ಜಗತ್ತಿನ ಮೊಟ್ಟಮೊದಲ ಆನ್‌ಲೈನ್ ಅಂತಾರಾಷ್ಟ್ರೀಯ ಶೂಟಿಂಗ್ ಸ್ಪರ್ಧೆಗೆ ಕ್ಷಣಗಣನೆ ಆರಂಭ
ಕೊರೋನಾ ವೈರಸ್ ನಿಂದಾಗಿ ಕ್ರೀಡಾ ಚಟುವಟಿಕೆಗಳಲ್ಲಿ ಹೊಸ ಪ್ರಯೋಗಗಳು ಆರಂಭವಾಗಿವೆ. ಇದರ ಭಾಗವಾಗಿ ಇದೀಗ ಜಗತ್ತಿನ ಮೊಟ್ಟಮೊದಲ ಆನ್‌ಲೈನ್ ಶೂಟಿಂಗ್ ಚಾಂಪಿಯನ್‌ಶಿಪ್‌ಗೆ ವೇದಿಕೆ ಸಜ್ಜಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಏ.12): ಕೊರೋನಾದಿಂದಾಗಿ ಲಾಕ್‌ಡೌನ್ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ಕ್ರೀಡಾ ಚಟುವಟಿಕೆಗಳು ಸ್ಥಗಿತಗೊಂಡಿವೆ. ಆದರೆ ಆನ್‌ಲೈನ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಶೂಟಿಂಗ್ ಚಾಂಪಿಯನ್‌ಶಿಪ್ ನಡೆಸಲು ಭಾರತ ಶೂಟಿಂಗ್ ಸಂಸ್ಥೆ ಮುಂದಾಗಿದೆ.
ಏಪ್ರಿಲ್ 15ರಿಂದ ಶೂಟಿಂಗ್ ಚಾಂಪಿಯನ್‌ಶಿಪ್ ನಡೆಯಲಿದೆ. ಆನ್‌ಲೈನ್‌ನಲ್ಲಿ ಶೂಟಿಂಗ್ ಕೂಟ ನಡೆಯುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ಕೂಟದಲ್ಲಿ ಭಾಗವಹಿಸುವ ಶೂಟರ್‌ಗಳು ಮನೆಯಲ್ಲಿಯೇ ಶೂಟಿಂಗ್ ರೇಂಜ್ ನಿರ್ಮಿಸಿಕೊಳ್ಳಬೇಕು. ಇಂಟರ್‌ನೆಟ್ ಕನೆಕ್ಷನ್ ಹೊಂದಿರುವ ಮೊಬೈಲ್ ಅಥವಾ ಲ್ಯಾಪ್‌ಟಾಪ್‌ನ್ನು ಶೂಟರ್‌ಗಳ ಚಿತ್ರೀಕರಣಕ್ಕೆ ಅಳವಡಿಸಬೇಕಿದೆ.
ಕೊರೋನಾ ವೈರಸ್ ಕಾಟ: ನವದೆಹಲಿ ಶೂಟಿಂಗ್ ವಿಶ್ವಕಪ್ ಟೂರ್ನಿ ರದ್ದು?
ಆನ್‌ಲೈನ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತದ ಪರ ಮನು ಭಾಕರ್, ಸಜೀವ್ ರಜಪೂತ್,ವಿವ್ಯಾನ್ಶ್ ಸಿಂಗ್ ಪನ್ವಾರ್, ಸ್ಪೇನ್‌ನ ನಿಕೋಲಸ್, ಸ್ಕಾಟ್ಲೆಂಡ್‌ನ ಎಮಿಲಾ, ಫಲ್ಕನರ್, ಇಸೊಬೆಲ್, ಲುಸಿ ಇವಾನ್ಸ್ ಸೇರಿದಂತೆ 50ಕ್ಕೂ ಹೆಚ್ಚು ಶೂಟರ್‌ಗಳು ಭಾಗವಹಿಸಲಿದ್ದಾರೆ. ಸಂಜೆ 4 ರಿಂದ ಸ್ಪರ್ಧೆಗಳು ಆರಂಭವಾಗಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.
ಜಗತ್ತಿನ ಮೊಟ್ಟ ಮೊದಲ ಆನ್‌ಲೈನ್ ಶೂಟಿಂಗ್ ವಿಡಿಯೋ ನೇರ ಪ್ರಸಾರ indianshooting.com ಎನ್ನುವ ಫೇಸ್‌ಬುಕ್ ಪೇಜ್‌ನಲ್ಲಿ ಪ್ರವಾರವಾಗಲಿದೆ. ಭಾರತದ ಜತೆಗೆ ಹಂಗೇರಿ, ಸ್ಕಾಟ್ಲೆಂಡ್, ಸ್ಪೇನ್ ದೇಶದ ಶೂಟರ್‌ಗಳು ಸ್ಪರ್ಧೆಯಲ್ಲಿ ಭಾಗವಹಿಸುವುದನ್ನು ಖಚಿತಪಡಿಸಿವೆ.
ಕೊರೋನಾ ವೈರಸ್ ಆತಂಕ; ಭಾರತೀಯ ಕ್ರೀಡೆಗೆ ತಟ್ಟಿದ ಬಿಸಿ!
ಕೊರೋನಾ ವೈರಸ್ ಹಲವು ಕ್ರೀಡಾ ಟೂರ್ನಿಗಳನ್ನು ಬಲಿಪಡೆದಿದೆ. ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ 2021ಕ್ಕೆ ಮುಂದೂಡಲ್ಪಟ್ಟಿದೆ. ಭಾರತದಲ್ಲಿ ನಡೆಯಬೇಕಿದ್ದ ಫಿಫಾ ಅಂಡರ್ 17 ಮಹಿಳಾ ವಿಶ್ವಕಪ್ ಫುಟ್ಬಾಲ್ ಟೂರ್ನಿ ಕೂಡಾ ಮುಂದೂಡಲ್ಪಟ್ಟಿದೆ. ಇನ್ನು 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಕೂಡಾ ನಡೆಯುವುದು ಅನುಮಾನ ಎನಿಸಿದೆ. ಜಗತ್ತಿನಾದ್ಯಂತ ಕ್ರೀಡಾ ಚಟುವಟಿಗಳು ಸಂಪೂರ್ಣ ಸ್ತಬ್ಧವಾಗಿವೆ.
"