ಕ್ರೀಡಾಪಟುಗಳ ತರಬೇತಿ ಶಿಬಿರ ಆರಂಭ ದಿನಾಂಕ ಫಿಕ್ಸ್ ಮಾಡಿದ ಕಿರಣ್ ರಿಜಿಜು!

ಕೊರೋನಾ ವೈರಸ್ ಕಾರಣ ಎಲ್ಲಾ ಕ್ರೀಡಾಕೂಟಗಳು ಸ್ಥಗಿತಗೊಂಡಿದೆ. ಇತ್ತ ತರಬೇತಿ ಶಿಬಿರ, ಒಲಿಂಪಿಕ್ಸ್ ಕ್ರೀಡಾಕೂಟದ ಅಭ್ಯಾಸ ಸೇರಿದಂತೆ ಎಲ್ಲವೂ ಸ್ಥಗಿತಗೊಂಡಿದೆ. ಭಾರತದಲ್ಲಿ ಲಾಕ್‌ಡೌನ್ ಮೇ.17ರ ವರೆಗೆ ವಿಸ್ತರಿಸಲಾಗಿದೆ. ಇದರ ಬೆನ್ನಲ್ಲೇ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಒಲಿಂಪಿಕ್ಸ್ ಅಭ್ಯಾಸ ಶಿಬಿರ ಪುನರ್ ಆರಂಭಕ್ಕೆ ದಿನಾಂಕ ನಿಗದಿ ಮಾಡಿದ್ದಾರೆ. 
 

Sports camp will resume by end of this month says Sports Minister Kiren Rijiju

ನವದೆಹಲಿ(ಮೇ.03): ಕೊರೋನಾ ವೈರಸ್ ಲಾಕ್‌ಡೌನ್ 3ನೇ ಹಂತಕ್ಕೆ ವಿಸ್ತರಣೆಯಾಗಿದೆ. ಆದರೆ ಕೆಲವು ಸಡಿಲಿಕೆ ನೀಡಲಾಗಿದೆ. ಇತ್ತ ಕೊರೋನಾ ವೈರಸ್ ಆರ್ಭಟ ಆರಂಭಿಸುತ್ತಿದ್ದಂತೆ ಭಾರತದಲ್ಲಿ ಮಾತ್ರವಲ್ಲ ವಿಶ್ವದಲ್ಲಿನ ಎಲ್ಲಾ ಕ್ರೀಡಾಕೂಟಗಳು ರದ್ದಾಗಿದೆ. ಇತ್ತ ಸಾಯಿ ಕೇಂದ್ರದಲ್ಲಿನ ತರಬೇತಿ ಶಿಬರಗಳೂ ಕೂಡ ರದ್ದು ಮಾಡಲಾಗಿತ್ತು. ಇದೀಗ ಮೇ. 17ಕ್ಕೆ 3ನೇ ಹಂತದ ಲಾಕ್‌ಡೌನ್ ಅಂತ್ಯವಾಗುತ್ತಿದೆ. ಹೀಗಾಗಿ ಮೇ. ಅಂತ್ಯದಿಂದ ಒಲಿಂಪಿಕ್ಸ್ ತರಬೇತಿ ಶಿಬರಗಳು ಆರಂಭಿಸಲು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.

ಫೆಡ್ ಕಪ್ ಹಾರ್ಟ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಸಾನಿಯಾ, ಮೊದಲ ಭಾರತೀಯ ಅನ್ನೋ ಹೆಗ್ಗಳಿಕೆ!.

ಲಾಕ್‌ಡೌನ್ ತೆರವಾದ ಬಳಿಕ ಅಂದರೆ ಮೇ ಅಂತ್ಯದಲ್ಲಿ ಮೊದಲ ಹಂತದಲ್ಲಿ ಅಭ್ಯಾಸ ಶಿಬಿರ ಆರಂಭಿಸಲಾಗುವುದು. ಬೆಂಗಳೂರು ಹಾಗೂ ಪಟಿಯಾಲದ ಸಾಯಿ ಸೆಂಟರ್‌ನಲ್ಲಿ ಮೊದಲ ಹಂತದ ಅಭ್ಯಾಸ ಶಿಬಿರಗಳು ಆರಂಭವಾಗಲಿದೆ ಎಂದು ಕಿರಣ್ ರಿಜಿಜು ಹೇಳಿದ್ದಾರೆ. ಒಲಿಂಪಿಕ್ಸ್ ಅರ್ಹತೆ ಪಡೆದ ಕ್ರೀಡಾಪಟುಗಳಿಗೆ ಆರಂಭಿಕ ಹಂತದಲ್ಲಿ ಅಭ್ಯಾಸ ಶಿಬಿರ ಆಯೋಜಿಸಲಾಗುವುದು ಎಂದಿದ್ದಾರೆ.

ಎಲ್ಲವೂ ಕೂಡ ಕೊರೋನಾ ವೈರಸ್ ನಿಯಂತ್ರಣದಲ್ಲಿ ಬಂದರೆ ಮಾತ್ರ ಸಾಧ್ಯ.  ಸದ್ಯದ ಪರಿಸ್ಥಿತಿಯಲ್ಲಿ ಭಾರತದಲ್ಲಿ ನಿಧಾನವಾಗಿ ಕೋವಿಡ್ 19 ನಿಯಂತ್ರಣಕ್ಕೆ ಬರುತ್ತಿದೆ. ಹೀಗಾಗಿ ಮೇ ಅಂತ್ಯಕ್ಕೆ ಎಲ್ಲವೂ ಸರಿಯಾಗಲಿದೆ. ಆದರೆ ಸಾಮಾಜಿಕ ಅಂತರ ಸೇರಿದಂತೆ ಹಲವು ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುವ ಮೂಲಕ ತರಬೇತಿ ಶಿಬಿರಗಳನ್ನು ಆರಂಭಿಸಲಾಗುವುದು ಎಂದು ಕಿರಣ್ ರಿಜಿಜು ಹೇಳಿದ್ದಾರೆ.

Latest Videos
Follow Us:
Download App:
  • android
  • ios