ಯುಎಸ್ ಓಪನ್: ಹಾಲಿ ಚಾಂಪಿಯನ್ ನವೊಮಿ ಒಸಾಕಗೆ ಆಘಾತಕಾರಿ ಸೋಲು..!
* ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ಒಸಾಕಗೆ ಶಾಕ್
* ಹಾಲಿ ಚಾಂಪಿಯನ್‌ಗೆ ಶಾಕ್ ನೀಡಿದ ಕೆನಡಾದ ಯುವ ಆಟಗಾರ್ತಿ
* 3ನೇ ಸುತ್ತಿಗೆ ಲಗ್ಗೆಯಿಟ್ಟ ನೊವಾಕ್ ಜೋಕೋವಿಚ್
ನ್ಯೂಯಾರ್ಕ್(ಸೆ.04): ನಾಲ್ಕು ಗ್ರ್ಯಾನ್ ಸ್ಲಾಂ ಒಡತಿ ಹಾಗೂ ಯುಎಸ್ ಓಪನ್ ಹಾಲಿ ಚಾಂಪಿಯನ್ ನವೊಮಿ ಒಸಾಕ, ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಕೆನಡಾದ 18 ವರ್ಷದ ಆಟಗಾರ್ತಿ ಲೇಯ್ ಫರ್ನಾಂಡೀಸ್ ಎದುರು 5-7, 7-6(7/2), 6-4 ಸೆಟ್‌ಗಳಿಂದ ಆಘಾತಕಾರಿ ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಶುಕ್ರವಾರ ನಡೆದ ರೋಚಕ ಕಾದಾಟದಲ್ಲಿ ಕೆನಡಾದ ಯುವ ಎಡಗೈ ಆಟಗಾರ್ತಿ ಫರ್ನಾಂಡೀಸ್ ಮೇಲುಗೈ ಸಾಧಿಸುವ ಮೂಲಕ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಸೆಮಿಫೈನಲ್‌ನಲ್ಲಿ ಫರ್ನಾಂಡೀಸ್ 16ನೇ ಶ್ರೇಯಾಂಕಿಯೆ ಏಂಜಲಿಕ ಕೆರ್ಬರ್ ಅವರನ್ನು ಎದುರಿಸಲಿದ್ದಾರೆ.
ಯುಎಸ್ ಓಪನ್: 5 ವರ್ಷಗಳ ಬಳಿಕ ಮೂರನೇ ಸುತ್ತು ಪ್ರವೇಶಿಸಿದ ಸಿಮೋನಾ ಹಾಲೆಪ್
ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಯುಎಸ್ ಓಪನ್ ಟೆನಿಸ್ ಗ್ರ್ಯಾನ್ ಸ್ಲಾಂನ ಪುರುಷರ ಸಿಂಗಲ್ಸ್ 3ನೇ ಸುತ್ತಿಗೆ ವಿಶ್ವ ನಂ.1, ಸರ್ಬಿಯಾದ ನೋವಾಕ್ ಜೋಕೋವಿಚ್ ಪ್ರವೇಶಿಸಿದ್ದಾರೆ. 2ನೇ ಸುತ್ತಿನ ಪಂದ್ಯದಲ್ಲಿ ಜೋಕೋವಿಚ್ ಟಾಲನ್ ಗ್ರೀಕ್ಸ್‌ಪೂರ್ ವಿರುದ್ಧ 6-2, 6-3, 6-2 ಸೆಟ್‌ಗಳಲ್ಲಿ ಜಯಗಳಿಸಿದರು. ಕ್ಯಾಲೆಂಡರ್ ಸ್ಲಾಂ ಸಾಧನೆ ಮೇಲೆ ಕಣ್ಣಿಟ್ಟಿರುವ ಜೋಕೋವಿಚ್‌ಗೆ ಇನ್ನು 5 ಪಂದ್ಯಗಳಲ್ಲಿ ಗೆಲ್ಲಬೇಕಿದೆ.
ಇದೇ ವೇಳೆ ಮಹಿಳಾ ಡಬಲ್ಸ್‌ನಲ್ಲಿ ಭಾರತದ ಸಾನಿಯಾ ಮಿರ್ಜಾ ಹಾಗೂ ಅಮೆರಿಕದ ಕೋಕೋ ವ್ಯಾಂಡೆವಿ ಜೋಡಿ ಮೊದಲ ಸುತ್ತಿನಲ್ಲೇ ಸೋತು ಹೊರಬಿತ್ತು.