Asianet Suvarna News Asianet Suvarna News

ಫ್ರೆಂಚ್‌ ಓಪನ್‌: ಜೋಕೋವಿಚ್ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ

* ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್ ಪ್ರವೇಶಿಸಿದ ನಡಾಲ್, ಜೋಕೋ

* ಸೆಮಿಫೈನಲ್‌ನಲ್ಲಿ ನಡಾಲ್‌-ಜೋಕೋ ಮುಖಾಮುಖಿ?

* ಫ್ರೆಂಚ್ ಓಪನ್‌ ಟೆನಿಸ್ ಟೂರ್ನಿಯಲ್ಲಿ ಭಾರತದ ಹೋರಾಟ ಅಂತ್ಯ

Tennis Legends Novak Djokovic Rafael Nadal close in on French Open Semifinal clash kvn
Author
Paris, First Published Jun 9, 2021, 9:36 AM IST

ಪ್ಯಾರಿಸ್‌(ಜೂ.09): ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ನೊವಾಕ್ ಜೋಕೋವಿಚ್‌ ಹಾಗೂ ರಾಫೆಲ್‌ ನಡಾಲ್‌ ನಡುವಿನ ಕಾದಾಟಕ್ಕೆ ಕಾಲ ಸನ್ನಿಹಿತವಾದಂತಿದೆ. ಈಗಾಗಲೇ ಈ ಇಬ್ಬರು ಆಟಗಾರರು ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.
 
ಹೌದು, ಒಂದು ಕಡೆ ಫ್ರೆಂಚ್‌ ಓಪನ್‌ ಗ್ರ್ಯಾನ್‌ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಸ್ಪೇನ್‌ನ ರಾಫೆಲ್‌ ನಡಾಲ್ ದಾಖಲೆಯ 15ನೇ ಬಾರಿಗೆ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಇದೇ ವೇಳೆ 4ನೇ ಸುತ್ತಿನ ಪಂದ್ಯದಲ್ಲಿ ಇಟಲಿಯ ಲೊರೆನ್ಜೊ ಮುಸೆಟ್ಟಿ ವಿರುದ್ಧ 2 ಸೆಟ್‌ ಹಿನ್ನಡೆ ಅನುಭವಿಸಿದರೂ, ನೋವಾಕ್‌ ಜೋಕೋವಿಚ್‌ ಗೆಲುವು ಸಾಧಿಸಿ ಅಂತಿಮ 8ರ ಸುತ್ತಿಗೆ ಪ್ರವೇಶ ಪಡೆದರು. 

ಫ್ರೆಂಚ್ ಓಪನ್‌ ಟೆನಿಸ್ 2021: 15ನೇ ಬಾರಿಗೆ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟ ನಡಾಲ್

ವಿಶ್ವ ನಂ.1 ಶ್ರೇಯಾಂಕಿತ ಹಾಗೂ 2016ರ ಫ್ರೆಂಚ್ ಓಪನ್‌ ಚಾಂಪಿಯನ್‌ ನೊವಾಕ್ ಜೋಕೋವಿಚ್, ಇದೀಗ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಇಟಲಿಯ ಬೆರೆಟ್ಟಿಯನ್ನು ಎದುರಿಸಲಿದ್ದಾರೆ. ಇನ್ನೊಂದೆಡೆ ಕಿಂಗ್ ಆಫ್‌ ಕ್ಲೇ ಕೋರ್ಟ್ ಖ್ಯಾತಿಯ ನಡಾಲ್ ತಮ್ಮ ಕ್ವಾರ್ಟರ್‌ ಫೈನಲ್ ಹಣಾಹಣಿಯಲ್ಲಿ ಅರ್ಜಿಂಟೀನಾದ ಡಿಯಾಗೊ ಸ್ಕ್ವಾರ್ಜ್‌ಮನ್‌ರನ್ನು ಎದುರಿಸಲಿದ್ದಾರೆ.

ಇನ್ನು ಮಹಿಳಾ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ಗೆ ಹಾಲಿ ಚಾಂಪಿಯನ್‌ ಪೋಲೆಂಡ್‌ನ ಇಗಾ ಸ್ವಿಯಾಟೆಕ್‌ ಕೂಡ ಲಗ್ಗೆಯಿಟ್ಟಿದ್ದಾರೆ. ಪುರುಷರ ಡಬಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ರೋಹನ್‌ ಬೋಪಣ್ಣ ಜೋಡಿ ಸೋಲುಂಡಿದ್ದು, ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ.

Follow Us:
Download App:
  • android
  • ios