Asianet Suvarna News Asianet Suvarna News

Australian Open 2022‌: ಸೆರೆನಾ ವಿಲಿಯಮ್ಸ್‌ ಔಟ್‌, ಅಚ್ಚರಿಯೆನ್ನುವಂತೆ ಜೋಕೋವಿಚ್‌ ಇನ್‌..!

* ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಿಂದ ಹೊರಬಿದ್ದ ಸೆರೆನಾ ವಿಲಿಯಮ್ಸ್

* ಅಚ್ಚರಿ ಎನ್ನುವಂತೆ ವಿಶ್ವದ ನಂ.1 ಟೆನಿಸಿಗ ನೊವಾಕ್ ಜೋಕೋವಿಚ್‌ಗೆ ಟೂರ್ನಿಯಲ್ಲಿ ಅವಕಾಶ 

* ಹೀಗಿದ್ದೂ ಜೋಕೋವಿಚ್‌ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಪಾಲ್ಗೊಳ್ಳುವುದು ಅನುಮಾನ

Tennis Legend Novak Djokovic on Australian Open entry list but Serena Williams will miss tournament kvn
Author
Bengaluru, First Published Dec 9, 2021, 8:49 AM IST

ಮೆಲ್ಬರ್ನ್‌(ಡಿ.09): 2022ರ ಜನವರಿಯಲ್ಲಿ ನಡೆಯಲಿರುವ ಆಸ್ಪ್ರೇಲಿಯನ್‌ ಓಪನ್‌ ಟೆನಿಸ್‌ (Australian Open Tennis Tournament) ಗ್ರ್ಯಾನ್‌ ಸ್ಲಾಂನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಅಮೆರಿಕದ ದಿಗ್ಗಜ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ (Serena Williamson) ಖಚಿತಪಡಿಸಿದ್ದಾರೆ. 2021ರ ವಿಂಬಲ್ಡನ್‌ ವೇಳೆ ಸ್ನಾಯು ಸೆಳತಕ್ಕೆ ಒಳಗಾಗಿದ್ದ ಸೆರೆನಾ, ಇನ್ನೂ ಸಂಪೂರ್ಣ ಚೇತರಿಕೆ ಕಂಡಿಲ್ಲ. 23 ಗ್ರ್ಯಾನ್‌ ಸ್ಲಾಂಗಳ ಒಡತಿ ಸೆರೆನಾ 2017ರ ಬಳಿಕ ಒಂದೂ ಗ್ರ್ಯಾನ್‌ ಸ್ಲಾಂ ಗೆದ್ದಿಲ್ಲ. 

ಇನ್ನು ಆಸ್ಟ್ರೇಲಿಯನ್ ಓಪನ್‌ ಟೂರ್ನಿಯಲ್ಲಿ ಕಣಕ್ಕಿಳಿಯಲಿರುವ ಆಟಗಾರರ ಪಟ್ಟಿಯಲ್ಲಿ ವಿಶ್ವ ನಂ.1 ನೋವಾಕ್‌ ಜೋಕೋವಿಚ್‌ (Novak Djokovic) ಹೆಸರಿದೆ. ಕೋವಿಡ್‌ ಲಸಿಕೆ (COVID Vaccination) ಪಡೆದ ಪ್ರಮಾಣಪತ್ರವನ್ನು ನೀಡುವ ವಿಚಾರದಲ್ಲಿ ಜೋಕೋವಿಚ್‌ ಹಾಗೂ ಆಸ್ಪ್ರೇಲಿಯನ್‌ ಓಪನ್‌ ಆಯೋಜಕರ ನಡುವೆ ತಿಕ್ಕಾಟ ಏರ್ಪಟ್ಟಿತ್ತು. ಹೀಗಾಗಿ 9 ಬಾರಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್‌ ನೊವಾಕ್ ಜೋಕೋವಿಚ್ ಆಡುವುದು ಅನುಮಾನವೆನಿಸಿತ್ತು. ಟೂರ್ನಿಯಲ್ಲಿ ನಡಾಲ್‌ ಆಡುವುದು ಖಚಿತವಾಗಿದ್ದು, ಫೆಡರರ್ ಗೈರಾಗಲಿದ್ದಾರೆ.

ರೋಜರ್ ಫೆಡರರ್ (Roger Federer), ರಾಫೆಲ್ ನಡಾಲ್ (Rafael Nadal) ಜತೆ 20 ಗ್ರ್ಯಾನ್‌ ಸ್ಲಾಂ ಪ್ರಶಸ್ತಿ ಗೆದ್ದು ಜಂಟಿ ಅಗ್ರಸ್ಥಾನ ಹೊಂದಿರುವ ವಿಶ್ವದ ನಂ.1 ಶ್ರೇಯಾಂಕಿತ ಟೆನಿಸ್ ಆಟಗಾರ ಸರ್ಬಿಯಾದ ನೊವಾಕ್ ಜೋಕೋವಿಚ್ ತಾವು ಕೋವಿಡ್ ಲಸಿಕೆ ಪಡೆದಿರುವ ಕುರಿತಂತೆ ಇದುವರೆಗೂ ಯಾವುದೇ ಮಾಹಿತಿಯನ್ನು ನೀಡಿಲ್ಲ. ಒಂದು ವೇಳೆ ಲಸಿಕೆ ಪ್ರಮಾಣ ಪತ್ರ ನೀಡುವುದನ್ನು ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿ ಆಯೋಜಕರು ಕಡ್ಡಾಯಗೊಳಿಸಿದರೆ ಅವರು ಟೂರ್ನಿಯಿಂದಲೇ ಹಿಂದೆ ಸರಿಯಬಹುದು ಎಂದು ಜೋಕೋವಿಚ್ ತಂದೆ ಮಾಧ್ಯಮದವರಿಗೆ ತಿಳಿಸಿದ್ದಾರೆ.

Novak Djokovic ATP No.1 Ranking: ಸತತ 350 ವಾರ ಪೂರೈಸಿದ ಟೆನಿಸ್ ದಿಗ್ಗಜ

ಇನ್ನುಳಿದಂತೆ  ಕಿಂಗ್ ಆಫ್‌ ಕ್ಲೇ ಕೋರ್ಟ್ ಖ್ಯಾತಿಯ ರಾಫೆಲ್ ನಡಾಲ್‌ ಕಳೆದ ಆಗಸ್ಟ್‌ ತಿಂಗಳ ನಂತರ ಮೊದಲ ಬಾರಿಗೆ ಟೆನಿಸ್ ಅಂಗಳಕ್ಕೆ ಮರಳುತ್ತಿದ್ದಾರೆ. ಇನ್ನು ಇನ್ನು ಕಳೆದ ಆಸ್ಟ್ರೇಲಿಯನ್ ಓಪನ್‌ ಫೈನಲಿಸ್ಟ್‌ ಡೊಮಿನಿಕ್ ಥಿಮ್‌ ಗಾಯಗೊಂಡ ಬಳಿಕ ಮೊದಲ ಬಾರಿಗೆ ಸ್ಪರ್ಧಾತ್ಮಕ ಟೆನಿಸ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಕೋವಿಡ್ ಭೀತಿಯ (COVID 19 Threat) ನಡುವೆಯೇ ವರ್ಷದ ಮೊದಲ ಗ್ರ್ಯಾನ್ ಸ್ಲಾಂ ಟೂರ್ನಿಯಾದ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯು 2022ರ ಜನವರಿ 17ರಿಂದ ಜನವರಿ 30ರವರೆಗೆ ಮೆಲ್ಬೊರ್ನ್‌ನಲ್ಲಿ ನಡೆಯಲಿದೆ.

ಅಭ್ಯಾಸಕ್ಕಾಗಿ ಅಮೆರಿಕಕ್ಕೆ ತೆರಳಿದ ನೀರಜ್‌ ಚೋಪ್ರಾ

ಚುಲಾ ವಿಸ್ತಾ(ಅಮೆರಿಕಾ): ಟೋಕಿಯೋ ಒಲಿಂಪಿಕ್ಸ್‌ (Tokyo Olympics) ಚಿನ್ನದ ಪದಕ ವಿಜೇತ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ (Neeraj Chopra) ಅಭ್ಯಾಸಕ್ಕಾಗಿ ಅಮೆರಿಕಕ್ಕೆ ತೆರಳಿದ್ದಾರೆ. ನೀರಜ್‌ ಅವರು ತಮ್ಮ ಕೋಚ್‌ ಕ್ಲೌಸ್‌ ಬಾರ್ಟೊನೀಜ್‌ ಜೊತೆ ಚುಲಾ ವಿಸ್ತಾದ ಎಲೈಟ್‌ ಅಥ್ಲೆಟಿಕ್‌ ತರಬೇತಿ ಕೇಂದ್ರಕ್ಕೆ ತೆರಳಿದ್ದು, ವಿಶ್ವ ದರ್ಜೆಯ ಸೌಕರ್ಯವಿರುವ ಅಲ್ಲಿ ಸುಮಾರು 90 ದಿನಗಳ ಕಾಲ ಅಭ್ಯಾಸ ನಡೆಸಲಿದ್ದಾರೆ. 

ನೀರಜ್‌ರ ಅಭ್ಯಾಸಕ್ಕೆ ಟಾರ್ಗೆಟ್‌ ಒಲಿಂಪಿಕ್‌ ಪೋಡಿಯಂ ಯೋಜನೆ(ಟಾಫ್ಸ್‌) (Target Olympic Podium) ಅಡಿಯಲ್ಲಿ ಕೇಂದ್ರ ಸರ್ಕಾರ 38 ಲಕ್ಷ ರುಪಾಯಿ ಅನುದಾನ ಬಿಡುಗಡೆ ಮಾಡಿದೆ. 90 ದಿನಗಳ ಶಿಬಿರವು ಮಾರ್ಚ್‌ 04, 2021ರಂದು ಕೊನೆಯಾಗಲಿದೆ. ಈ ತರಬೇತಿ ಶಿಬಿರವು ಮುಂಬರುವ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌, ಬರ್ಮಿಂಗ್‌ಹ್ಯಾಮ್‌ನ ಕಾಮನ್‌ವೆಲ್ತ್‌ ಗೇಮ್ಸ್‌ ಹಾಗೂ ಚೀನಾದಲ್ಲಿ ನಡೆಯಲಿರುವ ಏಷ್ಯನ್‌ ಗೇಮ್ಸ್‌ನಲ್ಲಿ ಪದಕ ಗೆಲ್ಲಲು ಅನುಕೂಲವಾಗುವ ಸಾಧ್ಯತೆಯಿದೆ.

ಈ ಕುರಿತಂತೆ ಟ್ವೀಟ್‌ ಮಾಡಿರುವ ನೀರಜ್ ಚೋಪ್ರಾ, ಭೂತಕಾಲಕ್ಕೆ ಪೂರ್ಣವಿರಾಮವನ್ನಿಟ್ಟು, ಭವಿಷ್ಯದತ್ತ ಗಮನ ಹರಿಸುವ ಸಮಯ ಬಂದಿದೆ. ಇನ್ನಷ್ಟು ಉತ್ತಮ ಪ್ರದರ್ಶನ ತೋರುವ ಉದ್ದೇಶದಿಂದ ನನ್ನ ತರಬೇತಿ ಆರಂಭವಾಗಿದೆ. ಭಾರತದಾಚೆ ತರಬೇತಿ ಪಡೆಯಲು ಅವಕಾಶವನ್ನಿತ್ತ ಸಾಯ್ ಹಾಗೂ ಅಥ್ಲೆಟಿಕ್ಸ್‌ ಫೆಡರೇಷನ್ ಆಫ್‌ ಇಂಡಿಯಾಗೆ ಧನ್ಯವಾದಗಳು ಎಂದು ನೀರಜ್ ಟ್ವೀಟ್ ಮಾಡಿದ್ದಾರೆ.

Follow Us:
Download App:
  • android
  • ios