‘ಶೂಟರ್ ದಾದಿ’ ಖ್ಯಾತಿಯ ಚಂದ್ರೋ ಕೋವಿಡ್‌ಗೆ ಬಲಿ!
ಶೂಟರ್ ದಾದಿ ಖ್ಯಾತಿಯ ಚಂದ್ರೋ ತೋಮರ್ ಕೋವಿಡ್ 19 ಹೆಮ್ಮಾರಿಗೆ ಬಲಿಯಾಗಿದ್ದಾರೆ. ಖ್ಯಾತ ಬಾಲಿವುಡ್ ನಟಿ ತಾಪ್ಸಿ ಪನ್ನು ಟ್ವೀಟ್ ಮೂಲಕ ಕಂಬನಿ ಮಿಡಿದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಮೇ.01): 60ನೇ ವಯಸ್ಸಿನ ನಂತರ ಮೊದಲ ಬಾರಿಗೆ ಗನ್ ಹಿಡಿದು, ಹಲವಾರು ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪದಕ ಗೆದ್ದ ‘ಶೂಟರ್ ದಾದಿ’ ಖ್ಯಾತಿಯ ಚಂದ್ರೋ ತೋಮರ್ ಶುಕ್ರವಾರ ಕೊರೋನಾ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು.
ಉತ್ತರ ಪ್ರದೇಶದ ಬಾಘ್‌ಪತ್ ಗ್ರಾಮದ ಚಂದ್ರೋಗೆ ಕೆಲ ದಿನಗಳ ಹಿಂದೆ ಉಸಿರಾಟದ ಸಮಸ್ಯೆ ಎದುರಾದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೋವಿಡ್ ಪರೀಕ್ಷೆ ನಡೆಸಿದ ವೇಳೆ ಅವರಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಚಂದ್ರೋ ಹಾಗೂ ಅವರ ಜೊತೆಗಾರ್ತಿ ಪ್ರಕಾಶಿ ತೋಮರ್‌ರ ಜೀವನಾಧಾರಿತ ಸಿನಿಮಾ ಬಾಲಿವುಡ್‌ನಲ್ಲಿ ತೆರೆಕಂಡು ಜನಪ್ರಿಯಗೊಂಡಿತ್ತು. 2019ರಲ್ಲಿ ತೆರೆಕಂಡ 'ಶಾಂದ್ ಕಿ ಅಂಖ್' ಚಿತ್ರದಲ್ಲಿ ಶಾರ್ಪ್ ಶೂಟರ್ ಪಾತ್ರ ನಿಭಾಯಿಸಿದ್ದ ತಾಪ್ಸಿ ಪನ್ನು ಟ್ವೀಟ್ ಮೂಲಕ ತಮ್ಮ ನುಡಿನಮನ ಅರ್ಪಿಸಿದ್ದಾರೆ.
ಗಂಭೀರ್ ಉಚಿತ ಔಷಧಿ ಘೋಷಣೆಗೆ ದೆಹಲಿ ಹೈಕೋರ್ಟ್ ಗರಂ; ಇದು ಹೇಗೆ ಸಾಧ್ಯ?
ನೀವು ಎಂದೆಂದಿಗೂ ಸ್ಪೂರ್ತಿದಾಯಕವಾಗಿರುವಿರಿ. ಎಲ್ಲ ಬಾಲಕಿಯರ ಪಾಲಿಗೆ ನೀವು ಎಂದೆಂದಿಗೂ ಬದುಕುವ ಭರವಸೆಯಾಗಿದ್ದೀರ. ನನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪನ್ನು ಟ್ವೀಟ್ ಮಾಡಿದ್ದಾರೆ.
ಇನ್ನು ಚಂದ್ರೋ ತೋಮರ್ ಪಾತ್ರ ನಿರ್ವಹಿಸಿದ್ದ ಭೂಮಿ ಪೆಡ್ನೆಕರ್ ನಿಮ್ಮನ್ನು ಎಂದೆಂದಿಗೂ ಮಿಸ್ ಮಾಡಿಕೊಂಡೆವು ಎಂದು ಟ್ವೀಟ್ ಮಾಡಿದ್ದಾರೆ.
'ಶಾಂದ್ ಕಿ ಅಂಖ್' ಚಿತ್ರವು ದೇಶದ ಅತ್ಯಂತ ಹಿರಿಯ ಶಾರ್ಪ್‌ಶೂಟರ್‌ಗಳಾದ ಚಂದ್ರೋ ತೋಮರ್ ಹಾಗೂ ಪ್ರಕಾಶಿ ತೋಮರ್ ಜೀವನಾಧಾರಿತ ಚಿತ್ರವಾಗಿದೆ. ಈ ಜೋಡಿ 30ಕ್ಕೂ ಅಧಿಕ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಂಡು ಪದಕ ಜಯಿಸಿತ್ತು. ಈ ಚಿತ್ರದಲ್ಲಿ ತಾಪ್ಸಿ ಪನ್ನು ಪ್ರಕಾಶಿ ತೋಮರ್ ಪಾತ್ರವನ್ನು ನಿಭಾಯಿಸಿದ್ದರೆ, ಭೂಮಿ, ಚಂದ್ರೋ ತೋಮರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
"