ಕೊರೋನಾ ವೈರಸ್ ದೆಹಲಿಯಲ್ಲಿ ಸುನಾಮಿ ಎಬ್ಬಿಸಿದೆ. ಲಸಿಕೆ ಕೊರತೆ,ಔಷಧಿ ಕೊರತೆ ಸೇರಿದಂತೆ ಹಲವು ಸಮಸ್ಯೆಗಳು ಎದ್ದು ಕಾಣುತ್ತಿದೆ. ಇದರ ನಡುವೆ ಪೂರ್ವ ದೆಹಲಿ ಜನತಗೆ ಉಚಿತ ಔಷಧಿ ನೀಡುವುದಾಗಿ ಬಿಜೆಪಿ ಸಂಸದ ಗೌತಮ್ ಗಂಭೀರ್ ಘೋಷಿಸಿದ್ದರು. ಇದೀಗ ಗಂಭೀರ್ ನಡೆಯನ್ನು ಹೈಕೋರ್ಟ್ ತೀವ್ರವಾಗಿ ಪ್ರಶ್ನಿಸಿದೆ
ನವದೆಹಲಿ(ಏ.30): ದೆಹಲಿಯಲ್ಲಿ ಔಷಧಿಗಳಿಗೆ ಬರ ಇರುವುದಾಗ ಪೂರ್ವ ದೆಹಲಿ ಜನತೆಗೆ ಉಚಿತ ಔಷಧಿ ವಿತರಣೆ ಹೇಗೆ? ಗೌತಮ್ ಗಂಭೀರ್ ಔಷಧಿ ವಿತರಣೆ ಅಥವಾ ಶೇಖರಣೆ ಪರವಾನಗೆ ಪಡೆದ ಡೀಲರೇ? ಹೀಗೆ ದೆಹಲಿ ಹೈಕೋರ್ಟ್ ಬಿಜೆಪಿ ಸಂಸದ ಗೌತಮ್ ಗಂಭೀರ್ ನಿರ್ಧಾರಕ್ಕೆ ಒಂದರ ಮೇಲೊಂದರಂತೆ ಪ್ರಶ್ನೆಗಳನ್ನು ಕೇಳಿದೆ.
ಗೌತಮ್ ಗಂಭೀರ್ ಕ್ಯಾಂಟೀನ್ ಆರಂಭ; ಬಡವರಿಗೆ 1 ರೂಪಾಯಿಗೆ ಊಟ!
ಇತ್ತೀಚೆಗೆ ಗೌತಮ್ ಗಂಭೀರ್ ತಮ್ಮ ಪೂರ್ವ ದೆಹಲಿ ಕ್ಷೇತ್ರದ ಜನತೆಗೆ ಕೋವಿಡ್ ಔಷಧಿಗಳನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದ್ದರು. ಟ್ವಿಟರ್ ಮೂಲಕ ವಿಚಾರ ಬಹಿರಂಗ ಪಡಿಸಿದ್ದರು. ಇದರ ಬೆನ್ನಲ್ಲೇ ದೆಹಲಿ ಹೈಕೋರ್ಟ್, ಕೊರೋನಾ ನಿಯಂತ್ರಣ ಹಾಗೂ ಪರಿಸ್ಥಿತಿಗತಿಗಳ ಕುರಿತು ವಿಚಾರಣೆ ನಡೆಸಿದೆ. ಇಷ್ಟೇ ಅಲ್ಲ ಗಂಭೀರ್ ಉಚಿತ ಔಷಧಿ ಘೋಷಣೆ ಕುರಿತು ಗರಂ ಆಗಿದೆ.
ಗಂಭೀರ್ ಔಷಧಿ ಶೇಕರಿಸಿಡಲು , ವಿತರಣೆ ಮಾಡಲು ಪರವಾನೆಗೆ ಪಡೆದಿದ್ದಾರೋ? ಪೂರ್ವ ದೆಹಲಿ ಜನತೆಗೆ ಉಚಿತ ಔಷಧಿ ನೀಡಲು ಔಷಧಿ ಎಲ್ಲಿಂದ ತರುತ್ತಾರೆ? ಇದು ಹೇಗೆ ಸಾಧ್ಯ? ಎಂದು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ವಿಪಿನ್ ಸಂಗಿ ಹಾಗೂ ರೇಖಾ ಪಲ್ಲಿ ಅವರ ವಿಭಾಗೀಯ ಪೀಠ ಪ್ರಶ್ನಿಸಿದೆ.
ಗಂಭೀರ್ ಬೇಜಾವಾಬ್ದಾರಿ ನಡೆ ಎಂದು ದೆಹಲಿ ಸರ್ಕಾರ ಪರ ವಕೀಲ ರಾಹುಲ್ ಮೆಹ್ತಾ ಹೇಳಿದ್ದಾರೆ. ಇದೀಗ ಗಂಭೀರ್ ನಡೆಗೆ ಕೋರ್ಟ್ ಗರಂ ಆದ ಬೆನ್ನಲ್ಲೇ ಆಪ್ ಸರ್ಕಾರದ ವಿರುದ್ಧ ಪರ ವಿರೋಧಗಳು ವ್ಯಕ್ತವಾಗಿದೆ. ದೆಹಲಿ ಸರ್ಕಾರ ತನ್ನ ಜನಪ್ರಿಯತೆಗೆ ಅಡ್ಡಿಯಾಗುತ್ತಿರುವ ಗಂಭೀರ್ ಹಣಿಯಲು ಈ ರೀತಿಯ ಮಾರ್ಗ ಬಳಸುತ್ತಿದ ಅನ್ನೋ ಟೀಕೆಗಳು ವ್ಯಕ್ತವಾಗಿದೆ.
