ಥಾಯ್ಲೆಂಡ್ ಓಪನ್: ಸಿಂಧು, ಸಮೀರ್ ಕ್ವಾರ್ಟರ್‌ಗೆ ಲಗ್ಗೆ
ಭಾರತದ ತಾರಾ ಶಟ್ಲರ್‌ಗಳಾದ ಪಿ.ವಿ ಸಿಂಧು ಹಾಗೂ ಸಮೀರ್ ವರ್ಮಾ ಟಯೋಟಾ ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಬ್ಯಾಂಕಾಕ್(ಜ.22): ಭಾರತದ ತಾರಾ ಶಟ್ಲರ್ ಪಿ.ವಿ. ಸಿಂಧು ಹಾಗೂ ಸಮೀರ್ ವರ್ಮಾ, ಇಲ್ಲಿ ನಡೆಯುತ್ತಿರುವ ಥಾಯ್ಲೆಂಡ್ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ.
ಮಹಿಳಾ ಸಿಂಗಲ್ಸ್ ವಿಭಾಗದ ಪ್ರಿ ಕ್ವಾರ್ಟರ್ ಪಂದ್ಯದಲ್ಲಿ ಒಲಿಂಪಿಕ್ ಬೆಳ್ಳಿ ವಿಜೇತೆ ಸಿಂಧು, ಮಲೇಷ್ಯಾದ ಕಿಸೊನಾ ಸೆಲ್ವಾದುರೈ ವಿರುದ್ಧ 21-10, 21-12 ಗೇಮ್‌ಗಳಿಂದ ಗೆಲುವು ಸಾಧಿಸಿದರು. ಕ್ವಾರ್ಟರ್‌ನಲ್ಲಿ ಸಿಂಧು, ಥಾಯ್ಲೆಂಡ್‌ನ ರಚನಾಕ್ ಇಂಟನಾನ್‌ರನ್ನು ಎದುರಿಸಲಿದ್ದಾರೆ.
ಪುರುಷರ ಸಿಂಗಲ್ಸ್‌ನಲ್ಲಿ ಸಮೀರ್ ವರ್ಮಾ, ಡೆನ್ಮಾರ್ಕ್ನ ರಸ್ಮಸ್ ಗೆಮ್ಕೆ ಎದುರು 21-12, 21-9 ಗೇಮ್‌ಗಳಿಂದ ಜಯ ಪಡೆದರು. ಕ್ವಾರ್ಟರ್‌ನಲ್ಲಿ ಸಮೀರ್, ಡೆನ್ಮಾರ್ಕ್ನ ಆಂಟೋನ್ಸೆನ್ ವಿರುದ್ಧ ಸೆಣಸಲಿದ್ದಾರೆ. ಎಚ್.ಎಸ್. ಪ್ರಣಯ್, ಪ್ರಿಕ್ವಾರ್ಟರ್‌ನಲ್ಲಿ ಸೋತು ಹೊರಬಿದ್ದರು.
ಆಸ್ಪ್ರೇಲಿಯನ್ ಓಪನ್: ಇಬ್ಬರು ಆಟಗಾರರಿಗೆ ಕೊರೋನಾ
ಮಿಶ್ರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಹಾಗೂ ಸಾತ್ವಿಕ್ ಸಾಯಿರಾಜ್ ಜೋಡಿ, ವಿಶ್ವ ನಂ.17 ಜರ್ಮನಿಯ ಮಾರ್ಕ್ ಲಮ್ಸ್‌ಫಸ್ ಮತ್ತು ಇಸಾಬೆಲ್ ಜೋಡಿ ವಿರುದ್ಧ 22-20, 14-21, 21-16 ಗೇಮ್‌ಗಳಲ್ಲಿ ಜಯ ಸಾಧಿಸಿ ಎಂಟರಘಟ್ಟಕ್ಕೇರಿತು. ಪುರುಷರ ಡಬಲ್ಸ್‌ನಲ್ಲಿ ಚಿರಾಗ್ ಶೆಟ್ಟಿ, ರಂಕಿರೆಡ್ಡಿ ಜೋಡಿ ಕ್ವಾರ್ಟರ್‌ಗೇರಿತು.