* ಯುಎಸ್‌ ಓಪನ್‌ ಟೆನಿಸ್ ಟೂರ್ನಿಯಲ್ಲಿ 3ನೇ ಸುತ್ತು ಪ್ರವೇಶಿಸಿದ ಸಿಮೋನಾ ಹಾಲೆಪ್‌, ಸಿಟ್ಸಿಪಾಸ್‌* ಯುಎಸ್‌ ಓಪನ್‌ನಲ್ಲಿ ಬರೋಬ್ಬರಿ 5 ವರ್ಷಗಳ ಬಳಿಕ ಹಾಲೆಪ್‌ ಮೂರನೇ ಸುತ್ತಿಗೆ ಲಗ್ಗೆ* 2016ರಲ್ಲಿ ಕಡೆಯ ಬಾರಿಗೆ ಯುಎಸ್‌ ಓಪನ್‌ನಲ್ಲಿ ಹಾಲೆಪ್‌ ಮೂರನೇ ಸುತ್ತು ಪ್ರವೇಶಿಸಿದ್ದರು

ನ್ಯೂಯಾರ್ಕ್(ಸೆ.03): ಯುಎಸ್‌ ಓಪನ್‌ ಟೆನಿಸ್‌ ಗ್ರ್ಯಾನ್‌ ಪ್ರಿಯಲ್ಲಿ ತಾರಾ ಟೆನಿಸಿಗರಾದ ರೊಮೇನಿಯಾದ ಸಿಮೋನಾ ಹಾಲೆಪ್‌, ಗ್ರೀಸ್‌ನ ಸ್ಟೆಫಾನೋಸ್‌ ಸಿಟ್ಸಿಪಾಸ್‌ 3ನೇ ಸುತ್ತಿಗೆ ಪ್ರವೇಶಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಹಿಳಾ ಸಿಂಗಲ್ಸ್‌ 2ನೇ ಸುತ್ತಿನ ಪಂದ್ಯದಲ್ಲಿ ಹಾಲೆಪ್‌, ಸರ್ಬಿಯಾದ ಕುಚೊವಾ ವಿರುದ್ಧ 6-3, 6-1 ಸೆಟ್‌ಗಳಲ್ಲಿ ಜಯಗಳಿಸಿದರು. ಈ ಮೂಲಕ ಬರೋಬ್ಬರಿ 5 ವರ್ಷಗಳ ಬಳಿಕ ಹಾಲೆಪ್‌ ಮೂರನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. 2016ರಲ್ಲಿ ಕಡೆಯ ಬಾರಿಗೆ ಯುಎಸ್‌ ಓಪನ್‌ನಲ್ಲಿ ಹಾಲೆಪ್‌ ಮೂರನೇ ಸುತ್ತು ಪ್ರವೇಶಿಸಿದ್ದರು. 

Scroll to load tweet…

ಯುಎಸ್‌ ಓಪನ್‌: 2ನೇ ಸುತ್ತಿಗೆ ಜೋಕೋವಿಚ್, ಒಸಾಕ ಲಗ್ಗೆ

ಪುರುಷರ ಸಿಂಗಲ್ಸ್‌ 2ನೇ ಸುತ್ತಿನಲ್ಲಿ ಸಿಟ್ಸಿಪಾಸ್‌, ಫ್ರಾನ್ಸ್‌ನ ಮನ್ನಾರಿನೊ ವಿರುದ್ಧ 6-3, 6-4, 6-7, 6-0 ಸೆಟ್‌ಗಳಲ್ಲಿ ಗೆದ್ದು ಮುನ್ನಡೆದರು. 2ನೇ ಶ್ರೇಯಾಂಕಿತೆ ಬೆಲಾರುಸ್‌ನ ಆಯ್ರ್ನಾ ಸಬಲೆಂಕಾ, 8ನೇ ಶ್ರೇಯಾಂಕಿತೆ ಚೆಕ್‌ ಗಣರಾಜ್ಯದ ಬಾರ್ಬೊರಾ ಕ್ರೇಜಿಕೋವಾ ಸಹ 3ನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಭಾರೀ ಗಾಳಿ, ಮಳೆಯಿಂದಾಗಿ ಗುರುವಾರದ ಪಂದ್ಯಗಳು ವಿಳಂಬಗೊಂಡವು.

ಈ ಮೊದಲು 9ನೇ ಶ್ರೇಯಾಂಕಿತೆ ಗಾರ್ಬೈನ್‌ ಮುಗುರುಜಾ ಹಾಗೂ ಓನ್ಸ್‌ ಜೇಬರ್‌ ಕೂಡಾ ಯುಎಸ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಮೂರನೇ ಸುತ್ತು ಪ್ರವೇಶಿಸಿದ್ದಾರೆ. 2 ಗ್ರ್ಯಾನ್‌ ಸ್ಲಾಂ ಒಡತಿ ಮುಗುರುಜಾ ಮುಂದಿನ ಪಂದ್ಯದಲ್ಲಿ ಕಳೆದ ಯುಎಸ್ ಓಪನ್ ರನ್ನರ್ ಅಪ್‌ ವಿಕ್ಟೋರಿಯಾ ಅಜೆರೆಂಕಾ ಅವರನ್ನು ಎದುರಿಸುವ ಸಾಧ್ಯತೆಯಿದೆ