ನವದೆಹಲಿ(ನ.05): ಎಟಿಪಿ ವಿಶ್ವ ಟೆನಿಸ್‌ ರ‍್ಯಾಂಕಿಂಗ್‌ನಲ್ಲಿ ಸ್ಪೇನ್‌ ತಾರೆ ರಾಫೆಲ್‌ ನಡಾಲ್‌ ಅಗ್ರಸ್ಥಾನಕ್ಕೆ ಮರಳಿದ್ದಾರೆ. ಕಳೆದೊಂದು ವರ್ಷದಿಂದ 2ನೇ ಸ್ಥಾನದಲ್ಲಿದ್ದ ನಡಾಲ್‌, ಸರ್ಬಿ​ಯಾದ ನೋವಾಕ್‌ ಜೋಕೋ​ವಿಚ್‌ರನ್ನು ಹಿಂದಿಕ್ಕಿ 8ನೇ ಬಾರಿಗೆ ಅಗ್ರಸ್ಥಾನ ಅಲಂಕರಿಸಿದ್ದಾರೆ.

ಬಹು​ಕಾ​ಲದ ಪ್ರೇಯಸಿಯೊಂದಿಗೆ ನಡಾಲ್‌ ವಿವಾ​ಹ

ವರ್ಷಾಂತ್ಯದ ರ‍್ಯಾಂಕಿಂಗ್‌ ಪಟ್ಟಿ​ಯಲ್ಲಿ ಜೋಕೋ​ವಿಚ್‌ ಅಗ್ರ​ಸ್ಥಾ​ನ​ಕ್ಕೇ​ರುವ ಸಾಧ್ಯತೆ ದಟ್ಟ​ವಾ​ಗಿದೆ. ಗಾಯದ ಸಮಸ್ಯೆಯಿಂದಾಗಿ ಪ್ಯಾರಿಸ್‌ ಮಾಸ್ಟ​ರ್ಸ್ ಸೆಮೀಸ್‌ನಿಂದ ಹೊರ​ಬಿ​ದ್ದಿದ್ದ ನಡಾಲ್‌, ಮುಂಬ​ರುವ ಎಟಿಪಿ ಫೈನಲ್ಸ್‌ನಲ್ಲಿ ಆಡು​ವುದು ಅನು​ಮಾ​ನ​ವಾ​ಗಿದೆ.

US ಓಪನ್ 2019 ಚಾಂಪಿಯನ್ ಆಗಿ ಹೊರಹೊಮ್ಮಿದ ರಾಫೆಲ್ ನಡಾಲ್

ನಡಾಲ್‌ ಹಾಗೂ ಜೋಕೋ​ವಿಚ್‌ ನಡುವೆ 600 ಅಂಕ​ಗಳ ವ್ಯತ್ಯಾಸವಿದ್ದು, ಒಂದೊಮ್ಮೆ ಜೋಕೋ​ವಿಚ್‌ ಲಂಡನ್‌ನಲ್ಲಿ ನಡೆ​ಯ​ಲಿ​ರುವ ಎಟಿಪಿ ಫೈನಲ್ಸ್‌ನಲ್ಲಿ ಗೆದ್ದರೆ 1500 ಅಂಕಗಳನ್ನು ಗಳಿ​ಸ​ಲಿ​ದ್ದಾರೆ.