ಉಬರ್‌ ಕಪ್‌: ಕ್ವಾರ್ಟರ್‌ ಪ್ರವೇಶಿಸಿದ ಭಾರತ ತಂಡ

* ಉಬರ್ ಕಪ್ ಟೂರ್ನಿಯಲ್ಲಿ ಭಾರತ ಮಿಂಚಿನಾಟ

* ಸ್ಕಾಟ್ಲೆಂಡ್ ವಿರುದ್ದ ಭರ್ಜರಿ ಗೆಲುವು ಸಾಧಿಸಿದ ಭಾರತ ಮಹಿಳಾ ಬ್ಯಾಡ್ಮಿಂಟನ್ ಟೀಂ 

* ಅಂತಿಮ ಪಂದ್ಯದಲ್ಲಿ ಭಾರತ ಬಲಿಷ್ಠ ಥಾಯ್ಲೆಂಡ್‌ ವಿರುದ್ಧ ಸೆಣಸಾಟ

Uber Cup 2021 India Women Badminton team reach Quarter Final kvn

ಆರ್ಹಸ್‌(ಅ.13): ಉಬರ್‌ ಕಪ್‌ ಬ್ಯಾಡ್ಮಿಂಟನ್‌ (Uber Cup Badminton Tournament) ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ಭಾರತ ಮಹಿಳಾ ತಂಡ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ. ಮಂಗಳವಾರ ನಡೆದ ‘ಬಿ’ ಗುಂಪಿನ 2ನೇ ಪಂದ್ಯದಲ್ಲಿ ಭಾರತ, ಸ್ಕಾಟ್ಲೆಂಡ್‌ ವಿರುದ್ಧ 4-1ರಲ್ಲಿ ಜಯಗಳಿಸಿತು. ಮೊದಲ ಸಿಂಗಲ್ಸ್‌ನಲ್ಲಿ ಸೋತ ಭಾರತ ಬಳಿಕ 2 ಸಿಂಗಲ್ಸ್‌ ಹಾಗೂ 2 ಡಬಲ್ಸ್‌ ಪಂದ್ಯಗಳಲ್ಲಿ ಜಯಗಳಿಸಿತು. 

ಇದಕ್ಕೂ ಮೊದಲು ಸ್ಪೇನ್‌ ವಿರುದ್ದ ನಡೆದ ಪಂದ್ಯದಲ್ಲಿ ಭಾರತ 3-2 ಅಂತರದಲ್ಲಿ ಗೆಲುವಿನ ನಗೆ ಬೀರಿತ್ತು. ಇದೇ ಪಂದ್ಯದಲ್ಲಿ ಭಾರತದ ಪ್ರಮುಖ ಬ್ಯಾಡ್ಮಿಂಟನ್‌ ತಾರೆ ಸೈನಾ ನೆಹ್ವಾಲ್ (Saina Nehwal) ಗಾಯದ ಸಮಸ್ಯೆಯಿಂದಾಗಿ ಮುಗ್ಗರಿಸಿದ್ದರು. ಬುಧವಾರ ಗುಂಪು ಹಂತದ ಅಂತಿಮ ಪಂದ್ಯದಲ್ಲಿ ಭಾರತ ಬಲಿಷ್ಠ ಥಾಯ್ಲೆಂಡ್‌ ವಿರುದ್ಧ ಸೆಣಸಲಿದೆ.

ಥಾಮಸ್‌ ಕಪ್‌ ಬ್ಯಾಡ್ಮಿಂಟನ್‌: ಭಾರತಕ್ಕೆ 5-0 ಭರ್ಜರಿ ಜಯ

ಡಬಲ್ಸ್‌ನ ಪಂದ್ಯವೊಂದರಲ್ಲಿ ಆಡಿದ ರಾಷ್ಟ್ರೀಯ ಕೋಚ್‌ ಪುಲ್ಲೇಲಾ ಗೋಪಿಚಂದ್‌ (Pullela Gopichand)ರ ಪುತ್ರಿ, 18ರ ಗಾಯತ್ರಿ ಉತ್ತಮ ಆಟವಾಡಿ ಗಮನ ಸೆಳೆದರು. ಮೊದಲ ಪಂದ್ಯದಲ್ಲಿ ಭಾರತ, ಸ್ಪೇನ್‌ ವಿರುದ್ಧ ಜಯಿಸಿತ್ತು. ಉಬರ್‌ ಕಪ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತ ಎರಡು ಬಾರಿ ಸೆಮಿಫೈನಲ್‌ ಹಂತ ಪ್ರವೇಶಿಸಿದೆ. 2014 ಹಾಗೂ 2016ರಲ್ಲಿ ಸೆಮೀಸ್‌ ಪ್ರವೇಶಿಸಿದ್ದ ಭಾರತ ಮಹಿಳಾ ಬ್ಯಾಡ್ಮಿಂಟನ್ ತಂಡ ಈ ಬಾರಿ ಉತ್ತಮ ಪ್ರದರ್ಶನ ತೋರುವ ಮೂಲಕ ಗಮನ ಸೆಳೆದಿದೆ.

ಇದಕ್ಕೂ ಮೊದಲ ಥಾಮಸ್‌ ಕಪ್‌ ಬ್ಯಾಡ್ಮಿಂಟನ್‌ ಟೂರ್ನಿ (Thomas Cup) ಯಲ್ಲಿ ಭಾರತ ಪುರುಷರ ತಂಡ ಶುಭಾರಂಭ ಮಾಡಿದೆ. ಸೋಮವಾರ ನಡೆದ ‘ಸಿ’ ಗುಂಪಿನ ಪಂದ್ಯದಲ್ಲಿ ನೆದರ್‌ಲೆಂಡ್ಸ್‌ ವಿರುದ್ಧ ಭಾರತ 5-0 ಅಂತರದಲ್ಲಿ ಗೆಲುವು ಸಾಧಿಸಿತು. 

ಸ್ಯಾಫ್‌: ಗೆಲ್ಲಲೇ ಬೇಕಾದ ಒತ್ತಡದಲ್ಲಿ ಭಾರತ ತಂಡ!

ಮಾಲೆ: 7 ಬಾರಿ ಚಾಂಪಿಯನ್‌ ಭಾರತ, ಸ್ಯಾಫ್‌ ಕಪ್‌ ಫುಟ್ಬಾಲ್‌ ಟೂರ್ನಿ (Saff Football Tournament )ಯ ಫೈನಲ್‌ ಪ್ರವೇಶಿಸಬೇಕಿದ್ದರೆ ಬುಧವಾರ ನಡೆಯಲಿರುವ ರೌಂಡ್‌ ರಾಬಿನ್‌ ಹಂತದ ಅಂತಿಮ ಪಂದ್ಯದಲ್ಲಿ ಆತಿಥೇಯ ಮಾಲ್ಡೀವ್ಸ್‌ ವಿರುದ್ಧ ಗೆಲ್ಲಲೇಬೇಕಿದೆ.

77ನೇ ಗೋಲು ಸಿಡಿಸಿ ದಿಗ್ಗಜ ಪೀಲೆ ದಾಖಲೆ ಸರಿಗಟ್ಟಿದ್ದ ಸುನಿಲ್ ಚೆಟ್ರಿ!

ಇದುವರೆಗೂ ನಡೆದ 3 ಪಂದ್ಯಗಳಲ್ಲಿ 2 ಡ್ರಾ, 1 ಗೆಲುವಿನೊಂದಿಗೆ ಭಾರತ ಅಜೇಯವಾಗಿ ಉಳಿದಿದ್ದರೂ, ಸುನಿಲ್‌ ಚೆಟ್ರಿ ಪಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. 3 ಪಂದ್ಯಗಳಲ್ಲಿ ತಂಡ ಕೇವಲ 2 ಗೋಲುಗಳನ್ನಷ್ಟೇ ದಾಖಲಿಸಿದೆ. ಭಾರತ ತಂಡವು ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದು, ಈ ಪಂದ್ಯದಲ್ಲಿ ಸೋತರೆ ಟೂರ್ನಿಯಿಂದ ಹೊರಬೀಳಲಿದೆ. ಭಾರತ ಕೊನೆ ಬಾರಿಗೆ 3ನೇ ಸ್ಥಾನ ಪಡೆದಿದ್ದು 2003ರಲ್ಲಿ. ಆ ಬಳಿಕ ನಡೆದ 11 ಆವೃತ್ತಿಗಳಲ್ಲಿ ಭಾರತ ಚಾಂಪಿಯನ್‌ ಇಲ್ಲವೇ ರನ್ನರ್‌-ಅಪ್‌ ಆಗಿದೆ.

ಕೆಲ ಕ್ರೀಡಾ ಒಕ್ಕೂಟಗಳು ಅಥ್ಲೀಟ್‌ಗಳನ್ನು ಬೆಳೆಯಲು ಬಿಡುತ್ತಿಲ್ಲ : ವಾಸ್ತವ ಬಿಚ್ಚಿಟ್ಟ ಕಿರಣ್ ರಿಜಿಜು

ಸದ್ಯ ಮಾಲ್ಡೀವ್ಸ್‌ 3 ಪಂದ್ಯಗಳನ್ನಾಡಿ 2 ಗೆಲುವು ಹಾಗೂ ಒಂದು ಸೋಲು ಸಹಿತ 6 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ನೇಪಾಳ ಕೂಡಾ 6 ಅಂಕಗಳ ಸಹಿತ ಎರಡನೇ ಸ್ಥಾನದಲ್ಲಿದೆ. ಇದೀಗ ಸುನಿಲ್ ಚೆಟ್ರಿ ನೇತೃತ್ವದ ಭಾರತ ತಂಡ ಮಾಲ್ಡೀವ್ಸ್‌ಗೆ ಶಾಕ್‌ ನೀಡುವ ವಿಶ್ವಾಸದಲ್ಲಿದೆ.

ಪಂದ್ಯ ಆರಂಭ: ರಾತ್ರಿ 9.30ಕ್ಕೆ, 
ನೇರ ಪ್ರಸಾರ: ಯುರೋ ಸ್ಪೋರ್ಟ್‌
 

Latest Videos
Follow Us:
Download App:
  • android
  • ios