ಟೆನಿಸ್ ದಿಗ್ಗಜ ರೋಜರ್ ಫೆಡರರ್ ಅನುಕರಣೆ ಮಾಡಿದ ಪುಟ್ಟ ಬಾಲಕನಿಗೆ ಭಾರಿ ಮೆಚ್ಚುುಗೆ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಮದಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಭಾರಿ ವೈರಲ್ ಆಗಿದೆ.

ಬಸೆಲ್(ಡಿ.08): ಟೆನಿಸ್ ದಿಗ್ಗಜ ಸ್ವಿಟ್ಜರ್‌ಲೆಂಡ್‌ನ ರೋಜರ್ ಫೆಡರರ್ ಕೋಟ್ಯಾಂತರ ಟೆನಿಸಿಗರ ರೋಲ್ ಮಾಡೆಲ್. 20 ಗ್ರ್ಯಾಂಡ್ ಸ್ಲಾಂ ಪ್ರಶಸ್ತಿ ಗೆದ್ದಿರುವ ಫೆಡರರ್ ಟೆನಿಸ್ ಕ್ಷೇತ್ರದಲ್ಲಿ 21 ವರ್ಷ ಪೂರೈಸಿದ್ದಾರೆ. ಸುದೀರ್ಘ ವರ್ಷದಿಂದ ಟೆನಿಸ್ ದಿಗ್ಗಜನಾಗಿ ಮೆರೆಯುತ್ತಿರುವ ರೋಜರ್ ಫಡೆರರ್‌ಗೆ ವಿಶ್ವ ಟೆನಿಸ್ ಅಸೋಸಿಯೇಶನ್(ATP) ಪುಟ್ಟ ಬಾಲಕನ ವಿಡಿಯೋ ಶೇರ್ ಮಾಡಿ ಅಭಿನಂದಿಸಿದೆ. 

ಇದನ್ನೂ ಓದಿ: ಟೆನಿಸ್ ದಿಗ್ಗಜ ರೋಜರ್ ಫೆಡರರ್ ಮಡಿಲಿಗೆ 103ನೇ ಪ್ರಶಸ್ತಿ!

ಟೆನಿಸ್ ಜಗತ್ತಿನಲ್ಲಿ 21 ವರ್ಷ ಪೂರೈಸಿದ ಹಿನ್ನಲೆಯಲ್ಲಿ ATP ರೋಜರ್ ಫೆಡರರ್‌ಗೆ ಅಭಿನಂದನೆ ಸಲ್ಲಿಸಿದೆ. ಈ ವೇಳೆ ಪುಟ್ಟ ಬಾಲಕ ಫೆಡರರ್ ಅನುಕರಣೆ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದೆ. ಫೆಡರರ್ ಟೆನಿಸ್ ಪಂದ್ಯದ ವಿಡಿಯೋವನ್ನು ನೋಡುತ್ತಾ, ತಾನು ಕೂಡ ಅದೇ ರೀತಿ ಅನುಕರಣೆ ಮಾಡುತ್ತಿರುವ ವಿಡಿಯೋವನ್ನು ATP ಹಂಚಿಕೊಂಡಿದೆ.

Scroll to load tweet…

ಇದನ್ನೂ ಓದಿ: ಪ್ಲೇಯರ್ಸ್ ಲಾಂಜ್‌ಗೆ ತೆರಳಲು ಫೆಡರರ್‌ಗೆ ಪ್ರವೇಶ ನಿರಾಕರಣೆ-ಮುಂದೇನಾಯ್ತು?

ATP ಹಂಚಿಕೊಂಡಿರುವ ವಿಡಿಯೋಗೆ ಟೆನಿಸ್ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿಕ್ಕ ಮಕ್ಕಳಿಂದ ಹಿಡಿದು ವೃತ್ತಿಪರ ಟೆನಿಸ್ ಪಟುಗಳು, ಉದಯೋನ್ಮುಖ ಕ್ರೀಡಾಪಟುಗಳಿಗೂ ಫೆಡರರ್ ಮಾದರಿಯಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ವ್ಯಕ್ತವಾಗಿದೆ.


Scroll to load tweet…
Scroll to load tweet…