ನವದೆಹಲಿ(ಮೇ.04): ಒತ್ತಡಕ್ಕೆ ಮಣಿದು ಸಾಮಾಜಿಕ ತಾಣಗಳಲ್ಲಿ ರಾತ್ರೋರಾತ್ರಿ ಹೀರೋಗಳಾದ ಕ್ರೀಡಾಪಟುಗಳನ್ನು ಸಾಯ್‌ ಕೇಂದ್ರಗಳಲ್ಲಿ ಆಯ್ಕೆ ಟ್ರಯಲ್ಸ್‌ಗೆ ಆಹ್ವಾನಿಸಲಾಯಿತು ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ತಿಳಿಸಿದ್ದಾರೆ. 

‘ದ.ಕನ್ನಡದ ಕಂಬಳ ಓಟಗಾರ ಶ್ರೀನಿವಾಸ್‌ ಗೌಡ ಹಾಗೂ ಮಧ್ಯಪ್ರದೇಶದ ರಾಮೇಶ್ವರ್‌ ಗುಜ್ಜಾರ್‌, 100 ಮೀ. ಓಟವನ್ನು 10 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸಿದ್ದಾರೆ ಎಂದು ಸಾಮಾಜಿಕ ತಾಣಗಳಲ್ಲಿ ವಿಡಿಯೋಗಳು ವೈರಲ್‌ ಆಗಿದ್ದವು. ಇಂತಹ ಕ್ರೀಡಾಪಟುಗಳ ಮೇಲೆ ಗಮನ ಹರಿಸುವಂತೆ ಪ್ರತಿಯೊಬ್ಬರೂ ಒತ್ತಾಯಿಸಿದರು. ಅವರ ಒತ್ತಡಕ್ಕೆ ಮಣಿದು, ಆಯ್ಕೆ ಟ್ರಯಲ್ಸ್‌ಗೆ ಕರೆದೆವು’ ಎಂದು ರಿಜಿಜು ಹೇಳಿದ್ದಾರೆ. 

ಓಟದ ಮೈದಾನದಲ್ಲಿ ಗುರ್ಜಾರ್ ಘರ್ಜನೆ: ರಿಜಿಜು ಅಂದರು ಟ್ರೈನಿಂಗ್ ಕೊಡ್ತೇನೆ!

‘ಸಾಮಾಜಿಕ ತಾಣಗಳಲ್ಲಿ ಪ್ರತಿಕ್ರಿಯಿಸುವವರಿಗೆ ಕ್ರೀಡೆಯ ಬಗ್ಗೆ ಜ್ಞಾನವಿರುವುದಿಲ್ಲ. ಕ್ರೀಡಾಪಟುಗಳನ್ನು ಸಿದ್ಧಪಡಿಸುವ ಬಗ್ಗೆ ಮಾಹಿತಿ ಕೊರತೆ ಇರುತ್ತದೆ. ಹಾಗೆಂದು ನಾವು ನಿರ್ಲಕ್ಷ್ಯ ತೋರಿದರೆ ಕ್ರೀಡಾ ಸಚಿವರು ಏನು ಮಾಡುತ್ತಿಲ್ಲ ಎನ್ನುತ್ತಾರೆ’ ಎಂದು ರಿಜಿಜು ಬೇಸರ ವ್ಯಕ್ತಪಡಿಸಿದ್ದಾರೆ.

ದಾಖಲೆಗಳ ಮೇಲೆ ದಾಖಲೆ ಬರೆದ ಕಂಬಳದ ಉಸೇನ್‌ ಬೋಲ್ಟ್‌ ಶ್ರೀನಿ

ಕಳೆದ ವರ್ಷ ಮಧ್ಯಪ್ರದೇಶದ ರಾಮೇಶ್ವರ್‌ ಗುಜ್ಜಾರ್ ಓಡುತ್ತಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಉಸೇನ್ ಬೋಲ್ಟ್‌ಗಿಂತ ವೇಗವಾಗಿ ಓಡುತ್ತಿರುವ ಭಾರತದ ಯುವಕ ಎಂದು ಬರೆದುಕೊಂಡಿದ್ದರು. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇನ್ನು ಕಂಬಳ ಜಾಕಿ 28 ವರ್ಷದ ಶ್ರೀನಿವಾಸ್ ಗೌಡ 100 ಮೀಟರ್ ಕಂಬಳ ರೇಸ್‌ನ್ನು ಕೇವಲ 9.55  ಸೆಕೆಂಡ್‌ಗಳಲ್ಲಿ ತಲುಪಿ ಸಂಚಲನ ಮೂಡಿಸಿದ್ದರು.