Novak Djokovic ATP No.1 Ranking: ಸತತ 350 ವಾರ ಪೂರೈಸಿದ ಟೆನಿಸ್ ದಿಗ್ಗಜ

* ಸತತ 350 ವಾರಗಳ ಎಟಿಪಿ ಶ್ರೇಯಾಂಕದಲ್ಲಿ ನಂ.1 ಸ್ಥಾನ ಕಾಯ್ದುಕೊಂಡ ನೊವಾಕ್ ಜೋಕೋವಿಚ್

*  ಜರ್ಮನಿಯ ದಿಗ್ಗಜ ಆಟಗಾರ್ತಿ ಸ್ಟೆಫಿ ಗ್ರಾಫ್‌ 377 ವಾರಗಳ ಕಾಲ ನಂಬರ್ 1 ಸ್ಥಾನದಲ್ಲಿದ್ದರು

* ಇದೀಗ ಜೋಕೋ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಪಾಲ್ಗೊಳ್ಳುವುದು ಅನುಮಾನ

Tennis Legend Novak Djokovic celebrates 350 weeks at No 1 spot in ATP Rankings kvn

ಬೆಲ್‌ಗ್ರೇಡ್(ಡಿ.08)‌: ಸರ್ಬಿಯಾದ ಟೆನಿಸ್‌ ಆಟಗಾರ ನೋವಾಕ್‌ ಜೋಕೋವಿಚ್‌ (Novak Djokovic) ಎಟಿಪಿ ಟೆನಿಸ್‌ ವಿಶ್ವ ರ‍್ಯಾಂಕಿಂಗ್‌ನ (ATP World Rankings) ನಂ.1 ಸ್ಥಾನದಲ್ಲಿ 350 ವಾರ ಪೂರೈಸಿದ್ದಾರೆ. ಜೋಕೋವಿಚ್‌ 2011ರಲ್ಲಿ ಮೊದಲ ಬಾರಿಗೆ ನಂ.1 ಸ್ಥಾನಕ್ಕೇರಿದ್ದರು. ಹಾಲಿ ನಂ.1 ಸ್ಥಾನದ ಅವಧಿ 2020ರ ಫೆಬ್ರವರಿಯಲ್ಲಿ ಆರಂಭಗೊಂಡಿತ್ತು. ಅಲ್ಲಿಂದ ಈ ವರೆಗೂ ನಂ.1 ಸ್ಥಾನ ಉಳಿಸಿಕೊಂಡಿದ್ದಾರೆ. 

ಜರ್ಮನಿಯ ದಿಗ್ಗಜ ಆಟಗಾರ್ತಿ ಸ್ಟೆಫಿ ಗ್ರಾಫ್‌ (Steffi Graf) 377 ವಾರಗಳ ಕಾಲ ವಿಶ್ವ ನಂ.1 ಸ್ಥಾನದಲ್ಲಿದ್ದರು. ಇದು ಟೆನಿಸ್‌ನಲ್ಲಿ ವಿಶ್ವ ದಾಖಲೆ ಎನಿಸಿದೆ. ನೊವಾಕ್‌ ಜೋಕೋವಿಚ್‌ ಮುಂದಿನ ವರ್ಷ ಸ್ಟೆಫಿ ಅವರ ದಾಖಲೆ ಮುರಿಯುವ ನಿರೀಕ್ಷೆಯಲ್ಲಿದ್ದಾರೆ. 20 ಗ್ರ್ಯಾನ್‌ ಸ್ಲಾಂ (Tennis Grand Slam) ಗೆದ್ದಿರುವ ಜೋಕೋವಿಚ್‌, ಕಳೆದ ಮಾರ್ಚ್‌ನಲ್ಲಿ ರೋಜರ್‌ ಫೆಡರರ್‌ರ (Roger Federer) 310 ವಾರ ನಂ.1 ದಾಖಲೆಯನ್ನು ಮುರಿದಿದ್ದರು. ನೊವಾಕ್‌ ಜೋಕೋವಿಚ್‌ ಫೆಬ್ರವರಿ 3, 2020ರಿಂದ ನಂ.1 ಶ್ರೇಯಾಂಕದಿಂದ ಮುಂದುವರೆದಿದ್ದಾರೆ. 

ಆಸ್ಟ್ರೇಲಿಯನ್ ಓಪನ್‌ ಟೆನಿಸ್ ಟೂರ್ನಿಯಲ್ಲಿ ಜೋಕೋವಿಚ್ ಪಾಲ್ಗೊಳ್ಳುವುದು ಅನುಮಾನ: ಮುಂಬರುವ ಆಸ್ಟ್ರೇಲಿಯನ್ ಓಪನ್‌ ಟೆನಿಸ್ ಟೂರ್ನಿಯಲ್ಲಿ (Australian Open Tennis Tournament) ಪಾಲ್ಗೊಳ್ಳುವವರು ಎರಡು ಡೋಸ್ ಲಸಿಕೆ ಪೂರ್ಣಗೊಳಿಸಿರಬೇಕು ಎನ್ನುವ ಆಯೋಜಕರ ವಿರುದ್ದ ಸಿಡಿದೆದ್ದಿರುವ ನೊವಾಕ್ ಜೋಕೋವಿಚ್ ಹೊಸ ವರ್ಷಾರಂಭದಲ್ಲಿ ಆರಂಭವಾಗಲಿರುವ ಆಸ್ಟ್ರೇಲಿಯನ್‌ ಓಪನ್‌ ಟೆನಿಸ್ ಟೂರ್ನಿಯಲ್ಲಿ ಪಾಲ್ಗೊಳ್ಳುವುದು ಅನುಮಾನ ಎನಿಸಿದೆ. ಲಸಿಕೆ ಪಡೆಯುವುದು ವೈಯುಕ್ತಿಕ ಹಕ್ಕು. ಅದನ್ನು ಯಾರೊಬ್ಬರ ಮೇಲೂ ಹೇರಬಾರದು ಎನ್ನುವುದು ಜೋಕೋ ಅವರ ವಾದವಾಗಿದೆ. ಹೀಗಾಗಿ ಜೋಕೋವಿಚ್ 2022ರ ವರ್ಷಾರಂಭದಲ್ಲಿ ಆರಂಭವಾಗಲಿರುವ ಮೊದಲ ಗ್ರ್ಯಾನ್‌ ಸ್ಲಾಂ ಟೂರ್ನಿಯಲ್ಲಿ ಪಾಲ್ಗೊಳ್ಳುವುದು ಅನುಮಾನ ಎನಿಸಿದೆ. ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯು ಜನವರಿ 17ರಿಂದ ಆರಂಭವಾಗಲಿದೆ. 

ಪೊಲೀಸ್‌ ಹಾಕಿ: ಕ್ವಾರ್ಟರ್‌ ಪ್ರವೇಶಿಸಿದ ಕರ್ನಾಟಕ ತಂಡ

ಬೆಂಗಳೂರು: 70ನೇ ಅಖಿಲ ಭಾರತ ಪೊಲೀಸ್‌ ಹಾಕಿ ಪಂದ್ಯಾವಳಿಯಲ್ಲಿ ಆತಿಥೇಯ ಕರ್ನಾಟಕ ತಂಡ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ. ಮಂಗಳವಾರ ನಡೆದ ರಾಜ್ಯ ತಂಡ ಹಾಗೂ ಉತ್ತರ ಪ್ರದೇಶ ಪೊಲೀಸರ ನಡುವಿನ ‘ಡಿ’ ಗುಂಪಿನ ಕೊನೆಯ ಪಂದ್ಯ 1-1 ಗೋಲಿನಿಂದ ಡ್ರಾಗೊಂಡಿತು. 

Formula One: ಕಳೆದ 47 ವರ್ಷಗಳ ಇತಿಹಾಸದ ಅತ್ಯಂತ ನಿಕಟ ಚಾಂಪಿಯನ್ ಷಿಪ್ ರೇಸ್ ಗೆ ರೆಡಿಯಾಗಿದೆ ಎಫ್ 1

ಇದರೊಂದಿಗೆ ಕರ್ನಾಟಕ ಕ್ವಾರ್ಟರ್‌ಗೆ ಅರ್ಹತೆ ಗಳಿಸಿದ್ದು, ಬುಧವಾರ ಕ್ವಾರ್ಟರ್‌ನಲ್ಲಿ ಜಾರ್ಖಂಡ್‌ ಪೊಲೀಸರ ವಿರುದ್ಧ ಸೆಣಸಾಡಲಿದೆ. ಇತರೆ ಮೂರು ಕ್ವಾರ್ಟರ್‌ ಫೈನಲ್‌ ಪಂದ್ಯಗಳು ಸಿಆರ್‌ಪಿಎಫ್‌ ದೆಹಲಿ-ಜಲಂಧರ್‌, ಪಂಜಾಬ್‌ ಪೊಲೀಸ್‌-ಸಿಐಎಸ್‌ಎಫ್‌ ದೆಹಲಿ, ಒಡಿಶಾ ಪೊಲೀಸ್‌-ತಮಿಳುನಾಡು ಪೊಲೀಸ್‌ ತಂಡಗಳ ನಡುವೆ ನಡೆಯಲಿವೆ.

ಐಎಸ್‌ಎಲ್‌: ಬಿಎಫ್‌ಸಿಗಿಂದು ಹೈದ್ರಾಬಾದ್‌ ಎಫ್‌ಸಿ ಸವಾಲು

ಬಾಬೊಲಿಮ್‌: 8ನೇ ಆವೃತ್ತಿಯ ಐಎಸ್‌ಎಲ್‌ (Indian Super League) ಫುಟ್ಬಾಲ್‌ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಲು ವಿಫಲವಾಗುತ್ತಿರುವ ಮಾಜಿ ಚಾಂಪಿಯನ್‌ ಬೆಂಗಳೂರು ಎಫ್‌ಸಿ(ಬಿಎಫ್‌ಸಿ) (Bengaluru FC) ಬುಧವಾರ ಹೈದರಾಬಾದ್‌ ಎಫ್‌ಸಿ ಸವಾಲನ್ನು ಎದುರಿಸಲಿದೆ. 

ಆರಂಭಿಕ ಪಂದ್ಯದಲ್ಲಿ ನಾರ್ಥ್‌ಈಸ್ಟ್‌ ಯುನೈಟೆಡ್‌ ಎಫ್‌ಸಿ ವಿರುದ್ಧ 4-2 ಗೋಲುಗಳಿಂದ ಗೆದ್ದು ಶುಭಾರಂಭ ಮಾಡಿದ್ದ ಸುನಿಲ್‌ ಚೆಟ್ರಿ ಪಡೆ, ಬಳಿಕ 2 ಸೋಲು, 1 ಡ್ರಾ ಕಂಡಿದೆ. 4 ಪಂದ್ಯಗಳಿಂದ ಕೇವಲ 4 ಅಂಕ ಗಳಿಸಿರುವ ಬಿಎಫ್‌ಸಿ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಇನ್ನು, 3 ಪಂದ್ಯಗಳಲ್ಲಿ 4 ಅಂಕ ಸಂಪಾದಿಸಿರುವ ಹೈದರಾಬಾದ್‌ ಸಹ ಈ ಪಂದ್ಯದಲ್ಲಿ ಪುಟಿದೇಳಲು ಎದುರು ನೋಡುತ್ತಿದೆ.

Latest Videos
Follow Us:
Download App:
  • android
  • ios