ಥಾಮಸ್‌ ಕಪ್‌ ಬ್ಯಾಡ್ಮಿಂಟನ್‌: ಭಾರತಕ್ಕೆ 5-0 ಭರ್ಜರಿ ಜಯ

* ಥಾಮಸ್ ಕಪ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತ ಶುಭಾರಂಭ

* ಆತಿಥೇಯ ನೆದರ್‌ಲೆಂಡ್ಸ್‌ ವಿರುದ್ದ ಭಾರತಕ್ಕೆ ಭರ್ಜರಿ ಜಯ

* ಮೊದಲ ಪಂದ್ಯದಲ್ಲೇ ಮಿಂಚಿದ ಸಾಯಿ ಪ್ರಣೀತ್, ಶ್ರೀಕಾಂತ್

Thomas Cup Indian Badminton Team thrash Netherlands in group opening Match kvn

ಆರ್ಹಸ್‌(ಅ.12): ಥಾಮಸ್‌ ಕಪ್‌ ಬ್ಯಾಡ್ಮಿಂಟನ್‌ (Thomas Cup) ಟೂರ್ನಿಯಲ್ಲಿ ಭಾರತ ಪುರುಷರ ತಂಡ ಶುಭಾರಂಭ ಮಾಡಿದೆ. ಸೋಮವಾರ ನಡೆದ ‘ಸಿ’ ಗುಂಪಿನ ಪಂದ್ಯದಲ್ಲಿ ನೆದರ್‌ಲೆಂಡ್ಸ್‌ ವಿರುದ್ಧ ಭಾರತ 5-0 ಅಂತರದಲ್ಲಿ ಗೆಲುವು ಸಾಧಿಸಿತು.

ಮೊದಲ ಸಿಂಗಲ್ಸ್‌ ಪಂದ್ಯದಲ್ಲಿ ಕಿದಂಬಿ ಶ್ರೀಕಾಂತ್‌ (Kidambi Srikanth) 21-12, 21-14 ಅಂತರದಲ್ಲಿ ಜೊರನ್‌ ಕ್ವೀಕೆಲ್‌ ವಿರುದ್ಧ ಗೆದ್ದರು. ಬಳಿಕ ಡಬಲ್ಸ್‌ನಲ್ಲಿ ಸಾತ್ವಿಕ್‌-ಚಿರಾಗ್‌ ಶೆಟ್ಟಿಜೋಡಿ ರುಬೆನ್‌ -ಟೈಸ್‌ ವಾನ್‌ ಜೋಡಿಯನ್ನು 21-19, 21-12 ಅಂತರದಲ್ಲಿ ಸೋಲಿಸಿ 2-0 ಮುನ್ನಡೆ ಒದಗಿಸಿದರು. ಟೋಕಿಯೋ ಒಲಿಂಪಿಕ್ಸ್ (Tokyo Olympics) ಕ್ರೀಡಾಕೂಟದಲ್ಲಿ ಭಾರತದ ಡಬಲ್ಸ್ ಜೋಡಿಯಾದ ಸಾತ್ವಿಕ್‌ರಾಜ್ ರಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಜೋಡಿ ಅಮೋಘ ಪ್ರದರ್ಶನ ತೋರಿದ್ದರಾದರೂ ಪದಕ ಗೆಲ್ಲಲು ವಿಫಲರಾಗಿದ್ದರು. ಟೋಕಿಯೋ ಒಲಿಂಪಿಕ್ಸ್‌ ಬಳಿಕ ಮೊದಲ ಟೂರ್ನಿಯಲ್ಲೇ ಭಾರತದ ಪುರಷರ ಡಬಲ್ಸ್ ಜೋಡಿ ಮತ್ತೊಮ್ಮೆ ಮಿಂಚಿನ ಪ್ರದರ್ಶನ ತೋರುವ ಮೂಲಕ ಗಮನ ಸೆಳೆದಿದ್ದಾರೆ.

77ನೇ ಗೋಲು ಸಿಡಿಸಿ ದಿಗ್ಗಜ ಪೀಲೆ ದಾಖಲೆ ಸರಿಗಟ್ಟಿದ್ದ ಸುನಿಲ್ ಚೆಟ್ರಿ! 

2ನೇ ಸಿಂಗಲ್ಸ್‌ನಲ್ಲಿ ಬಿ ಸಾಯಿ ಪ್ರಣೀತ್‌ (B Sai Praneeth) 21-4, 21-12 ಅಂತರದಲ್ಲಿ ರೊಬಿನ್‌ ಮೆಸ್ಮನ್‌ ವಿರುದ್ಧ ಗೆದ್ದರು. 2ನೇ ಡಬಲ್ಸ್‌ನಲ್ಲಿ ಅರ್ಜುನ್‌-ಧ್ರುವ್‌ ಕಪಿಲಾ ಜೋಡಿ ಆ್ಯಂಡಿ ಬುಜ್ಕ್-ಬ್ರಿಯನ್‌ರನ್ನು 21-12, 21-13 ಅಂತರದಲ್ಲಿ ಸೋಲಿಸಿದರೆ, ಕೊನೆಯ ಸಿಂಗಲ್ಸ್‌ ಪಂದ್ಯದಲ್ಲಿ ಗಿಜ್‌ ಡುಯಿಜ್‌ರನ್ನು ಸಮೀರ್‌ ವರ್ಮಾ 21-6, 21-11ರಲ್ಲಿ ಸೋಲಿಸುವುದರೊಂದಿಗೆ ಭಾರತ 5-0 ಅಂತರದಲ್ಲಿ ಗೆಲುವು ಸಾಧಿಸಿತು. ಮಂಗಳವಾರ ಭಾರತ 2ನೇ ಪಂದ್ಯವನ್ನು ತಂಡ ಟಹೀಟಿ ವಿರುದ್ಧ ಆಡಲಿದ್ದು, ಉಬರ್‌ ಕಪ್‌ನಲ್ಲಿ ಮಹಿಳಾ ತಂಡ ಸ್ಕಾಟ್ಲೆಂಡ್‌ ವಿರುದ್ಧ ಸೆಣಸಲಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಅತಿ ಕಿರಿಯ ಆಟಗಾರ್ತಿ ಹಂಟರ್

ಹರಾರೆ: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಅತಿಕಿರಿಯ ಕ್ರಿಕೆಟರ್‌(ಪುರುಷ ಹಾಗೂ ಮಹಿಳೆ) ಎನ್ನುವ ದಾಖಲೆಯನ್ನು ಐರ್ಲೆಂಡ್‌ನ 16 ವರ್ಷದ ಏಮಿ ಹಂಟರ್‌ ಬರೆದಿದ್ದಾರೆ. 

ಸೋಮವಾರ ಇಲ್ಲಿ ನಡೆದ ಜಿಂಬಾಬ್ವೆ ವಿರುದ್ಧ ಪಂದ್ಯದಲ್ಲಿ ಔಟಾಗದೆ 121 ರನ್‌ ಗಳಿಸಿ, ಭಾರತದ ಮಿಥಾಲಿ ರಾಜ್‌ (Mithali Raj) (16 ವರ್ಷ 205 ದಿನ) ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು. ಮಿಥಾಲಿ 1999ರಲ್ಲಿ ಐರ್ಲೆಂಡ್‌ ವಿರುದ್ಧ ಶತಕ ಬಾರಿಸಿ ಮಿಥಾಲಿ ದಾಖಲೆ ಬರೆದಿದ್ದರು.

ಪುಟ್ಟ ಅಭಿಮಾನಿಗೆ ಚೆಂಡು ಉಡುಗೊರೆ ಕೊಟ್ಟ ಮಹೇಂದ್ರ ಸಿಂಗ್ ಧೋನಿ!

ದುಬೈ: ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದ ಬಳಿಕ ಎಂ.ಎಸ್‌.ಧೋನಿ (MS Dhoni) ಪುಟ್ಟಅಭಿಮಾನಿಗೆ ತಮ್ಮ ಹಸ್ತಾಕ್ಷರವುಳ್ಳ ಚೆಂಡನ್ನು ಉಡುಗೊರೆಯಾಗಿ ನೀಡಿ ಕ್ರೀಡಾಭಿಮಾನಿಗಳ ಮನಗೆದ್ದಿದ್ದಾರೆ. 

IPL 2021: ಡೆಲ್ಲಿ ವಿರುದ್ಧ ಧೋನಿ ಸ್ಫೋಟ ಕಂಡ ಕೊಹ್ಲಿ ಹೇಳಿದ್ದು ಒಂದೇ ಮಾತು!

ಭಾನುವಾರದ ಪಂದ್ಯದಲ್ಲಿ ಚೆನ್ನೈ ಗೆದ್ದ ಸಂಭ್ರಮದಲ್ಲಿ ಇಬ್ಬರು ಮಕ್ಕಳು ಗಳಗಳನೆ ಅತ್ತಿದ್ದು, ಇದರ ಫೋಟೋ, ವಿಡಿಯೋ ಭಾರೀ ವೈರಲ್‌ ಆಗಿತ್ತು. ಪಂದ್ಯ ಮುಗಿದ ಕೂಡಲೇ ಸ್ಟಾಂಡ್‌ನತ್ತ ತೆರಳಿದ ಧೋನಿ ತಮ್ಮ ಹಸ್ತಾಕ್ಷರ ಇರುವ ಚೆಂಡನ್ನು ಮಕ್ಕಳಿಗೆ ನೀಡಿದ್ದಾರೆ. ಈ ವೇಳೆ ಮಕ್ಕಳು ಸಂಭ್ರಮದಿಂದ ಕುಣಿದಾಡಿದ್ದಾರೆ. ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್‌ ಕಿಂಗ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸುವ ಮೂಲಕ ಫೈನಲ್‌ಗೇರಿದೆ.

Latest Videos
Follow Us:
Download App:
  • android
  • ios