Asianet Suvarna News Asianet Suvarna News

ಯುಎಸ್‌ ಓಪನ್‌: 4ನೇ ಸುತ್ತಿಗೆ ಲಗ್ಗೆಯಿಟ್ಟ ಸೆರೆನಾ, ಥೀಮ್‌

ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ಅಮೆ​ರಿ​ಕದ ಸೆರೆನಾ ವಿಲಿ​ಯಮ್ಸ್ ನಾಲ್ಕನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಇನ್ನು ಭಾರತದ ರೋಹನ್ ಬೋಪಣ್ಣ ಜೋಡಿ ಡಬಲ್ಸ್‌ನಲ್ಲಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

US Open 2020 Serena Williams survives Thiem Azarenka roll into round of 16
Author
New York, First Published Sep 7, 2020, 11:01 AM IST
  • Facebook
  • Twitter
  • Whatsapp

ನ್ಯೂಯಾರ್ಕ್: 23 ಗ್ರ್ಯಾಂಡ್‌ಸ್ಲಾಂಗಳ ಒಡತಿ ಅಮೆ​ರಿ​ಕದ ಸೆರೆನಾ ವಿಲಿ​ಯಮ್ಸ್‌, ಯುಎಸ್‌ ಓಪನ್‌ ಟೆನಿಸ್‌ ಗ್ರ್ಯಾನ್‌ ಸ್ಲಾಂನ ಮಹಿಳಾ ಸಿಂಗಲ್ಸ್‌ 4ನೇ ಸುತ್ತಿಗೆ ಪ್ರವೇ​ಶಿ​ಸಿ​ದ್ದಾರೆ. 

3ನೇ ಸುತ್ತಿನ ಪಂದ್ಯ​ದಲ್ಲಿ ತಮ್ಮ ದೇಶ​ದ​ವರೇ ಆದ, 2017ರ ಚಾಂಪಿ​ಯನ್‌ ಸ್ಲೋನ್‌ ಸ್ಟೀಫನ್ಸ್‌ ವಿರುದ್ಧ 2-6, 6-2, 6-2 ಸೆಟ್‌ಗಳಲ್ಲಿ ಜಯ​ಗ​ಳಿ​ಸಿ​ದರು. 2ನೇ ಶ್ರೇಯಾಂಕಿತೆ ಅಮೆ​ರಿ​ಕದ ಸೋಫಿಯಾ ಕೆನನ್‌, ಬೆಲಾ​ರುಸ್‌ನ ವಿಕ್ಟೋ​ರಿಯಾ ಅಜ​ರೆಂಕಾ ಸಹ ಪ್ರಿ ಕ್ವಾರ್ಟರ್‌ ಫೈನಲ್‌ ಹಂತ​ಕ್ಕೇ​ರಿ​ದ್ದಾರೆ.

ಇನ್ನು ಪುರು​ಷರ ಸಿಂಗಲ್ಸ್‌ನ 3ನೇ ಸುತ್ತಿನಲ್ಲಿ 2ನೇ ಶ್ರೇಯಾಂಕಿತ ಆಸ್ಟ್ರಿ​ಯಾದ ಡೊಮಿ​ನಿಕ್‌ ಥೀಮ್‌ ಕ್ರೊವೇ​ಷಿ​ಯಾದ ಮರಿನ್‌ ಸಿಲಿಚ್‌ ವಿರುದ್ಧ 6-2, 6-2, 3-6, 6-3 ಸೆಟ್‌ಗಳಲ್ಲಿ ಗೆದ್ದು 4ನೇ ಸುತ್ತು ಪ್ರವೇಶಿಸಿದರು.

ಯುಎಸ್‌ ಓಪನ್‌: 2ನೇ ಸುತ್ತಿಗೆ ಲಗೆಯಿಟ್ಟ ಭಾರತದ ಸುಮಿತ್‌

ಕ್ವಾರ್ಟರ್‌ಗೆ ಬೋಪಣ್ಣ ಜೋಡಿ: ಪುರು​ಷರ ಡಬಲ್ಸ್‌ 2ನೇ ಸುತ್ತಿ​ನಲ್ಲಿ ಜರ್ಮ​ನಿಯ ಕ್ರಾವೀಟ್‌್ಜ ಹಾಗೂ ಮೀಸ್‌ ಜೋಡಿ ವಿರುದ್ಧ 4-6, 6 -4, 6-3 ಸೆಟ್‌ಗಳಲ್ಲಿ ಗೆದ್ದ ಭಾರ​ತದ ರೋಹನ್‌ ಬೋಪಣ್ಣ ಹಾಗೂ ಕೆನ​ಡಾದ ಡೆನಿಸ್‌ ಶಾಪೊ​ವ​ಲೊವ್‌ ಜೋಡಿ ಕ್ವಾರ್ಟರ್‌ ಫೈನಲ್‌ ಪ್ರವೇ​ಶಿ​ಸಿದೆ.

Follow Us:
Download App:
  • android
  • ios