ಆಸ್ಪ್ರೇಲಿಯನ್ ಓಪನ್: ಇಬ್ಬರು ಆಟಗಾರರಿಗೆ ಕೊರೋನಾ
ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯಲ್ಲಿ ಪಾಲ್ಗೊಳ್ಳಬೇಕಿದ್ದ ಇಬ್ಬರು ಆಟಗಾರರಿಗೆ ಕೊರೋನಾ ಸೋಂಕು ತಗುಲಿರುವ ವಿಚಾರ ದೃಢಪಟ್ಟಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಮೆಲ್ಬರ್ನ್(ಜ.20): ಆಸ್ಪ್ರೇಲಿಯನ್ ಓಪನ್ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿ ಆರಂಭಕ್ಕೂ ಮುನ್ನವೇ ಕೊರೋನಾ ವಿಘ್ನ ಎದುರಾಗಿದೆ.
ಇಬ್ಬರು ಆಟಗಾರರು ಸೇರಿದಂತೆ 3ಕ್ಕೂ ಹೆಚ್ಚು ಕೊರೋನಾ ಸೋಂಕು ದೃಢವಾಗಿದೆ ಎಂದು ಆಯೋಜಕರು ಮಂಗಳವಾರ ತಿಳಿಸಿದ್ದಾರೆ. ಇಬ್ಬರು ವಿದೇಶಿ ಆಟಗಾರರು ಟೂರ್ನಿಯಲ್ಲಿ ಭಾಗವಹಿಸಲು ಮೆಲ್ಬರ್ನ್‌ಗೆ ಬಂದಿದ್ದರು.
ಆಸ್ಪ್ರೇಲಿಯನ್ ಓಪನ್: 72 ಟೆನಿಸಿಗರು ಕ್ವಾರಂಟೈನ್!
72 ಆಟಗಾರರಿಗೆ 14 ದಿನಗಳ ಕಾಲ ಕಠಿಣ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಸದ್ಯ 9 ಸಕ್ರಿಯ ಕೊರೋನಾ ಪ್ರಕರಣಗಳಿವೆ ಎನ್ನಲಾಗಿದೆ. ಟೂರ್ನಿ ಆರಂಭಕ್ಕೆ ಇನ್ನು 3 ವಾರಗಳಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ ಉಲ್ಬಣವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಇನ್ನು ರಷ್ಯಾ ಆಟಗಾರ್ತಿ ಯುಲಿಯಾ ಪುಟಿನ್ಸೇವಾ ಹೋಟೆಲ್ ರೂಂ ಒಳಗಿಂದಲೇ ನಮಗೆ ಉಸಿರಾಡಲು ಒಳ್ಳೆಯ ಗಾಳಿ ಬೇಕು ಎಂದು ಫೋಸ್ಟರ್ ಹಿಡಿದು ಪ್ರತಿಭಟನೆ ನಡೆಸಿರುವ ಘಟನೆಯೂ ನಡೆದಿದೆ. ರಷ್ಯಾ ಆಟಗಾರ್ತಿಯ ಈ ಪ್ರತಿಭಟನೆ ವ್ಯಾಪಕ ಟೀಕೆಗೆ ಗುರಿಯಾಗಿದೆ.