Asianet Suvarna News Asianet Suvarna News

ಇಂದಿನಿಂದ ಡೇವಿಸ್‌ ಕಪ್‌: ಭಾರತಕ್ಕೆ ಫಿನ್ಲೆಂಡ್‌ ಸವಾಲು

* ಇಂದಿನಿಂದ ಭಾರತದ ಡೇವಿಸ್ ಕಪ್‌ ಸವಾಲು ಆರಂಭ

* ಫಿನ್ಲೆಂಡ್‌ ಸವಾಲನ್ನು ಎದುರಿಸಲಿರುವ ಭಾರತ ಡೇವಿಸ್ ಕಪ್‌ ತಂಡ

* ಪ್ರಜ್ಞೇಶ್‌-ರಾಮ್‌ಕುಮಾರ್ ಮೇಲೆ ಭಾರತದ ಹೆಚ್ಚಿನ ನಿರೀಕ್ಷೆ

Prajnesh Gunneswaran to open Davis Cup tie for India against Finland kvn
Author
Espoo, First Published Sep 17, 2021, 8:22 AM IST

ಎಸ್ಪೊ(ಸೆ.17‌): ಭಾರತ ತಂಡವು ಡೇವಿಸ್‌ ಕಪ್‌ ಟೆನಿಸ್‌ ಟೂರ್ನಿಯ ವಿಶ್ವ ಗುಂಪು-1ರಲ್ಲಿ ಫಿನ್ಲೆಂಡ್‌ ಸವಾಲನ್ನು ಎದುರಿಸಲು ಸಜ್ಜಾಗಿದೆ. ಮೊದಲ ದಿನದಲ್ಲಿ ಪ್ರಜ್ಞೇಶ್ ಗುಣೇಶ್ವರನ್‌ ಭಾರತದ ಅಭಿಯಾನ ಆರಂಭಿಸಲಿದ್ದಾರೆ.

ಶುಕ್ರವಾರದಿಂದ ಪಂದ್ಯಗಳಿಗೆ ಚಾಲನೆ ದೊರೆಯಲಿದ್ದು, ಸಿಂಗಲ್ಸ್‌ ವಿಭಾಗದಲ್ಲಿ ಭಾರತದ ಅನುಭವಿ ಟೆನಿಸಿಗರಾದ ಪ್ರಜ್ಞೇಶ್‌ ಗುಣೇಶ್ವರನ್‌ ಹಾಗೂ ರಾಮ್‌ಕುಮಾರ್‌ ರಾಮನಾಥನ್‌ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಇವರಿಬ್ಬರೂ ಶ್ರೇಷ್ಠ ಪ್ರದರ್ಶನ ನೀಡಿದರೆ, ಮುಂದಿನ ವರ್ಷ ನಡೆಯಲಿರುವ ಅರ್ಹತಾ ಪಂದ್ಯಗಳಿಗೆ ರಹದಾರಿ ಸಿಗಲಿದೆ.

US Open ವಿವಾಹ ವಾರ್ಷಿಕೋತ್ಸವಕ್ಕೆ ಪತ್ನಿಗೆ ಟ್ರೋಫಿ ಗಿಫ್ಟ್‌ ನೀಡಿದ ಡೇನಿಲ್‌!

ಮೊದಲ ದಿನ ಭಾರತದ 2ನೇ ಕ್ರಮಾಂಕದ ಆಟಗಾರನಾಗಿರುವ ರಾಮ್‌ಕುಮಾರ್‌, ಫಿನ್ಲೆಂಡ್‌ನ ಅಗ್ರ ಶ್ರೇಯಾಂಕಿತ ಎಮಿಲ್‌ ರುಸುವೊರಿ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಪ್ರಜ್ಞೇಶ್‌, ಒಟ್ಟೊವಿರ್ಟಾನೆನ್‌ ಸವಾಲನ್ನು ಎದುರಿಸುವ ಸಾಧ್ಯತೆಯಿದೆ.

ಡಬಲ್ಸ್‌ ಜೋಡಿ ಮೇಲೆ ಒತ್ತಡ:

ಲಿಯಾಂಡರ್‌ ಪೇಸ್‌ ಮತ್ತು ಮಹೇಶ್‌ ಭೂಪತಿ ಆಡುವ ವೇಳೆ ಡಬಲ್ಸ್‌ನಲ್ಲಿ ಭಾರತಕ್ಕೆ ಅಂಕ ಖಚಿತವಾಗಿತ್ತು. ಆದರೆ, ಇದೀಗ ಪರಿಸ್ಥಿತಿ ಬದಲಾಗಿದೆ. ಡಬಲ್ಸ್‌ನಲ್ಲಿ ಕಣಕ್ಕಿಳಿಯುತ್ತಿರುವ ರೋಹನ್‌ ಬೋಪಣ್ಣ ಹಾಗೂ ದಿವಿಜ್‌ ಶರಣ್‌ ಜೋಡಿ ಮೊದಲ ಪಂದ್ಯದಲ್ಲಿ ಹೆನ್ರಿ ಕೊಂಟಿನೆನ್‌ ಹಾಗೂ ಹ್ಯಾರಿ ಹೆಲಿವೊವಾರ ಸವಾಲನ್ನು ಎದುರಿಸಲಿದೆ. ಬೋಪಣ್ಣ- ದಿವಿಜ್‌ ಜೋಡಿ 2019ರ ಮಾರ್ಚ್‌ನಲ್ಲಿ ಇಟಲಿ ಎದರು ಕೇವಲ ಒಂದು ಪಂದ್ಯದಲ್ಲಿ ಮಾತ್ರ ಆಡಿದ್ದು, ಇವರ ಮೇಲೆ ಒತ್ತಡ ಹೆಚ್ಚಾಗಿದೆ.

ಬೋಪಣ್ಣರ ಡಬಲ್ಸ್‌ ಗೆಲುವುಗಳಲ್ಲಿ ಹೆಚ್ಚಿನ ಪೇಸ್‌ ಅಥವಾ ಸಾಕೇತ್‌ ಮೈನೇನಿ ಜತೆಯಲ್ಲಿ ಬಂದಿವೆ. ಹೀಗಾಗಿ ತಂಡದ ನಾಯಕ ರೋಹಿತ್‌ ರಾಜ್‌ಪಾಲ್‌ ಅವರು ರೋಹನ್‌ ಜೋಡಿಯಾಗಿ ದಿವಿಜ್‌ರನ್ನು ಕಣಕ್ಕೆ ಇಳಿಸುತ್ತಾರೋ ಅಥವಾ ತಂಡದ 5ನೇ ಸದಸ್ಯರಾಗಿರುವ ಸಾಕೇತ್‌ ಮೈನೇನಿಗೆ ಅವಕಾಶ ನೀಡುತ್ತಾರೋ ಕಾದುನೋಡಬೇಕಿದೆ.
 

Follow Us:
Download App:
  • android
  • ios