Asianet Suvarna News Asianet Suvarna News

Padma Shri ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾಗೆ ಪದ್ಮಶ್ರಿ ಪ್ರಶಸ್ತಿ ಪ್ರಧಾನ!

  • ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದ ರಾಷ್ಟ್ರಪತಿ
  • ಒಲಿಂಪಿಕ್ ಪದಕ ಗೆದ್ದ ನೀರಜ್ ಜೋಪ್ರಾಗೆ ಪದ್ಮಶ್ರೀ
  • ಜಾವಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದು ದಾಖಳೆ
     
Tokyo Olympic Gold medalist  Neeraj Chopra receive Padma Shri award from President Ram Nath Kovind delhi ckm
Author
Bengaluru, First Published Mar 28, 2022, 8:19 PM IST

ನವದೆಹಲಿ(ಮಾ.28): ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ರಚಿಸಿದ ಭಾರತದ ಜಾವಲಿನ್ ಪಟು ನೀರಜ್ ಚೋಪ್ರಾಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇಂದು ನಡೆದ ಸಮಾರಂಭದಲ್ಲಿ ನೀರಜ್ ಚೋಪ್ರಾಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪದ್ಮಶ್ರೀ ಪ್ರಶಸ್ತಿ ಪ್ರಧಾನ ಮಾಡಿದರು.

ಸ್ವತಂತ್ರ ಭಾರತದಲ್ಲಿ ಒಲಿಂಪಿಕ್ಸ್ ಪ್ರತಿನಿಧಿಸಿ ಅಥ್ಲಿಟಿಕ್ಸ್ ವಿಭಾಗದಲ್ಲಿ ಚಿನ್ನ ಗೆದ್ದ ಮೊದಲ ಕ್ರೀಡಾಪಟು ನೀರಜ್ ಚೋಪ್ರಾ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು ಐತಿಹಾಸಿಕ ಸಾಧನೆ ಮಾಡಿದ್ದರು. 7 ಪದಕ ಗೆಲ್ಲುವ ಮೂಲಕ ಗರಿಷ್ಠ ಪದಕ ಗೆದ್ದ ಸಾಧನೆ ಮಾಡಿದ್ದರು. ಇದೀಗ ರಾಮನಾಥ್ ಕೋವಿಂದ್ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

 

 

ನೀರಜ್ ಜೊತೆಗೆ ಬರಡು ಭೂಮಿಯಲ್ಲಿ ಸುರಂಗ ತೋಡಿ ನೀರು ಹರಿಸಿದ ಭಗೀರಥ, ಕನ್ನಡಪ್ರಭ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದರು. ಇನ್ನು ಗಾಯಕ, ಸಂಗೀತ ನಿರ್ದೇಶಕ ಸೋನೋ ನಿಗಮ್ ಸೇರಿದಂತೆ ಹಲವು ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಬಂಟ್ವಾಳ ತಾಲೂಕಿನ ಅಡ್ಯನಡ್ಕ ಸಮೀಪದ ಅಮೈ ನಿವಾಸಿಯಾಗಿರುವ ಮಹಾಲಿಂಗ ನಾಯ್ಕ ಅವರು ತನಗೆ 40 ವರ್ಷ ಹಿಂದೆ ದೊರೆತ ಜಮೀನಿನಲ್ಲಿ ಏಕಾಂಗಿಯಾಗಿ ಸುರಂಗಗಳನ್ನು ತೋಡಿ ನೀರಿನ ಚಿಲುಮೆ ಉಕ್ಕಿಸಿ ಬರಡು ಭೂಮಿಯಲ್ಲಿ ಕೃಷಿ ಮಾಡಿದವರು. ವಿದ್ಯುತ್‌ ರಹಿತವಾಗಿ ತೋಟಕ್ಕೆ ತುಂತುರು ನೀರಾವರಿ, ಸ್ಟ್ರಿಂಕ್ಲರ್‌ ವ್ಯವಸ್ಥೆ ಅಳವಡಿಸಿ ಅದರಲ್ಲೂ ಸೈ ಎನಿಸಿಕೊಂಡವರು. ಇವರ ಸಾಧನೆಗೆ ಪದ್ಮಶ್ರೀ ಪ್ರಶಸ್ತಿ ಅರಸಿಕೊಂಡು ಬಂದಿತ್ತು.

Padma Shri ಪ್ರಧಾನಿ, ರಾಷ್ಟ್ರಪತಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಪದ್ಮಶ್ರೀ ಸ್ವೀಕರಿಸಿದ 125 ವರ್ಷದ ಯೋಗ ಗುರು!

ನೀರಜ್‌ ಚೋಪ್ರಾಗೆ ವಿಶಿಷ್ಟಸೇವಾ ಪದಕ
ಜಪಾನ್‌ನಲ್ಲಿ ನಡೆದ ಒಲಿಂಪಿಕ್‌ ಕ್ರೀಡಾಕೂಟದಲ್ಲಿ ಭಾರತಕ್ಕೆ ಜಾವೆಲಿನ್‌ ವಿಭಾಗದಲ್ಲಿ ಚಿನ್ನದ ಪದಕ ತಂದುಕೊಟ್ಟಜಾವೆಲಿನ್‌ ಕ್ರೀಡಾಪಟು ನೀರಜ್‌ ಚೋಪ್ರಾ ಅವರಿಗೆ ಗಣರಾಜ್ಯೋತ್ಸವದ ದಿನದಂದು ಪರಮ ವಿಶಿಷ್ಟಸೇವಾ ಪದಕ ಪ್ರಕಟಿಸಲಾಗಿದೆ. ನೀರಜ್‌ ಚೋಪ್ರಾ, ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟಕ್ರೀಡಾಪಟು ಎಂಬ ಹಿರಿಮೆ ಕೂಡಾ ಹೊಂದಿದ್ದಾರೆ. ಜೂನಿಯರ್‌ ಕಮೀಷನ್‌್ಡ ಅಧಿಕಾರಿಯಾಗಿ ಸೇನೆ ಸೇರಿದ್ದ ನೀರಜ್‌, ಏಷ್ಯನ್‌ ಪದಕ ವಿಜೇತರಾದ ಬಳಿಕ 2016ರಲ್ಲಿ 4 ರಜಪುತಾನಾ ರೈಫಲ್ಸ್‌ನಲ್ಲಿ ನಯೀಬ್‌ ಸುಬೇದಾರ್‌ ಹುದ್ದೆಗೆ ಬಡ್ತಿ ಪಡೆದಿದ್ದರು.

Padma Awards: ದೇಶದ ಹೆಮ್ಮೆಯ ಕ್ರೀಡಾ ಸಾಧಕರಿಗೆ ಪದ್ಮ ಗೌರವ ಪ್ರದಾನ

ಗೂಗಲಲ್ಲಿ ಹೆಚ್ಚು ಹುಡುಕಾಟಕ್ಕೆ ಒಳಪಟ್ಟಭಾರತೀಯ ನೀರಜ್‌
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ 2021ರಲ್ಲಿ ಗೂಗಲ್‌ನಲ್ಲಿ ಅತಿ ಹೆಚ್ಚು ಹುಟುಕಲ್ಪಟ್ಟಭಾರತೀಯ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಗೂಗಲ್‌ ಬಿಡುಗಡೆ ಮಾಡಿದ ವರ್ಷಾಂತ್ಯದ ಪಟ್ಟಿಯಲ್ಲಿ ನೀರಜ್‌, ಕೆಲ ಬಾಲಿವುಡ್‌ ತಾರೆಗಳನ್ನು ಹಿಂದಿಕ್ಕಿ ಅಗ್ರಸ್ಥಾನ ಪಡೆದಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದ ಶಟ್ಲರ್‌ ಪಿ.ವಿ.ಸಿಂಧು, ಕುಸ್ತಿ ಪಟು ಭಜರಂಗ್‌ ಪೂನಿಯಾ, ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ಕುಸ್ತಿ ಪಟು ಸುಶೀಲ್‌ ಕುಮಾರ್‌ ಈ ಪಟ್ಟಿಯಲ್ಲಿ ಅಗ್ರ 10ರಲ್ಲಿ ಸ್ಥಾನ ಪಡೆದಿದ್ದಾರೆ.

Follow Us:
Download App:
  • android
  • ios