ವಿಶ್ವ ನಂ.1 ಟೆನಿಸಿಗನಾಗಿ 2019ಕ್ಕೆ ನಡಾಲ್ ಗುಡ್‌ಬೈ!
ಸ್ಪೇನ್ ಎಡಗೈ ಟೆನಿಸಿಗ ರಾಫೆಲ್ ನಡಾಲ್ 5ನೇ ಬಾರಿಗೆ ಋುತುವನ್ನು ನಂ.1 ಟೆನಿಸಿಗನಾಗಿ ಅಭಿಯಾನ ಮುಗಿಸಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ
ಪ್ಯಾರಿಸ್[ನ]: ಸ್ಪೇನ್‌ನ ದಿಗ್ಗಜ ಟೆನಿಸಿಗ ರಾಫೆಲ್ ನಡಾಲ್, ವಿಶ್ವ ನಂ.1 ಟೆನಿಸಿಗನಾಗಿ 2019ರ ಋುತುವನ್ನು ಮುಕ್ತಾಗೊಳಿಸಿದ್ದಾರೆ. ಸೋಮವಾರ ಟೆನಿಸ್ ಆಟಗಾರರ ಸಂಸ್ಥೆ (ಎಟಿಪಿ) ವರ್ಷಾಂತ್ಯದ ರ‍್ಯಾಂಕಿಂಗ್ ಪಟ್ಟಿ ಬಿಡುಗಡೆಗೊಳಿಸಿತು.
ಬಹುಕಾಲದ ಪ್ರೇಯಸಿಯೊಂದಿಗೆ ನಡಾಲ್ ವಿವಾಹ
ತಮ್ಮ ವೃತ್ತಿಬದುಕಿನಲ್ಲಿ ನಡಾಲ್ 5ನೇ ಬಾರಿಗೆ ವರ್ಷಾಂತ್ಯದಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಸಾಧನೆ ಮಾಡಿದರು. ನಡಾಲ್ 9985 ಅಂಕಗಳನ್ನು ಹೊಂದಿದ್ದು, 2ನೇ ಸ್ಥಾನ ಪಡೆದ ನೋವಾಕ್ ಜೋಕೋವಿಚ್ಗಿಂತ 840 ಅಂಕ ಮುಂದಿದ್ದಾರೆ. ರೋಜರ್ ಫೆಡರರ್ ಸತತ 2ನೇ ವರ್ಷ 3ನೇ ಸ್ಥಾನ ಗಳಿಸಿದ್ದಾರೆ.
ಟೆನಿಸ್ ವಿಶ್ವ ರ‍್ಯಾಂಕಿಂಗ್: ಅಗ್ರಸ್ಥಾನಕ್ಕೇರಿದ ನಡಾಲ್
ನವೆಂಬರ್ ತಿಂಗಳಾರಂಭದಲ್ಲಿ ಸರ್ಬಿಯಾದ ಜೋಕೋವಿಚ್’ರನ್ನು ಹಿಂದಿಕ್ಕಿ ನಡಾಲ್ ಅಗ್ರಸ್ಥಾನಕ್ಕೇರಿದ್ದರು. ಕಳೆದ ತಿಂಗಳಷ್ಟೇ ನಡಾಲ್ ತಮ್ಮ ಬಹುಕಾಲದ ಗೆಳತಿ ಮರಿಯಾ ಫ್ರಾನ್ಸಿಸ್ಕಾ ಪೆರೆಲ್ಲೋ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದನ್ನು ಸ್ಮರಿಸಬಹುದಾಗಿದೆ.