಿದ್ದಾರೆ.

ಯುಎಸ್‌ ಓಪನ್‌: ಮರ್ರೆಗೆ ಮೊದಲ ಸುತ್ತಲ್ಲೇ ಆಘಾತಕಾರಿ ಸೋಲು..!

ನೊವೊಕ್ ಜೋಕೋವಿಚ್ ಡಚ್ ಯುವ ಟೆನಿಸಿಗ ಕೆಚ್ಚೆದೆಯ ಹೋರಾಟವನ್ನು ಮೆಚ್ಚಿಕೊಂಡಿದ್ದಾರೆ. ನಾವು ಮತ್ತೊಮ್ಮೆ ಇಲ್ಲಿಯೇ ಭೇಟಿಯಾಗೋಣ ಎಂದು ಪಂದ್ಯ ಮುಕ್ತಾಯದ ಬಳಿಕ ಸರ್ಬಿಯಾದ ಟೆನಿಸ್ ದಿಗ್ಗಜ ಟ್ವೀಟ್‌ ಮಾಡಿದ್ದಾರೆ.

ಇದೇ ವೇಳೆ ಮಹಿಳಾ ಸಿಂಗಲ್ಸ್‌ನಲ್ಲಿ ವಿಶ್ವ ನಂ.1 ಆಸ್ಪ್ರೇಲಿಯಾದ ಆಶ್ಲೆ ಬಾರ್ಟಿ, ವಿಶ್ವ ನಂ.2 ಬೆಲಾರುಸ್‌ನ ಆಯ್ರ್ನಾ ಸಬಲೆಂಕಾ, ವಿಶ್ವ ನಂ.3 ಜಪಾನ್‌ನ ನವೊಮಿ ಒಸಾಕ 2ನೇ ಸುತ್ತಿಗೆ ಪ್ರವೇಶಿಸಿದ್ದಾರೆ.

Follow Us:
Download App:
  • android
  • ios