ಐತಿಹಾಸಿಕ Thomas Cup ಗೆಲುವು ಸಾಧಿಸಿದ ಭಾರತ ಬ್ಯಾಡ್ಮಿಂಟನ್ ತಂಡ!

14 ಬಾರಿಯ ಥಾಮಸ್ ಕಪ್ ಚಾಂಪಿಯನ್ ಇಂಡೋನೇಷ್ಯಾ ತಂಡವನ್ನು 3-0 ಅಂತರದಿಂದ ಮಣಿಸಿದ ಭಾರತ ತಂಡ ಮೊಟ್ಟಮೊದಲ ಬಾರಿಗೆ ಥಾಮಸ್ ಕಪ್ ಟೂರ್ನಿಯಲ್ಲಿ ಚಾಂಪಿಯನ್ ಎನಿಸಿಕೊಂಡಿದೆ. 1979ರಲ್ಲಿ ಭಾರತ ತಂಡ ಕಂಚಿನ ಪದಕ ಗೆದ್ದಿದ್ದೇ ಈವರೆಗೆ ಟೂರ್ನಿಯಲ್ಲಿ ಭಾರತದ ಶ್ರೇಷ್ಠ ಸಾಧನೆ ಎನಿಸಿತ್ತು.
 

Thomas Cup Mens Badminton  India win gold medal by beating 14 time champions Indonesia san

ಬ್ಯಾಂಕಾಕ್ (ಮೇ. 15): 2022ರ ಮೇ 15 ಭಾರತೀಯ ಬ್ಯಾಡ್ಮಿಂಟನ್ (Indian Badminton) ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನ. ಭಾರತೀಯ ಕ್ರಿಕೆಟ್ ತಂಡ (Indian cricket Team) 1983ರ ಏಕದಿನ ವಿಶ್ವಕಪ್ ಗೆದ್ದು ಯಾವ ರೀತಿ ವಿಶ್ವಕ್ಕೆ ಅಚ್ಚರಿ ನೀಡಿತ್ತೋ ಅದೇ ರೀತಿಯಲ್ಲಿ ಭಾರತ ಪುರುಷರ ಬ್ಯಾಡ್ಮಿಂಟನ್ ತಂಡ ( Indian Mens Badminton Team )ಇದೇ ಮೊಟ್ಟಮೊದಲ ಬಾರಿಗೆ ಐತಿಹಾಸಿಕ ಥಾಮಸ್ ಕಪ್ (Thomas Cup) ಟೂರ್ನಿಯಲ್ಲಿ ದ್ವಿಗ್ವಿಜಯ ಮೆರೆದಿದೆ.

ಭಾನುವಾರ ನಡೆದ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ತಂಡ 3-0 ಯಿಂದ 14 ಬಾರಿಯ ಚಾಂಪಿಯನ್ ಇಂಡೋನೇಷ್ಯಾ (Indonesia) ತಂಡವನ್ನು ಮಣಿಸಿತು. ಆ ಮೂಲಕ 73 ವರ್ಷಗಳ ಇತಿಹಾಸ ಹೊಂದಿರುವ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಟ್ರೋಫಿ ಜಯಿಸಿದ ಸಾಧನೆ ಮಾಡಿದೆ.

ಭಾರತ ತಂಡ ಗೆಲುವು ಸಾಧಿಸಿದ ಬೆನ್ನಲ್ಲಿಯೇ ಏಷ್ಯಾನೆಟ್ ನ್ಯೂಸ್ ಜೊತೆ ಮಾತನಾಡಿರುವ ರಾಷ್ಟ್ರೀಯ ಕೋಚ್ ಹಾಗೂ ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ ಉಪಾಧ್ಯಕ್ಷ ಪುಲ್ಲೇಲ ಗೋಪಿಚಂದ್ (Pullela Gopichand ), " ಇದು ನಿಜವಾಗಿಯೂ ದೊಡ್ಡ ಸಾಧನೆ. ಮಂತ್ರಮುಗ್ಧಗೊಳಿಸುವಂಥ ಸಾಧನೆ. ಇದು 1983 ರಲ್ಲಿ ಭಾರತ ಕ್ರಿಕೆಟ್ ವಿಶ್ವಕಪ್ ಗೆದ್ದಂತೆ ಅಥವಾ ಅದಕ್ಕಿಂತ ದೊಡ್ಡದಾಗಿದೆ. ಇಂಡೋನೇಷ್ಯಾ ಬ್ಯಾಡ್ಮಿಂಟನ್ ಮತ್ತು ಥಾಮಸ್ ಕಪ್‌ನಲ್ಲಿ ದೊಡ್ಡ ಖ್ಯಾತಿ ಮತ್ತು ಪರಂಪರೆಯನ್ನು ಹೊಂದಿದೆ ಮತ್ತು ಈ ತಂಡವನ್ನು ಸೋಲಿಸಲು ನಾವು ವಿಶ್ವ ಹಂತಕ್ಕೆ ಬಂದಿದ್ದೇವೆ ಎಂದು ತೋರಿಸುತ್ತದೆ. ಇಲ್ಲಿಯವರೆಗೆ, ನಾವು ಸೈನಾ ಮತ್ತು ಸಿಂಧು ಪ್ರಾಬಲ್ಯದೊಂದಿಗೆ ಮಹಿಳಾ ಶಕ್ತಿ ಎಂದು ಕರೆಯಲ್ಪಟ್ಟಿದ್ದೇವೆ, ಆದರೆ ಈಗ ನಮ್ಮ ಹುಡುಗರು ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ' ಎಂದು ಹೇಳಿದ್ದಾರೆ. ಹೆಚ್ಚಿನ ಪೋಷಕರು ತಮ್ಮ ಮಕ್ಕಳನ್ನು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸುವುದನ್ನು ಪ್ರೇರಣೆ ನೀಡುತ್ತದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.


ಮುಂದಿನ ದಿನಗಳಲ್ಲಿ ತಮ್ಮ ಮಕ್ಕಳು ಬ್ಯಾಡ್ಮಿಂಟನ್ ಕ್ರೀಡೆಯನ್ನು ಆಡಲು ಇದು ಪ್ರೋತ್ಸಾಹ ನೀಡುತ್ತದೆ ಎಂದು ನಾನು ಭಾವಿಸುತ್ತೇನೆ. ದೇಶದ ವಿವಿಧ ಕಡೆ ಪ್ರಯಾಣಿಸುವಾಗ ಕೂಡ ನಾನು ಇದನ್ನು ಗಮನಿಸಿದ್ದೇವೆ. ಈಗಾಗಲೇ ಸಾಕಷ್ಟು ಅಕಾಡೆಮಿಗಳು ಮಕ್ಕಳನ್ನು ತರಬೇತಿ ನೀಡುತ್ತಿವೆ. ಇದು ಪರ್ಫೆಕ್ಟ್ ಅಲ್ಲದೇ ಇದ್ದರೂ, ಒಂದು ವ್ಯವಸ್ಥೆಯನ್ನು ಹುಟ್ಟುಹಾಕುವಲ್ಲಿ ಯಶಸ್ವಿಯಾಗಿದ್ದೇವೆ. ದೇಶದಲ್ಲಿ ಬ್ಯಾಡ್ಮಿಂಟನ್ ಕ್ರೀಡೆಯನ್ನು ಇನ್ನಷ್ಟು ಪ್ರಖ್ಯಾತಿಗೊಳಿಸಲು ಶ್ರಮಿಸುತ್ತೇವೆ. ಬ್ಯಾಡ್ಮಿಂಟನ್ ಸಂಸ್ಥೆ ಹಾಗೂ ಪ್ರಧಾನಿ ಮೋದಿ ಅವರ ಬೆಂಬಲಕ್ಕಾಗಿ ನಾನು ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.

ಥಾಮಸ್ ಕಪ್ ಫೈನಲ್‌ನ ಮೊದಲ ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಲಕ್ಷ್ಯ ಸೇನ್ (Lakshya Sen) ಅವರು ಇಂಡೋನೇಷ್ಯಾದ ಆಂಥೋನಿ ಸಿನಿಸುಕಾ ಗಿಂಟಿಂಗ್ (Anthony Sinisuka Ginting ) ಅವರನ್ನು 8-21, 21-17, 21-16 ರಿಂದ ಸೋಲಿಸಿ ಭಾರತಕ್ಕೆ 1-0 ಮುನ್ನಡೆ ನೀಡಿದರು. ಅದಾದ ಬಳಿಕ ನಡೆದ ಮೊದಲ ಡಬಲ್ಸ್ ಪಂದ್ಯದಲ್ಲಿ ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ (Satwiksairaj Rankireddy ) ಮತ್ತು ಚಿರಾಗ್ ಶೆಟ್ಟಿ (Chirag Shetty) ಅವರು ಮೊಹಮ್ಮದ್ ಅಹ್ಸಾನ್ (Mohammad Ahsan) ಮತ್ತು ಕೆವಿನ್ ಸಂಜಯ ಸುಕಮುಲ್ಜೊ (Kevin Sanjaya Sukamuljo)ಅವರನ್ನು 18-21, 23-21, 21-19 ರಿಂದ ಸೋಲಿಸಿ ಭಾರತಕ್ಕೆ 2-0 ಮುನ್ನಡೆ ನೀಡಿದರು.

ಐತಿಹಾಸಿಕ ಸಾಧನೆ ಮಾಡಿದ ಭಾರತ ಬ್ಯಾಡ್ಮಿಂಟನ್ ತಂಡ, ಥಾಮಸ್ ಕಪ್ ಫೈನಲ್ ಗೆ ಲಗ್ಗೆ!

ಇದರಿಂದಾಗಿ ಭಾರತ ತಂಡ ಕೊನೆ ಮೂರು ಪಂದ್ಯಗಳ ಪೈಕಿ ಯಾವುದಾದರೂ ಒಂದನ್ನು ಗೆದ್ದಲ್ಲಿ ಚಾಂಪಿಯನ್ ಆಗುವ ಸುವರ್ಣ ಅವಕಾಶವನ್ನು ಹೊಂದಿತ್ತು. ಆದರೆ, ಕಿಡಂಬಿ ಶ್ರೀಕಾಂತ್ (Kidambi Srikanth) ಎರಡನೇ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಜೊನಾಟನ್ ಕ್ರಿಸ್ಟಿ (Jonatan Christie) ಅವರನ್ನು 21-19, 23-21 ನೇರ ಸೆಟ್‌ಗಳಿಂದ ಸೋಲಿಸಿ ಭಾರತಕ್ಕೆ 3-0 ಮುನ್ನಡೆ ತಂದು ಟ್ರೋಫಿ ಎತ್ತಿ ಹಿಡಿದರು.

ಥಾಮಸ್‌ ಕಪ್‌: ಐತಿಹಾಸಿಕ ಚಿನ್ನದ ನಿರೀಕ್ಷೆಯಲ್ಲಿ ಭಾರತ

ಪ್ರಧಾನಿ ಮೋದಿ ಅಭಿನಂದನೆ: ಸಾಧನೆ ಮೆರೆದ ಭಾರತ ಪುರುಷರ ಬ್ಯಾಡ್ಮಿಂಟನ್ ತಂಡವನ್ನು ಪ್ರಧಾನಿ ಮೋದಿ (Prime Minister Narendra Modi) ಟ್ವೀಟ್ ಮಾಡುವ ಮೂಲಕ ಅಭಿನಂದಿಸಿದ್ದಾರೆ. "ಭಾರತ ಬ್ಯಾಡ್ಮಿಂಟನ್ ತಂಡ ಇತಿಹಾಸ ಬರೆದಿದೆ! ಥಾಮಸ್ ಕಪ್ ಗೆದ್ದ ಭಾರತ ತಂಡದೊಂದಿಗೆ ಇಡೀ ದೇಶವೇ ಸಂಭ್ರಮಿಸಿದೆ! ನಮ್ಮ ನಿಪುಣ ತಂಡಕ್ಕೆ ಅಭಿನಂದನೆಗಳು ಮತ್ತು ಅವರ ಮುಂದಿನ ಪ್ರಯತ್ನಗಳಿಗಾಗಿ ಅವರಿಗೆ ಶುಭಾಶಯಗಳು. ಈ ಗೆಲುವು ಮುಂಬರುವ ಹಲವು ಕ್ರೀಡಾ ಪಟುಗಳಿಗೆ ಪ್ರೇರಣೆ ನೀಡಲಿದೆ' ಎಂದು ಬರೆದಿದ್ದಾರೆ.

ಒಂದು ಕೋಟಿ ರೂಪಾಯಿ ಬಹುಮಾನ: ಐತಿಹಾಸಿಕ ಸಾಧನೆ ಮಾಡಿದ ಭಾರತ ಬ್ಯಾಡ್ಮಿಂಟನ್ ತಂಡಕ್ಕೆ 1 ಕೋಟಿ ರೂಪಾಯಿ ನೀಡಲಾಗುವುದು ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್  (Anurag Thakur) ಹೇಳಿದ್ದಾರೆ. ಇದೊಂದು ಐತಿಹಾಸಿಕ ಸಾಧನೆ ಎಂದು ಹೇಳಿದ್ದಾರೆ.

Latest Videos
Follow Us:
Download App:
  • android
  • ios